ಬೆಂಗಳೂರು: ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕಸವನ್ನ ಇಟ್ಟಿದ್ದಕ್ಕೆ ಪಕ್ಕದ ಮನೆಯ ನಿವಾಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕಿರುತೆರೆ ನಟರೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಪಕ್ಕದ ಮನೆಯ ನಿವಾಸಿ, ಅಪರಿಚಿತ ವ್ಯಕ್ತಿ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಿ ನಟ ಚರಿತ್ ಬಾಲಪ್ಪ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟಿನಲ್ಲಿ ವಾಸವಿರುವ ನಟ ಚರಿತ್, ಫೆಬ್ರವರಿ 23ರಂದು ಶೂಟಿಂಗ್ ನಿಮಿತ್ತ ತೆರಳುವ ತರಾತುರಿಯಲ್ಲಿ ತಮ್ಮ ಮನೆಯ ಕಸವನ್ನ ಮನೆ ಪಕ್ಕದ ಖಾಲಿ ಜಾಗದಲ್ಲಿ ಇಟ್ಟಿದ್ದರು. ಆಗ ಅದೇ ಏರಿಯಾದ ಅಪರಿಚಿತ ವ್ಯಕ್ತಿಯೊಬ್ಬರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಅಪರಿಚಿತ ವ್ಯಕ್ತಿ ತಮ್ಮನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮ ಎಡಗೈ ಕಿರುಬೆರಳಿಗೆ ಗಾಯ ಮಾಡಿ, ಬ್ಯಾಗಿಗೆ ಹಾನಿ ಮಾಡಿದ್ದಾರೆ. ಶೂಟಿಂಗ್ ನಿಮಿತ್ತ ಹೈದರಾಬಾದಿಗೆ ತೆರಳಿದ್ದ ತಾವು ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನಟ ಚರಿತ್ ಬಾಲಪ್ಪ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಟನ ದೂರಿನ ಆದಾರದ ಮೆಲೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 1 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಮೊಬೈಲ್ ನಂಬರ್ ಕೊಡದ ವಿದ್ಯಾರ್ಥಿನಿ ಮೇಲೆ ಹಲ್ಲೆ, ಮೂವರು ಯುವಕರ ಬಂಧನ