ETV Bharat / state

ಯುಗಾದಿ ಹಬ್ಬದಂದು ಜೂಜಾಟದಲ್ಲಿ ತೊಡಗಿದ್ದ 291 ಜನರ ಬಂಧನ: 3 ಲಕ್ಷ ರೂ ವಶಕ್ಕೆ - 291 People Arrested

ತುಮಕೂರಿನಲ್ಲಿ ಜೂಜಾಟದಲ್ಲಿ ತೊಡಗಿದ್ದ 291 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಯುಗಾದಿ ಹಬ್ಬದಂದು ಜೂಜಾಟದಲ್ಲಿ ತೊಡಗಿದ್ದ 291 ಜನರ ಬಂಧನ: 3 ಲಕ್ಷ ರೂ ವಶಕ್ಕೆ

author img

By ETV Bharat Karnataka Team

Published : Apr 11, 2024, 12:57 PM IST

Updated : Apr 11, 2024, 1:27 PM IST

ತುಮಕೂರು: ಜೂಜಾಟದಲ್ಲಿ ತೊಡಗಿದ್ದ 291 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯುಗಾದಿ ಮತ್ತು ಮಾರನೇ ದಿನ ಜೂಜಾಟ ನಡೆಯುತ್ತಿದ್ದ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, 3 ಲಕ್ಷಕ್ಕೂ ಹೆಚ್ಚಿನ ಮೊತ್ತದ ನಗದು ವಶಕ್ಕೆ ಪಡೆದಿದ್ದಾರೆ. ತುಮಕೂರು ಜಿಲ್ಲಾ ಉಪವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರು ನಗರ ಉಪವಿಭಾಗದಲ್ಲಿ 15 ಪ್ರಕರಣಗಳು ದಾಖಲಾಗಿದ್ದು 77 ಜನರನ್ನು ಬಂಧಿಸಿ, 1,15,350 ರೂ ವಶಪಡಿಸಿಕೊಳ್ಳಲಾಗಿದೆ. ತಿಪಟೂರು ಉಪವಿಭಾಗದಲ್ಲಿ 11 ಪ್ರಕರಣಗಳು ದಾಖಲಾಗಿದ್ದು 63 ಜನರನ್ನು ಬಂಧಿಸಿ, 94,095 ರೂ. ವಶಪಡಿಸಿಕೊಳ್ಳಲಾಗಿದೆ. ಶಿರಾ ಉಪವಿಭಾಗದಲ್ಲಿ 20 ಪ್ರಕರಣಗಳು, 108 ಜನರ ಬಂಧಿಸಿ, 83,050 ರೂ ವಶಪಡಿಸಿಕೊಳ್ಳಲಾಗಿದೆ. ಮಧುಗಿರಿ ಉಪ ವಿಭಾಗದಲ್ಲಿ 07 ಪ್ರಕರಣಗಳು ದಾಖಲಾಗಿದ್ದು, 43 ಜನರನ್ನು ದಸ್ತಗಿರಿ ಮಾಡಿ, 29,340 ರೂ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ತುಮಕೂರು ಜಿಲ್ಲಾದ್ಯಂತ 53 ಪ್ರಕರಣಗಳು ದಾಖಲಾಗಿದ್ದು, 291 ಜನರನ್ನು ಬಂಧಿಸಿ, ಒಟ್ಟು 3,21,835 ರೂ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಕಾಲ್ ಗರ್ಲ್ ಬೇಕಾದರೆ ಸಂಪರ್ಕಿಸಿ: ಪತ್ನಿ ಪೋನ್ ನಂಬರ್ ಪೋಸ್ಟ್ ಮಾಡಿದ ಪತಿ ವಿರುದ್ಧ ಪ್ರಕರಣ ದಾಖಲು - File case against husband

Last Updated : Apr 11, 2024, 1:27 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.