ETV Bharat / state

6,407 ಕೋಟಿ ರೂ. ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ: 33,771 ಉದ್ಯೋಗ ನಿರೀಕ್ಷೆ - ಯೋಜನೆಗಳಿಗೆ ಅನುಮೋದನೆ

6,407 ಕೋಟಿ ರೂಪಾಯಿ ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ಸುಮಾರು 33,771 ಉದ್ಯೋಗ ನಿರೀಕ್ಷೆ ಇದೆ.

investment  Job prospects  Bengaluru  ಯೋಜನೆಗಳಿಗೆ ಅನುಮೋದನೆ  ಉದ್ಯೋಗ ನಿರೀಕ್ಷೆ
6,407 ಕೋಟಿ ರೂ. ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ
author img

By ETV Bharat Karnataka Team

Published : Feb 10, 2024, 12:59 PM IST

ಬೆಂಗಳೂರು: ರಾಜ್ಯಾದ್ಯಂತ ಕೈಗಾರಿಕೆ ಬೆಳವಣಿಗೆ ಉತ್ತೇಜಿಸಲು ಮತ್ತು ಉದ್ಯೋಗ ಸೃಷ್ಟಿಸಲು, ಶಿಕ್ಷಣ - ಸಂಶೋಧನಾ ಸಂಸ್ಥೆಗಳ ಸ್ಥಾಪನೆ, ಉಗ್ರಾಣ, ಶೈತ್ಯಾಗಾರಗಳ ನಿರ್ಮಾಣ, ವಾಹನ ಬಿಡಿಭಾಗ, ಪಿವಿಸಿ ಪೈಪ್ ತಯಾರಿಕೆ ಸೇರಿದಂತೆ ಒಟ್ಟು ₹6,407.82 ಕೋಟಿ ಬಂಡವಾಳ ಮೊತ್ತದ ಹೂಡಿಕೆಯ ಪ್ರಸ್ತಾವಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಅನುಮೋದನೆ ನೀಡಿದೆ.

ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 143ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು ₹ 6407.82 ಕೋಟಿ ಬಂಡವಾಳ ಮೊತ್ತದ ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ 33,771 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಬೆಂಗಳೂರು ಗ್ರಾಮಾಂತರ, ಬೆಳಗಾವಿ, ರಾಮನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯ ವಿವಿಧ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

ಈ ಯೋಜನೆಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ₹485 ಕೋಟಿ ಬಂಡವಾಳದ ಯಾಂತ್ರೀಕೃತ ಎರಕಹೊಯ್ಯುವ ಘಟಕ ಸ್ಥಾಪನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ₹484.33 ಕೋಟಿ ಮೊತ್ತದ ವಿಜ್ಞಾನ, ತಂತ್ರಜ್ಞಾನ ಸಂಶೋಧನೆ ಹಾಗೂ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ, ಮೈಸೂರು ಜಿಲ್ಲೆಯಲ್ಲಿ ₹415 ಕೋಟಿ ಮೊತ್ತದ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್​ ಸೇರಿದಂತೆ ಮುಂತಾದವುಗಳು ಸೇರಿವೆ.

₹50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ 22 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ₹4230.64 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 24,846 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ₹15 ಕೋಟಿಗಳಿಂದ ₹50 ಕೋಟಿ ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 104 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹2056.68 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 8,425 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗಳಿಗೆ ಸಭೆ ಅನುಮೋದಿಸಿದ್ದು, ಇದರಿಂದ ₹120.50 ಕೋಟಿ ಬಂಡವಾಳ ಹೂಡಿಕೆ ಆಗಲಿದ್ದು, 500 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಸಭೆಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಡಾ. ಎನ್. ಮಹೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಅನುಮೋದಿತ ಪ್ರಮುಖ ಪ್ರಸ್ತಾವನೆಗಳ ವಿವರ ಈ ಕೆಳಗಿನಂತಿವೆ..

