ಬಾಗಲಕೋಟೆ: ನಗರದಲ್ಲಿ ಬಿ.ವಿ.ವಿ.ಸಂಘ, ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಭಾರತದ ಖೇಲೋ ಇಂಡಿಯಾ ವುಶು ಸಬ್ ಜೂನಿಯರ್, ಜೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟಕ್ಕೆ ನಿನ್ನೆ ತೆರೆಬಿತ್ತು.
ಸಮಗ್ರ ವಿಭಾಗದಲ್ಲಿ ತಮಿಳನಾಡು 16 ಚಿನ್ನ, 10 ಬೆಳ್ಳಿ, 13 ಕಂಚುಗಳೊಂದಿಗೆ ಕ್ರೀಡಾಕೂಟದಲ್ಲಿ 123 ಅಂಕಗಳನ್ನು ಪಡೆದು ಸಮಗ್ರ ಗೆಲುವನ್ನು ಮುಡಿಗೇರಿಸಿಕೊಂಡಿತು.11 ಚಿನ್ನ, 16 ಬೆಳ್ಳಿ, 17 ಕಂಚು ಪದಕಗಳೊಂದಿಗೆ 120 ಅಂಕಗಳನ್ನು ಪಡೆದ ಕೇರಳ 2ನೇ ಸ್ಥಾನ ಪಡೆಯಿತು. ಒಡಿಶಾ 8 ಚಿನ್ನ, 3 ಬೆಳ್ಳಿ, 8 ಕಂಚಿನ ಪದಕ ಪಡೆದು, 57 ಅಂಕಗಳಿಂದ ತೃತೀಯ ಸ್ಥಾನ ಗಿಟ್ಟಿಸಿಕೊಂಡರೆ, ಕರ್ನಾಟಕ 6ಚಿನ್ನ, 8 ಬೆಳ್ಳಿ, 34 ಕಂಚು ಪದಕಗಳೊಂದಿಗೆ 88 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಇನ್ನು ತೆಲಂಗಾಣ 3 ಚಿನ್ನ, 3 ಬೆಳ್ಳಿ, 15ಕಂಚು ಪದಕ ಪಡೆದು 39 ಅಂಕಗಳಿಂದ 5ನೇ ಸ್ಥಾನ, 1ಚಿನ್ನ, 4 ಬೆಳ್ಳಿ, 3 ಕಂಚು ಪಡೆದು 20 ಅಂಕಗಳಿಂದ ಆಂಧ್ರಪದೇಶ 6ನೇ ಸ್ಥಾನ ಪಡೆದುಕೊಂಡಿತು.
ಸಾಂಡಾ ವಿಭಾಗದಲ್ಲಿ ಕೇರಳ ಪ್ರಥಮ, ಕರ್ನಾಟಕ ದ್ವೀತಿಯ, ಒಡಿಶಾ ತೃತೀಯ ಸ್ಥಾನಗಳಲ್ಲಿ ಗೆಲುವು ಕಂಡಿದೆ. ಕೇರಳ 6 ಚಿನ್ನ, 9 ಬೆಳ್ಳಿ, 11 ಕಂಚು ಪಡೆದು 68 ಅಂಕಗಳಿಂದ ಪ್ರಥಮ ಸ್ಥಾನ ಪಡೆದರೆ, ಕರ್ನಾಟಕ 5 ಚಿನ್ನ, 1 ಬೆಳ್ಳಿ, 15 ಕಂಚು ಪಡೆದು 43 ಅಂಕಗಳಿಂದ ಏರಡನೇ ಸ್ಥಾನ ಪಡೆಯಿತು. 6ಚಿನ್ನ, 3 ಕಂಚು ಪಡೆದು 33 ಅಂಕಗಳಿಂದ ಒಡಿಶಾ 3ನೇ ಸ್ಥಾನದಲ್ಲಿ ಗೆಲುವಿನ ನಗೆ ಬೀರಿತು. ತಮಿಳನಾಡು 2 ಚಿನ್ನ, 6 ಬೆಳ್ಳಿ, 4 ಕಂಚು ಪಡೆದು 32 ಅಂಕದಿಂದ 4ನೇಸ್ಥಾನ, ಆಂಧ್ರ ಪ್ರದೇಶ 1 ಚಿನ್ನ, 3 ಬೆಳ್ಳಿ, 3 ಕಂಚು ಪಡೆದು 17 ಅಂಕಗಳಿಂದ 5ನೇ ಸ್ಥಾನದಲ್ಲಿದೆ.
ತೌಲ್ ವಿಭಾಗದಲ್ಲಿ ತಮಿಳನಾಡು ಪ್ರಥಮ, ಕೇರಳ ದ್ವಿತೀಯ, ಕರ್ನಾಟಕ ತೃತಿಯ ಸ್ಥಾನ ಪಡೆದುಕೊಂಡಿದೆ. ತಮಿಳನಾಡು 14 ಚಿನ್ನ, 4 ಬೆಳ್ಳಿ, 9 ಕಂಚು ಪದಕ ಪಡೆದು 91 ಅಂಕಗಳಿಂದ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೇರಳ 5 ಚಿನ್ನ, 7 ಬೆಳ್ಳಿ, 6 ಕಂಚು ಪಡೆದು 52ಅಂಕಗಳಿಂದ ದ್ವಿತೀಯ ಸ್ಥಾನದಲ್ಲಿದ್ದರೆ, ಕರ್ನಾಟಕ 7 ಬೆಳ್ಳಿ, 18 ಕಂಚು ಪಡೆದು 39 ಅಂಕಗಳಿಂದ ತೃತೀಯ ಸ್ಥಾನ ಗಿಟ್ಟಿಸಿಕೊಂಡಿದೆ. ಒಡಿಶಾ 3 ಚಿನ್ನ, 3 ಬೆಳ್ಳಿ 6 ಕಂಚು ಪಡೆದು 30 ಅಂಕಗಳಿಂದ 4ನೇ ಸ್ಥಾನ, ತೆಲಂಗಾಣ 2 ಚಿನ್ನ, 2 ಬೆಳ್ಳಿ, 9 ಕಂಚು ಪಡೆದು 25 ಅಂಕಗಳಿಂದ 5ನೇ ಸ್ಥಾನ, ಆಂಧ್ರಪದೇಶ 1 ಬೆಳ್ಳಿ, 3 ಅಂಕಗಳಿಂದ 6ನೇ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡೆಗೆ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸೋಲು ಗೆಲವು ಎಂದು ತಿಳಿಯದೇ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ತೋರ್ಪಡಿಸಿರುವುದು ಮಹತ್ವದ ವಿಚಾರ ಎಂದರು. ಸತತ ಪ್ರಯತ್ನದಿಂದ ಗೆಲವು ಹೊಂದುವುದು ಸಾಧನೆ ಎಂದು ತಿಳಿಸಿದರು.
ನಾಲ್ಕು ದಿನಗಳಿಂದ ಯಶಸ್ವಿಯಾಗಿ ನಡೆದ ವುಶು ಕೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ ಕುರೇರ ಸೇರಿದಂತೆ ಇತರ ಗಣ್ಯರು ಭಾಗವಹಿಸಿ, ಕ್ರೀಡಾಪಟುಗಳಿಗೆ ಸಮಗ್ರ ವೀರಾಗ್ರಣಿ ಹಾಗೂ ಪ್ರಥಮ, ದ್ವೀತೀಯ ಸ್ಥಾನಗಳ ಟ್ರೋಫಿ, ಪ್ರಶಸ್ತಿ ಫಲಕ, ನೀಡಿ ಗೌರವಿಸಿದರು.