ETV Bharat / state

ಬೆಳಗಾವಿ: ಸಂಭ್ರಮದ ಬಸವ ಜಯಂತಿ ಆಚರಣೆ: ಐದು ಸಾವಿರ ಲೀಟರ್ ಶರಬತ್ ಹಂಚಿಕೆ - Basava Jayanti - BASAVA JAYANTI

ಬೆಳಗಾವಿ ನಗರದಲ್ಲಿ ರಾಷ್ಟ್ರೀಯ ಬಸವದಳದಿಂದ ಐದು ಸಾವಿರ ಲೀಟರ್ ಶರಬತ್ ಹಂಚುವ ಮೂಲಕ ಅರ್ಥಪೂರ್ಣವಾಗಿ ವಿಶ್ವಗುರು ಬಸವಣ್ಣ ಅವರ 891ನೇ ಜಯಂತಿ ಆಚರಿಸಲಾಯಿತು.

BASAVA JAYANTI
ಸಂಭ್ರಮದ ಬಸವ ಜಯಂತಿ ಆಚರಣೆ (ETV Bharat)
author img

By ETV Bharat Karnataka Team

Published : May 10, 2024, 4:03 PM IST

Updated : May 10, 2024, 4:45 PM IST

ಸಂಭ್ರಮದ ಬಸವ ಜಯಂತಿ ಆಚರಣೆ (ETV Bharat)

ಬೆಳಗಾವಿ: ನಗರದಲ್ಲಿ ರಾಷ್ಟ್ರೀಯ ಬಸವದಳದಿಂದ ಐದು ಸಾವಿರ ಲೀಟರ್ ಶರಬತ್ ಹಂಚುವ ಮೂಲಕ ಅರ್ಥಪೂರ್ಣವಾಗಿ ವಿಶ್ವಗುರು ಬಸವಣ್ಣ ಅವರ 891ನೇ ಜಯಂತ್ಯುತ್ಸವ ಅದ್ಧೂರಿಯಾಗಿ ಆಚರಿಸಲಾಯಿತು.

ಮಹಾಂತೇಶ ನಗರದ ಬಸವಮಂಟಪದಲ್ಲಿ ಜಗಜ್ಯೋತಿ ಬಸವಣ್ಣನವರ ಪುತ್ಥಳಿಗೆ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿದರು. ಜ್ಯೋತಿ ಬೆಳಗಿಸುವ ಮೂಲಕ ಮೇಯರ್ ಸವಿತಾ ಕಾಂಬಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ, ಬಾಲ ಬಸವಣ್ಣನವರ ಮೂರ್ತಿಯನ್ನು ಶರಣೆಯರು ತೊಟ್ಟಿಲಲ್ಲಿ ತೂಗಿ ವಚನಗಳನ್ನು ಹಾಡಿ ಸಂಭ್ರಮಿಸಿದರು.

ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಿಯಾಂಕಾ ಜಾರಕಿಹೊಳಿ, ಮಹಿಳೆಯರಿಗೆ ಸಮಾನತೆ ಕೊಟ್ಟ ಮೊದಲಿಗರು ಬಸವಣ್ಣನವರು. ಜಾತಿ, ವರ್ಣ, ವರ್ಗ ರಹಿತ ಸಮಸಮಾಜ ನಿರ್ಮಾಣ ಅವರ ಕನಸಾಗಿತ್ತು. ಅವರ ತತ್ತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ನಮ್ಮ ಜೀವನ ಸಾರ್ಥಕ ಆಗುತ್ತದೆ ಎಂದು ಆಶಿಸಿದರು.

ಸಾಂಸ್ಕೃತಿಕ ನಾಯಕ ಬಸವಣ್ಣ: ಲಿಂಗಾಯತ ಮುಖಂಡ ಶಂಕರ ಗುಡಸ ಮಾತನಾಡಿ, ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಮೂಢನಂಬಿಕೆ, ಕಂದಾಚಾರದ ವಿರುದ್ಧ ಹುಟ್ಟಿರುವುದೇ ಲಿಂಗಾಯತ ಧರ್ಮ. ಕಾಯಕದ ಮಹತ್ವ, ದಾಸೋಹ, ಇಷ್ಟಲಿಂಗ, ವಚನ ಸಾಹಿತ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟ ಬಸವಣ್ಣ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದವರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆಯಬೇಕಿದೆ ಎಂದರು.

ಸಾರ್ವಜನಿಕರಿಗೆ ಸುಮಾರು ಐದು ಸಾವಿರ ಲೀಟರ್ ಶರಬತ್ ವಿತರಿಸಲಾಯಿತು. ಬಸ್, ಕಾರು, ಬೈಕ್ ಗಳಲ್ಲಿ ತೆರಳುತ್ತಿದ್ದ ಜನರಿಗೆ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಶರಬತ್ ಹಂಚಿ ಸಂಭ್ರಮಿಸಿದರು. ನೆರೆದಿದ್ದ ಶರಣ, ಶರಣೆಯರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ನಗರ ಸೇವಕ ರಾಜಶೇಖರ ಡೋಣಿ, ರಾಷ್ಟ್ರೀಯ ಬಸವದಳದ ಮುಖಂಡ ಅಶೋಕ ಬೆಂಡಿಗೇರಿ, ಆರ್‌.ಕೆ.ಪಾಟೀಲ, ಆನಂದ ಗುಡಸ, ಮಹಾಂತೇಶ ಗುಡಸ, ಬಸವರಾಜ ಶೇಗಾವಿ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:ಬಸವ ಜಯಂತಿ ಪ್ರಯುಕ್ತ ಅಂಬಲಿ ಹಂಚಿದ ಬೆಕ್ಕಿನ ಕಲ್ಮಠ ಶ್ರೀಗಳು - Basava Jayanti

Last Updated : May 10, 2024, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.