ಕ್ರಮ ಸಂಖ್ಯೆಕಂಪನಿಗಳ ಹೆಸರುಸ್ಥಳಗಳುಹೂಡಿಕೆಯ ಮೊತ್ತಉದ್ಯೋಗ ನಿರೀಕ್ಷೆ
1ಜಯಡಿ ಟೆಕ್ಮ್ಯಾಕ್ ಪ್ರೈವೇಟ್ ಲಿಮಿಟೆಡ್ಬೆಳಗಾವಿ ಜಿಲ್ಲೆ485 ಕೋಟಿ ರೂ.1025
2ಗೋಕುಲ ಎಜುಕೇಷನ್ ಫೌಂಡೇಷನ್ (ವೈದ್ಯಕೀಯ)

ಬೆಂಗಳೂರು ಗ್ರಾ. ಜಿಲ್ಲೆ,

ದೇವನಹಳ್ಳಿ

484.33 ಕೋಟಿ ರೂ.660
3ಧರಿವಾಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಪುಣೆ

ಬೆಂಗಳೂರು ಗ್ರಾ. ಜಿಲ್ಲೆ,

ದೇವನಹಳ್ಳಿ

465 ಕೋಟಿ ರೂ.1500
4ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್, ಬೆಂಗಳೂರು

ಮೈಸೂರು ಜಿಲ್ಲೆ,

ನಂಜನಗೂಡು ತಾಲ್ಲೂಕು

415 ಕೋಟಿ ರೂ.350
5ಶಿವಾ ಆಂಡ್ ಶಿವಾ ಅರ್ಥೊಪೆಡಿಕ್ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್

ಬೆಂಗಳೂರು ಗ್ರಾ. ಜಿಲ್ಲೆ,

ದೇವನಹಳ್ಳಿ

255 ಕೋಟಿ ರೂ.3830
6ಯುಆರ್ಸಿ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್

ಬೆಂಗಳೂರು ಗ್ರಾ. ಜಿಲ್ಲೆ,

ದೇವನಹಳ್ಳಿ

228.73 ಕೋಟಿ ರೂ.371
7ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೊರೇಷನ್

ಬೆಂಗಳೂರು ಗ್ರಾ. ಜಿಲ್ಲೆ,

ದಾಬಸ್​​ಪೇಟೆ

155.50 ಕೋಟಿ ರೂ.206
8ಮೆಟಲ್ ಸ್ಟ್ರೋರೇಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್

ಬೆಂಗಳೂರು ಗ್ರಾ. ಜಿಲ್ಲೆ,

ದಾಬಸ್​​ಪೇಟೆ

96 ಕೋಟಿ ರೂ.530
9ವೈರ್ಮನ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್

ಬೆಂಗಳೂರು ಗ್ರಾ. ಜಿಲ್ಲೆ,

ದಾಬಸ್​​ಪೇಟೆ

95 ಕೋಟಿ ರೂ.500
10ಸ್ಟ್ರೇಪರವ ಇಂಡಿಯಾ ಪ್ರೈವೇಟ್ ಲಿಮಿಟೆಡ್

ರಾಮನಗರ ಜಿಲ್ಲೆ,

ಹಾರೋಹಳ್ಳಿ

65 ಕೋಟಿ ರೂ.432
11 ಕಲ್ಕತ್ತಾ ಇಸ್ಪತ್

ಬೆಂಗಳೂರು ಗ್ರಾ. ಜಿಲ್ಲೆ,

ದಾಬಸ್​​ಪೇಟೆ

60.34 ಕೋಟಿ ರೂ.100
12ಔರೇಲಿಯಾ ಪ್ರಾಜಕ್ಟ್ಸ್ ಪ್ರೈವೇಟ್ ಲಿಮಿಟೆಡ್

ಬೆಂಗಳೂರು ಗ್ರಾ. ಜಿಲ್ಲೆ,

ದಾಬಸ್​​ಪೇಟೆ

55 ಕೋಟಿ ರೂ.100
13ಕ್ಲೌಡ್ ವೇವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ಬೆಂಗಳೂರು ಗ್ರಾ. ಜಿಲ್ಲೆ,

ದಾಬಸ್​​ಪೇಟೆ

52 ಕೋಟಿ ರೂ.262
14ಸುದರ್ಶನ ಎಕ್ಸ್ಟ್ರುಷನ್ಸ್ ಪ್ರೈವೇಟ್ ಲಿಮಿಟೆಡ್

ಬೆಂಗಳೂರು ಗ್ರಾ. ಜಿಲ್ಲೆ,

ದಾಬಸ್​​ಪೇಟೆ

50 ಕೋಟಿ ರೂ.140

ಓದಿ: ಸಿಎಂ ಸಿದ್ದರಾಮಯ್ಯಗೆ ಈ ಬಾರಿ ಬಜೆಟ್ ತಯಾರಿ ಮಧ್ಯೆ ಎದುರಾಗಿರುವ ಸವಾಲುಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.