ETV Bharat / state

ಬೆಂಡಿಗೇರಿ ಪೊಲೀಸರಿಂದ ಏರಿಯಾ ಡಾಮಿನೇಷನ್: ಪ್ರಕರಣಗಳ ಸಂತ್ರಸ್ತರ ಭೇಟಿ ಮಾಡಿದ ಕಮಿಷನರ್ ಶಶಿಕುಮಾರ್ - Area domination by police - AREA DOMINATION BY POLICE

ಕೆಲವು ಪ್ರಕರಣಗಳಲ್ಲಿ ನೊಂದವರನ್ನು ಭೇಟಿ ಮಾಡಿದ ಕಮಿಷನರ್​ ಎನ್​.ಶಶಿಕುಮಾರ್​, ಪ್ರಕರಣಗಳ ತನಿಖಾ ಹಂತ ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ಹಂಚಿಕೊಂಡರು.

AREA DOMINATION BY BENDIGERI POLICE
ಬೆಂಡಿಗೇರಿ ಪೊಲೀಸರಿಂದ ಏರಿಯಾ ಡಾಮಿನೇಷನ್ (ETV Bharat)
author img

By ETV Bharat Karnataka Team

Published : Jul 13, 2024, 2:12 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್ ಎನ್.ಶಶಿಕುಮಾರ್​ ಅವರ ಮಾರ್ಗದರ್ಶನದಲ್ಲಿ ಬೆಂಡಿಗೇರಿ‌ ಠಾಣಾ‌ ವ್ಯಾಪ್ತಿಯಲ್ಲಿ ಪೊಲೀಸ್ ಏರಿಯಾ ಡಾಮಿನೇಷನ್ ಕೈಗೊಳ್ಳಲಾಯಿತು.

ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಹುಬ್ಬಳ್ಳಿ- ಧಾರವಾಡ ನಗರ ಪೊಲೀಸರು ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರೌಡಿಶೀಟರ್, MOBಗಳು, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಾಲಿ ಇರುವ ಲೇಔಟ್​ಗಳಲ್ಲಿ, ರಸ್ತೆಗಳಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದವರು ಸೇರಿದಂತೆ ಒಟ್ಟು 130 ಜನರನ್ನು ವಶಕ್ಕೆ ಪಡೆದು ಕೆಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮತ್ತೊಂದೆಡೆ ಕಮಿಷನರ್ ಎನ್​.ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಂತಹ ಕೊಲೆ, ದರೋಡೆ, ಸರಗಳ್ಳತನ ಹಾಗೂ ಸುಲಿಗೆ ಪ್ರಕರಣಗಳ, ಕೃತ್ಯ ನಡೆದಂತಹ ಸ್ಥಳಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿ ತನಿಖೆಯ ಪ್ರಗತಿ ಪರಿಶೀಲಿಸಿದರು. ಇಂತಹ ಪ್ರಕರಣಗಳ ತನಿಖೆ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಪ್ರಕರಣಗಳಲ್ಲಿ ನೊಂದವರನ್ನು ಸಹ ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದರು. ನೊಂದವರ ಜೊತೆಗೆ ಪ್ರಕರಣಗಳ ತನಿಖಾ ಹಂತ ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ಹಂಚಿಕೊಂಡರು. ಕೆಲವು ಪ್ರಕರಣಗಳ ಪತ್ತೆಯ ಬಗ್ಗೆ ಸೂಕ್ತ ಸಲಹೆ ನೀಡಿ ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ವೇಳೆ ಡಿಸಿಪಿ ಎಂ. ನಂದಗಾವಿ, ರವೀಶ್ ಸಿ.ಆರ್. ಹಾಗೂ ಆಯಾ ಠಾಣಾ ವ್ಯಾಪ್ತಿಯ ಎಸಿಪಿಗಳು ಹಾಗೂ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಹಾಸನ: ಮನೆ ಕಳ್ಳತನಕ್ಕೆ ಬಂದ ದುಷ್ಕರ್ಮಿಗಳಿಂದ ಮಹಿಳೆಯ ಕೊಲೆ ಯತ್ನ - Hassan Robbery Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.