ETV Bharat / state

ಕಟ್ಟಡ ಕುಸಿದ ಪ್ರಕರಣದ ಬೆನ್ನಲ್ಲೇ ಸೋಮವಾರದಿಂದ ನಗರದೆಲ್ಲೆಡೆ ಸರ್ವೆ ಕಾರ್ಯಕ್ಕೆ ಮುಂದಾದ ಬಿಬಿಎಂಪಿ - BABUSAPALYA BUILDING COLLAPSE

ಬಾಬುಸಾ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣ ನಡೆದ ಹಿನ್ನೆಲೆ ಬಿಬಿಎಂಪಿ ಸೋಮವಾರದಿಂದ ನಗರದೆಲ್ಲೆಡೆ ಸರ್ವೆ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.

bbmp
ಬಿಬಿಎಂಪಿ (ETV Bharat (ಸಂಗ್ರಹ ಚಿತ್ರ))
author img

By ETV Bharat Karnataka Team

Published : Oct 26, 2024, 10:47 PM IST

ಬೆಂಗಳೂರು: ನಗರದಲ್ಲಿ ಮಳೆಯ ಅವಾಂತರದಿಂದ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಏಳು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ 9 ಮಂದಿ ಮೃತರಾದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಅನಧಿಕೃತ ಕಟ್ಟಡಗಳ ತೆರವು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ವಲಯ ಆಯುಕ್ತರ ಹೆಗಲಿಗೆ ಕಟ್ಟಡಗಳ ಸರ್ವೆ ಮಾಡಿ ವರದಿ ಸಲ್ಲಿಸುವ ಜವಾಬ್ದಾರಿ ವಹಿಸಿದೆ. ಸೋಮವಾರದಿಂದ ಪ್ರತಿದಿನ ಈ ವಿಚಾರದಲ್ಲಿ ಮೇಲ್ವಿಚಾರಣೆ ಕೂಡ ನಡೆಯಲಿದೆ.

ಬರುವ ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸಮೀಕ್ಷೆ ಆರಂಭವಾಗಲಿದ್ದು, ಪರವಾನಿಗೆ, ಸ್ಪಾಟ್ ಸರ್ವೆ, ಫೋಟೋ, ಜಿಪಿಆರ್‌ಎಸ್ ಇತ್ಯಾದಿಗಳನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗುತ್ತದೆ. ಅನಧಿಕೃತ ನಿರ್ಮಾಣ ಹಂತದ ಕಟ್ಟಡಗಳು ಸ್ಥಳದಲ್ಲಿಯೇ ಸೀಲ್ ಆಗಲಿವೆ. ರಾಜಧಾನಿಯಲ್ಲಿ 700ಕ್ಕೂ ಹೆಚ್ಚು ಶಿಥಿಲ ಕಟ್ಟಡಗಳು ಇವೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಬುಸಾ ಪಾಳ್ಯದ ರೀತಿಯಲ್ಲಿಯೇ ಘಟನೆ ನಡೆದಿದ್ದ ಕಾರಣ ಹೈಕೋರ್ಟ್ ಮಾಹಿತಿ ಕೇಳಿತ್ತು. 2021ರ ನವೆಂಬರ್ 30ರ ವರೆಗೆ 1,31,745 ಅನಧಿಕೃತ ಕಟ್ಟಡಗಳ (ನಕ್ಷೆ ಅನುಮೋದನೆ ಪಡೆಯದ) ಸಮೀಕ್ಷೆ ಮಾಡಿ, 16,286 ಕಟ್ಟಡಗಳ ಮಾಲೀಕರಿಗೆ ದಾಖಲೆ ಸಲ್ಲಿಸಲು ಬಿಬಿಎಂಪಿ ಕಾಯ್ದೆ ಸೆಕ್ಷನ್ 313ರ ಪ್ರಕಾರ ನೋಟಿಸ್ ನೀಡಲಾಗಿತ್ತು. ಅದರಲ್ಲಿ 1,712 ಕಟ್ಟಡಗಳ ಮಾಲೀಕರು ನೋಟಿಸ್‌ಗೆ ಉತ್ತರ ನೀಡಿದ್ದರು. ಆಗ ಮಾಲೀಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿತ್ತು. ಅದೇ ವರ್ಷ ಮೊತ್ತೊಂದು ಸಮೀಕ್ಷೆಯನ್ನು ಸಹ ನಡೆಸಿತ್ತು.

