ETV Bharat / state

'ಡಾ.ಮಂಜುನಾಥ್ ಅವರಿ​ಗೆ ಮತದಾರರು ಶಕ್ತಿ ತುಂಬಿದರೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ನಿಶ್ಚಿತ' - Anusuya Manjunath - ANUSUYA MANJUNATH

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಮಂಜುನಾಥ್ ಅವರಿಗೆ ಮತದಾರರು ಶಕ್ತಿ ತುಂಬುವ ಅವಶ್ಯಕತೆ ಇದೆ ಎಂದು ಪತ್ನಿ ಅನುಸೂಯ ಮಂಜುನಾಥ್ ಹೇಳಿದರು.

ಅನುಸೂಯ ಮಂಜುನಾಥ್
ಅನುಸೂಯ ಮಂಜುನಾಥ್
author img

By ETV Bharat Karnataka Team

Published : Mar 31, 2024, 9:52 AM IST

Updated : Mar 31, 2024, 11:15 AM IST

ಅನುಸೂಯ ಮಂಜುನಾಥ್ ಹೇಳಿಕೆ

ಬೆಂಗಳೂರು: ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೃದಯರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಕಣಕ್ಕಿಳಿದಿದ್ದಾರೆ. "ಕ್ಷೇತ್ರದ ಮತದಾರರು ಅವರಿಗೆ ಮತ ನೀಡುವ ಮೂಲಕ ಶಕ್ತಿ ತುಂಬಿದರೆ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರುವುದು ನಿಶ್ಚಿತ" ಎಂದು ಡಾ.ಮಂಜುನಾಥ್ ಅವರ ಪತ್ನಿ ಅನುಸೂಯ ತಿಳಿಸಿದರು.

ಡಾ.ಮಂಜುನಾಥ್​​ ಅವರ ರಾಜಕೀಯ ಪ್ರವೇಶ ಕುರಿತಂತೆ 'ಈಟಿವಿ ಭಾರತ'ದ ಜತೆ ಅನುಸೂಯ ಮಂಜುನಾಥ್​ ಮಾತನಾಡಿದರು.

"ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ತಮ್ಮ ಪತಿ ಗೆಲ್ಲುವ ವಿಶ್ವಾಸವಿದೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಅಪೇಕ್ಷೆ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಒತ್ತಾಯದ ಮೇರೆಗೆ ಮಂಜುನಾಥ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಧುಮುಕಿದ್ದಾರೆ" ಎಂದರು.

"ಟಿಕೆಟ್ ನೀಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆಗಳು. ಸ್ಪರ್ಧೆಯ ಬಗ್ಗೆ ಸಂತೋಷವೂ ಇದೆ, ಹಾಗೆಯೇ ನೋವು ಸಹ ಇದೆ" ಎಂದರು. "ರಾಜಕೀಯದಲ್ಲಿ ಏಳು ಬೀಳು ಇರುತ್ತದೆ. ಡಾ.ಮಂಜುನಾಥ್ ಬಹಳ ಸೂಕ್ಷ್ಮ ಮನಸ್ಸಿನವರು. ಚುನಾವಣೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಆತಂಕವಿದೆ" ಎಂದು ತಿಳಿಸಿದ್ದಾರೆ.

"ಜಯದೇವ ಆಸ್ಪತ್ರೆ ನಿರ್ದೇಶಕರಾಗಿದ್ದಾಗ ಡಾ.ಮಂಜುನಾಥ್ ಅವರು ದೊಡ್ಡ ಅಭಿಯಾನ ನಡೆಸಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಸಾಧನೆಯ ಹಿಂದೆ ನನ್ನ ಶಕ್ತಿಯಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಅವರ ಗೆಲುವಿಗೆ ನನ್ನ ಶಕ್ತಿ ಮಾತ್ರ ಸಾಲದು. ರಾಜ್ಯದ ಜನತೆ ಅವರಿಗೆ ತಮ್ಮ ಶಕ್ತಿ ತುಂಬುವ ಅವಶ್ಯಕತೆಯಿದೆ. ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮೊದಲು ಹಣ ಪಾವತಿ ನಂತರ ಎನ್ನುವ ಘೋಷವಾಕ್ಯ ಜಾರಿಗೊಳಿಸಿರುವ ಅವರು, ಆಸ್ಪತ್ರೆ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಗೆಲ್ಲಿಸಿದರೆ ಜಯದೇವ ಮಾದರಿಯಲ್ಲಿ ದೇಶದ ಆರೋಗ್ಯ ಕ್ಷೇತ್ರದ ಬದಲಾವಣೆ ತರುವುದು ನಿಶ್ಚಿತ" ಎಂದು ಅನುಸೂಯ ಭರವಸೆ ನೀಡಿದರು.

"ಡಾ.ಮಂಜುನಾಥ್ ಅವರ ಪರವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿಭಿನ್ನವಾಗಿ ಪ್ರಚಾರ ಮಾಡುತ್ತೇನೆ. ಈಗಿನ ಚುನಾವಣೆಯ ಪ್ರಚಾರ ಶೈಲಿ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯ ನಡೆಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಮಂಜುನಾಥ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಲಾಗುತ್ತದೆ" ಎಂದು ಅವರು ತಿಳಿಸಿದರು.

"ಪ್ರಧಾನಿ ಮೋದಿ ಸಾರಥ್ಯದ ಕೇಂದ್ರ ಸರಕಾರದ ಸಾಧನೆ, ಮಾಜಿ ಪ್ರಧಾನಿ ದೇವೇಗೌಡರ ಸಾಧನೆ, ಕುಮಾರಸ್ವಾಮಿಯವರು ಅಲ್ಪ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಧನೆ ಹಾಗು ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಅವರ ಸಾಧನೆಗಳು ಲೋಕಸಭೆ ಚುನಾವಣೆಯಲ್ಲಿ ತಮ್ಮ ಪತಿಯ ಗೆಲುವಿಗೆ ಸಹಕಾರಿಯಾಗಲಿದೆ. ಮತದಾರರು ಈ ಎಲ್ಲಾ ಸಾಧನೆಗಳನ್ನು ಗಮನಿಸಿ ಆಶೀರ್ವಾದ ಮಾಡುವ ನಂಬಿಕೆ ಇದೆ" ಎಂದು ಅನುಸೂಯ ಹೇಳಿದರು.

ಇದನ್ನೂ ಓದಿ: ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಗೆಲ್ಲಿಸುವ ಜವಾಬ್ದಾರಿ ಅಶೋಕ್ ಹೆಗಲಿಗೆ: ಎಲ್ಲ ಕಡೆ ಸಾಥ್​ ನೀಡುವ ಅಭಯ ನೀಡಿದ ಹೆಚ್​​ಡಿಕೆ - Dr C N Manjunath

Last Updated : Mar 31, 2024, 11:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.