ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ಗಳನ್ನು ಆಯಾ ವಲಯಗಳಿಗೆ ನಿಯೋಜಿಸಲಾಗಿದ್ದು, ನೋಂದಣಿಯಾಗಿರುವ ಟ್ಯಾಂಕರ್ಗಳು ಕಡ್ಡಾಯವಾಗಿ ಸ್ಟಿಕರ್ ಅಂಟಿಸಿಕೊಳ್ಳಬೇಕಿದೆ. ಸ್ವಯಂ ನೋಂದಣಿಯಾಗಿರುವ ವಾಹನಗಳಿಗೆ ಜಲಮಂಡಳಿ ವತಿಯಿಂದ ಸ್ಟಿಕ್ಕರ್ಗಳನ್ನು ಸಿದ್ಧಪಡಿಸಿ ಪಾಲಿಕೆಗೆ ನೀಡಿದೆ.
ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಈ ಸ್ಟಿಕ್ಕರ್ಗಳನ್ನು ವಲಯವಾರು ಹಂಚಿಕೆ ಮಾಡಲಾಗಿದೆ. ಅದರಂತೆ, ಪ್ರತಿ ಟ್ಯಾಂಕರ್ ಮಾಲೀಕರು ಪಾಲಿಕೆಯಲ್ಲಿ ಸ್ವಯಂ ನೋಂದಣಿ ಮಾಡಿಕೊಂಡಿರುವ ನೋಂದಣಿ ಪ್ರಮಾಣ ಪತ್ರವನ್ನು ಮತ್ತು ಪಾಲಿಕೆ ನೀಡಿರುವ ಸ್ಟಿಕರ್ನಲ್ಲಿ ವಾಹನದ ಸಂಖ್ಯೆ, ಮಾಲೀಕರ ಹೆಸರು, ದೂರವಾಣಿ ಸಂಖ್ಯೆ, ಸ್ವಯಂ ನೋಂದಣಿಯಾಗಿರುವ ಸಂಖ್ಯೆಯನ್ನು ವಾಹನಗಳ ಮೇಲೆ ಪ್ರದರ್ಶಿಸಬೇಕಿದೆ. ವಲಯದ ಹೆಸರು ನಮೂದಿಸಿ ವಾಹನದ ಮೇಲೆ ಕಡ್ಡಾಯವಾಗಿ ಅಂಟಿಸಬೇಕಿದೆ. ಇಲ್ಲವಾದಲ್ಲಿ ಶಿಸ್ತು ಕ್ರಮ ಜರಿಸಲಾಗುವುದು ಎಂದು ಎಚ್ಚರಿಕೆಯ ಸಂದೇ ನೀಡಿದ್ದಾರೆ.
ಪಾಲಿಕೆಯಲ್ಲಿ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ ಮಾಲೀಕರಿಗೆ ಈಗಾಗಲೇ ನಿಗದಿಪಡಿಸಿರುವ ದರದ ಅನುಸಾರ ನೀರು ಪೂರೈಕೆ ಮಾಡಲು ಸೂಚಿಸಲಾಗಿದೆ. ನೋಂದಣಿಯಾಗದ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರದಿಂದ ನಿಗದಿಪಡಿಸಿರುವ ದರಕ್ಕಿಂದ ಹೆಚ್ಚಾಗಿ ಮಾರಾಟ ಮಾಡಿದಲ್ಲಿ ಅಥವಾ ನೀರಿನ ಗುಣಮಟ್ಟದ ಸಮಸ್ಯೆ ಉಂಟಾದಲ್ಲಿ ಜಲಮಂಡಳಿಯ ಸಹಾಯವಾಣಿ ಸಂಖ್ಯೆ 1916 ಗೆ ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಗೆ ಜನಸಾಮಾನ್ಯರು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪಾಲಿಕೆ ತೆರೆದಿದ್ದ ಪೋರ್ಟಲ್ನಲ್ಲಿ ಸ್ವಯಂ ನೋಂದಣಿಯಾಗಿದ್ದ ಟ್ಯಾಂಕರ್ ಗಳನ್ನು ಈಗಾಗಲೇ ವಲಯವಾರು ನಿಯೋಜಿಸಲಾಗಿದ್ದು, ಆಯಾ ವಲಯ ಆಯುಕ್ತರಿಗೆ ಟ್ಯಾಂಕರ್ ಮಾಲೀಕರ ಹೆಸರು, ದೂರವಾಣಿ ಸಂಖ್ಯೆ ಹಾಗೂ ನೀರು ಪೂರೈಕೆ ಮಾಡುವ ಪ್ರದೇಶದ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶೇ.95ರಷ್ಟು ಖಾಸಗಿ ನೀರಿನ ಟ್ಯಾಂಕರ್ಗಳ ನೋಂದಣಿ ಕಾರ್ಯ ಪೂರ್ಣ : ಉಚಿತವಾಗಿ ನೀರು ಪೂರೈಕೆ