ನಗರದಲ್ಲಿ ಭಾರಿ ಮಳೆ ಬಂದು ನೀರು ನಿಂತು ಅವಘಡಗಳು ಸಂಭವಿಸಿದ ಕಾರಣ, ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ವಿಚಾರ ಸದ್ದು ಮಾಡುತ್ತಿದೆ. ಡಿಸಿಎಂ ಸೂಚನೆ ಮೇರೆಗೆ ಹೊಸದಾಗಿ ಮತ್ತೆ ಸಮೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಬೃಹತ್ ನೀರುಗಾಲುವೆಗಳ ಒತ್ತುವರಿ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಕುರಿತು ಸಭೆ ನಡೆಸಿ ಮೊದಲಿಗೆ ವಲಯವಾರು ಸಂಬಂಧಪಟ್ಟ ತಹಶಿಲ್ದಾರ್‌ರಿಂದ ಬಂದಿರುವ ಎಲ್ಲಾ ಪ್ರಸ್ತಾವನೆಯನ್ನು ಗಮನಿಸಿ, ಒತ್ತುವರಿಯಾಗಿರುವ ಬಗ್ಗೆ ಆದೇಶಿಸಲಾದ ಸ್ಥಳವನ್ನು ನವೆಂಬರ್ 15ರೊಳಗೆ ತೆರವುಗೊಳಿಸಲು ಎಲ್ಲಾ ವಲಯ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಕಟ್ಟಡಗಳನ್ನು ಮುಲಾಜಿಲ್ಲದೆ ತೆರವು ಮಾಡಲಾಗುವುದು: ''ಕೆರೆ ಕಾಲುವೆ ಒತ್ತುವರಿ ಸಂಬಂಧ ಕಂದಾಯ ವಿಭಾಗದಿಂದ ಸರ್ವೆ ಮಾಡಲಾಗಿದೆ. ಈ ಪೈಕಿ 1712 ಕಟ್ಟಡಗಳನ್ನು ಮಾರ್ಕ್ ಮಾಡಲಾಗಿದೆ. ಆ ಪೈಕಿ 200 ರಷ್ಟು ಕಟ್ಟಡಗಳ ಒತ್ತುವರಿ ತೆರವು ಮಾಡಿದ್ದೇವೆ. ಉಳಿದ 1500 ಕಟ್ಟಡಗಳಿಗೆ ವಿಶೇಷ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಲಿದ್ದಾರೆ. ಒತ್ತುವರಿ ಮಾಡಲ್ಪಟ್ಟ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವು ಮಾಡಲಾಗುವುದು'' ಎಂದು ತುಷಾರ್ ಗಿರಿನಾಥ್ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಬೃಹತ್ ನೀರುಗಾಲುವೆಗಳು ಹಾಗೂ ಅನಧಿಕೃತ ಕಟ್ಟಡಗಳು, ಸ್ಥಳಗಳ ಒತ್ತುವರಿ ಸಂಬಂಧ ತಹಶಿಲ್ದಾರ್‌ಗೆ ಬಂದಿರುವ ಎಲ್ಲಾ ಪ್ರಸ್ತಾವನೆಯನ್ನು ಪರಾಮರ್ಶಿಸಿ, ಒತ್ತುವರಿಯಾಗಿರುವ ಬಗ್ಗೆ ಆದೇಶಿಸಲಾದ ಸ್ಥಳವನ್ನು ನವೆಂಬರ್ 15ರೊಳಗೆ ತೆರವುಗೊಳಿಸಲು ಎಲ್ಲಾ ವಲಯ ಆಯುಕ್ತರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಬಿಬಿಎಂಪಿ ವಿಶ್ವಾಸ ಕಳೆದುಕೊಂಡಿದೆ : ''ಅನಧಿಕೃತ ಕಟ್ಟಡಗಳ ತೆರವು ವಿಚಾರದಲ್ಲಿ ಬಿಬಿಎಂಪಿ ವಿಶ್ವಾಸ ಕಳೆದುಕೊಂಡಿದೆ. ಮೊದಲು ಪ್ರಭಾವಿಗಳ ವಿರುದ್ಧ ಕ್ರಮ ಜರುಗಿಸಿದರೆ ಇತರರಿಗೆ ಸಂದೇಶ ರವಾನೆಯಾಗುತ್ತದೆ. ತೆರವಿಗೆ ಕಾನೂನು ಇದ್ದರೂ ಅದು ಬಿಬಿಎಂಪಿಗೆ ಅನ್ವಯಿಸುತ್ತಿಲ್ಲ'' ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ : ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವು ಕಾರ್ಯ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.