ETV Bharat / state

ಬೆಂಗಳೂರಿಗೆ ಸೋಪು, ಬೇಳೆ ಪ್ಯಾಕೆಟ್​ಗಳಲ್ಲಿ ಡ್ರಗ್ಸ್ ಸಾಗಣೆ: ₹24 ಕೋಟಿಯ ಎಂಡಿಎಂಎ ವಶ, ವಿದೇಶಿ ಮಹಿಳೆ ಅರೆಸ್ಟ್ - BENGALURU DRUGS ROCKET

ಬೆಂಗಳೂರಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ 24 ಕೋಟಿ ಮೌಲ್ಯದ ನಿಷೇಧಿತ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಡ್ರಗ್ಸ್ ದಂಧೆ ನಡೆಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ.

ಬೆಂಗಳೂರಿಗೆ ಸೋಪು, ಬೇಳೆ ಪಾಕೆಟ್​ಗಳಲ್ಲಿ ಡ್ರಗ್ಸ್ ಸಾಗಾಟ
ಬೆಂಗಳೂರಿಗೆ ಸೋಪು, ಬೇಳೆ ಪಾಕೆಟ್​ಗಳಲ್ಲಿ ಡ್ರಗ್ಸ್ ಸಾಗಾಟ (ETV Bharat)
author img

By ETV Bharat Karnataka Team

Published : Dec 17, 2024, 3:24 PM IST

ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿದ್ದಂತೆ ರಾಜಧಾನಿಯಲ್ಲಿ ಮಾದಕ ವಸ್ತುಗಳ ವಾಸನೆ ಜೋರಾಗಿದೆ. ಡ್ರಗ್ಸ್ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಮೊದಲ ಬಾರಿ 24 ಕೋಟಿ ಮೌಲ್ಯದ ನಿಷೇಧಿತ ಎಂಡಿಎಂಎ ಜಪ್ತಿ ಮಾಡಿಕೊಂಡಿದ್ದಾರೆ.

ಇನ್ನು ಪ್ರಕರಣ ಸಂಬಂಧ ನೈಜೀರಿಯಾ ಮೂಲದ ಮಹಿಳೆ ರೋಜ್ಲೈಮ್ ಎಂಬುವರನ್ನು ಬಂಧಿಸಲಾಗಿದೆ. ನೈಜೀರಿಯಾ ಮೂಲದ ಈಕೆ ಕೆಲ ವರ್ಷಗಳಿಂದ ಕೆ. ಆರ್. ಪುರಂನ ಟಿ. ಸಿ. ಪಾಳ್ಯದಲ್ಲಿ ನೆಲೆಸಿದ್ದರು. ವೀಸಾ ಅವಧಿ ಗಡುವು ಮುಗಿದರೂ ನಗರದಲ್ಲಿ ವಾಸ್ತವ್ಯ ಹೂಡಿದ್ದಳು. ಜೀವನಕ್ಕಾಗಿ ಪ್ರಾವಿಷನ್ ಸ್ಟೋರ್ ಅಂಗಡಿ ಇಟ್ಟುಕೊಂಡಿದ್ದ ಆರೋಪಿತೆಯು ಮೋಜಿನ ಜೀವನ ಮಾಡಲು ಹಾಗೂ ಹೆಚ್ಚಿನ ಹಣ ಸಂಪಾದಿಸಲು ವಾಮಮಾರ್ಗ ಕಂಡುಕೊಂಡಿದ್ದಳು. ವ್ಯವಸ್ಥಿತ ಜಾಲದ ಮೂಲಕ ಡ್ರಗ್ಸ್ ದಂಧೆಕೋರರನ್ನು ಸಂಪರ್ಕಿಸುತ್ತಿದ್ದ ಆರೋಪಿಯು, 24 ಕೋಟಿ ಮೌಲ್ಯದ ನಿಷೇಧಿತ 12 ಕೆಜಿ ಎಂಡಿಎಂಎ ಕ್ರಿಸ್ಟಲ್ ತರಿಸಿಕೊಂಡು ಸಂಗ್ರಹಿಸಿದ್ದಳು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕವಸ್ತು ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ 70 ಸಿಮ್​​ಗಳನ್ನು ಜಪ್ತಿ ಮಾಡಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತ ದಯಾನಂದ (ETV Bharat)
ವಶಪಡಿಸಿಕೊಂಡಿರುವ ಸಿಮ್​ ಕಾರ್ಡ್​ಗಳು
ವಶಪಡಿಸಿಕೊಂಡಿರುವ ಸಿಮ್​ ಕಾರ್ಡ್​ಗಳು (ETV Bharat)

ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯು ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳ ವಿರುದ್ಧ ಕೆ. ಆರ್‌. ಪುರಂ ಠಾಣೆಯಲ್ಲಿ ಎನ್​​ಡಿಪಿಎಸ್ ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಆರೋಪಿ
ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಆರೋಪಿ (ETV Bharat)

ಸೋಪು ಹಾಗೂ ಬೇಳೆ ಪ್ಯಾಕೆಟ್​ಗಳಲ್ಲಿ ಡ್ರಗ್ಸ್: ಮುಂಬೈನಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸುತ್ತಿದ್ದ ಮಹಿಳಾ ಆರೋಪಿಗಳು, ಯಾರಿಗೂ ಅನುಮಾನ ಬಾರದಿರಲಿ ಎಂದು ತೊಗರಿ ಬೇಳೆ ಹಾಗೂ ಸೋಪುಗಳ ಪ್ಯಾಕೆಟ್​ಗಳಲ್ಲಿ ಡ್ರಗ್ಸ್ ಇಟ್ಟು ತರಿಸಿಕೊಳ್ಳುತ್ತಿದ್ದರು. ಬಳಿಕ ವಿದೇಶಿ ಪ್ರಜೆಗಳಿಗೆ ಹಾಗೂ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ: 'ನಶೆ ಮುಕ್ತ ಕರ್ನಾಟಕ' ಆ್ಯಪ್ ಆರಂಭ: ಡ್ರಗ್ಸ್ ಕೇಸ್​ ಬಗ್ಗೆ ಪೊಲೀಸರಿಗೆ ನೀವೂ ಮಾಹಿತಿ ನೀಡಬಹುದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.