ETV Bharat / state

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಪತ್ನಿ ಕೊಂದು ನೇಣಿಗೆ ಶರಣಾದ ಪತಿ - Couple Death - COUPLE DEATH

ಹೆಂಡತಿಯ ಕೊಲೆ ಬಳಿಕ ಗಂಡನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಪುಲಗಡ್ಡಿ‌‌ ಗ್ರಾಮದಲ್ಲಿ ನಡೆದಿದೆ.

COUPLE DEATH
ಮೃತ ಅಣ್ಣಪ್ಪ ನಂದಿ ಮತ್ತು ಯಲ್ಲವ್ವ ನಂದಿ (ETV Bharat)
author img

By ETV Bharat Karnataka Team

Published : May 28, 2024, 12:16 PM IST

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆಗೈದು ಬಳಿಕ ಪತಿಯೂ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪುಲಗಡ್ಡಿ‌‌ ಗ್ರಾಮದಲ್ಲಿ ನಡೆದಿದೆ.

ಅಣ್ಣಪ್ಪ ನಂದಿ ಮತ್ತು ಯಲ್ಲವ್ವ ನಂದಿ ಮೃತರು. ಸೋಮವಾರ ಸಂಜೆ ಎಮ್ಮೆ‌ ಮಾರಿ ಬಂದ ಹಣದಲ್ಲಿ ಅಣ್ಣಪ್ಪ ಕಂಠಪೂರ್ತಿ ಸಾರಾಯಿ ಕುಡಿದು ಬಂದಿದ್ದ. ಇದನ್ನು ಹೆಂಡತಿ ಪ್ರಶ್ನಿಸಿದ್ದಕ್ಕೆ ಆಕೆಯನ್ನೇ ಹತ್ಯೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ತಮಿಖೆಯಿಂದ ತಿಳಿದು ಬಂದಿದೆ.

ಹೆಂಡತಿಯ ಕೊಲೆ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯ ಹೊರಭಾಗದ ತಗಡಿನ್ ಶೆಡ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಳಗಾವಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಭೂಪ - Snake Bite

ETV Bharat Logo

Copyright © 2025 Ushodaya Enterprises Pvt. Ltd., All Rights Reserved.