ETV Bharat / state

ಅರ್ಜುನ ಆನೆ ಸ್ಮಾರಕ ಹೆಸರಲ್ಲಿ ಹಣ ಸಂಗ್ರಹ ಆರೋಪ: ಮೈಸೂರಿನ ವ್ಯಕ್ತಿ ವಿರುದ್ಧ ಮಲೆನಾಡು ರಕ್ಷಣಾ ವೇದಿಕೆ ದೂರು - Arjuna elephant memorial

ಆನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅರ್ಜುನ ಆನೆಯ ಸ್ಮಾರಕ ನಿರ್ಮಾಣ ಮಾಡುವುದಾಗಿ ಮೈಸೂರಿನ ವ್ಯಕ್ತಿಯೋರ್ವ ಹಣ ಸಂಗ್ರಹ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಅರ್ಜುನ ಆನೆ ಸ್ಮಾರಕ ಹಣ ಸಂಗ್ರಹ ಆರೋಪ
ಅರ್ಜುನ ಆನೆ ಸ್ಮಾರಕ ಹಣ ಸಂಗ್ರಹ ಆರೋಪ (ETV Bharat)
author img

By ETV Bharat Karnataka Team

Published : May 27, 2024, 5:58 PM IST

ಹಾಸನ: 2023ರ ಡಿಸೆಂಬರ್​ನಲ್ಲಿ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲಿ ದಸರಾ ಅಂಬಾರಿ ಹೊರುತ್ತಿದ್ದ ಕ್ಯಾಪ್ಟನ್ ಅರ್ಜುನ ಮರಣ ಹೊಂದಿತ್ತು. ಇದರ ಸ್ಮಾರಕ ನಿರ್ಮಾಣ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ.

ಆದರೆ ಅರ್ಜುನ ಆನೆ ಸ್ಮಾರಕ ನಿರ್ಮಾಣ ಮಾಡುವ ವಿಚಾರವನ್ನೇ ಬಂಡವಾಳ ಮಾಡಿಕೊಂಡು ವ್ಯಕ್ತಿಯೋರ್ವ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್ ಎಂಬುವನು ಅರ್ಜುನ ಪಡೆ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ, ಅರ್ಜುನ ಸ್ಮಾರಕ ಹೋರಾಟಕ್ಕೆ ನಿಮ್ಮಗಳ ಬೆಂಬಲ ಬೇಕು ಎಂದು ಗ್ರೂಪ್​ನಲ್ಲಿ ಆರ್ಥಿಕ ಸಹಾಯಕ್ಕಾಗಿ ಬೇಡಿಕೆಯಿಟ್ಟಿದ್ದಾನೆ.

ಇದನ್ನು ನಂಬಿದ ಹಲವರು ಹಣ ಸಹಾಯ ಮಾಡಿದ್ದಾರೆ. ಇದರಿಂದ ಮೈಸೂರಿನ ಹೆಚ್. ಎನ್. ನವೀನ್ ಎಂಬ ಯುವಕನ ಖಾತೆಗೆ ಲಕ್ಷಾಂತರ ಹಣ ಜಮೆ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಆರೋಪ ಮಾಡಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವಂತೆ ಆರೋಪಿ ಹೆಚ್. ಎನ್. ನವೀನ್ ಚಿತ್ರನಟ ದರ್ಶನ್ ಅವರ ಆಪ್ತ ಸಹಾಯಕನನ್ನು ಸಂಪರ್ಕ ಮಾಡಿದ್ದಾನೆ. ಅವರಿಂದ ಸ್ಮಾರಕ ನಿರ್ಮಾಣಕ್ಕೆ ಕಲ್ಲನ್ನು ತರಿಸಿಕೊಂಡಿದ್ದಾನೆ. ಈ ಕಲ್ಲನ್ನು ಅರಣ್ಯ ಇಲಾಖೆಯವರಿಗೆ 30 ಸಾವಿರ ರೂ.ಗೆ ಮಾರಿದ್ದಾನೆ ಎಂದು ಆರೋಪ ಕೇಳಿಬಂದಿದೆ.

ಸಾರ್ವಜನಿಕರಿಂದ ಹಣ ಪಡೆಯುವುದಕ್ಕೆ ಈತನಿಗೆ ಅನುಮತಿ ಕೊಟ್ಟವರು ಯಾರು? ನಿರ್ಮಾಣಕ್ಕೆ ಎಲ್ಲಿ ಅನುಮತಿ ಪಡೆದಿದ್ದಾನೆ..? ಈತನ ವೈಯಕ್ತಿಕ ಖಾತೆಗೆ ಯಾರೂ ಹಣ ಹಾಕಬೇಡಿ. ಅಲ್ಲದೆ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತನಿಖೆ ನಡೆಸಬೇಕೆಂದು ಮಲೆನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ ಜಾನೆಕೆರೆ ಮನವಿ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈತನ ಖಾತೆಗೆ ನೂರಾರು ಜನರು ಹಣ ಸಂದಾಯ ಮಾಡಿರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಅಂಬಾರಿ ಹೊತ್ತ ಅರ್ಜುನನ ಸಮಾಧಿಗೆ ದನಿ ಎತ್ತಿದ ಚಾಲೆಂಜಿಂಗ್​​ ಸ್ಟಾರ್ ದರ್ಶನ್​​ - Darshan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.