ETV Bharat / state

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆ್ಯಂಟಿ ಹೈಜಾಕ್ ಭದ್ರತೆ: ಪ್ರಾಯೋಗಿಕ ಚಾಲನೆ - Anti Hijack Security - ANTI HIJACK SECURITY

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಆ್ಯಂಟಿ ಹೈಜಾಕ್ ಭದ್ರತೆಯನ್ನು ಅನುಷ್ಠಾನಗೊಳಿಸಲಾಗಿದೆ.

anti-hijack-security-at-hubballi-airport-due-to-threat-mail
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಆ್ಯಂಟಿ ಹೈಜಾಕ್ ಭದ್ರತೆ (ETV Bharat)
author img

By ETV Bharat Karnataka Team

Published : Jul 15, 2024, 4:04 PM IST

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಆ್ಯಂಟಿ ಹೈಜಾಕ್ ಭದ್ರತೆ (ETV Bharat)

ಹುಬ್ಬಳ್ಳಿ: ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬಹುತೇಕ ವಿಮಾನ ನಿಲ್ದಾಣಗಳಿಗೆ ಅನಾಮಧೇಯ ಬೆದರಿಕೆ ಮೇಲ್ ಬಂದಿರುವ ಬೆನ್ನಲ್ಲೇ ಈಗ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈಗ ವಿನೂತನ ರೀತಿಯ ಆ್ಯಂಟಿ ಹೈಜಾಕ್ ಭದ್ರತೆಯನ್ನು ಹುಬ್ಬಳ್ಳಿಯ ನಿಲ್ದಾಣದಲ್ಲಿ ಅನುಷ್ಠಾನಗೊಳಿಸಲಾಗಿದೆ.

ಅಂತಾರಾಷ್ಟ್ರೀಯ ದರ್ಜೆಗೆ ಏರುತ್ತಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಹಾಗೂ ಭದ್ರತಾ ಕಾರ್ಯವನ್ನು ಮತ್ತಷ್ಟು ಬಲಪಡಿಸುವ ಸದುದ್ದೇಶದಿಂದ ಆ್ಯಂಟಿ ಹೈಜಾಕ್ ಭದ್ರತೆಯನ್ನು ಅನುಷ್ಠಾನ ಮಾಡಲಾಗಿದ್ದು, ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ನೇತೃತ್ವದಲ್ಲಿ ಆ್ಯಂಟಿ ಹೈಜಾಕ್ ಟ್ರಯಲ್ ರನ್ ಮಾಡುವ ಮೂಲಕ ಅಣಕು ಪ್ರದರ್ಶನ ಕೂಡ ಮಾಡಲಾಯಿತು.

ಇನ್ನು ವಿಮಾನ ನಿಲ್ದಾಣದ ಪ್ರತಿಯೊಂದು ಚಟುವಟಿಕೆಗಳ ಮೇಲೆಯೂ ಕೂಡ ಹದ್ದಿನ ಕಣ್ಣು ಇಡಲಾಗಿದ್ದು, ಮತ್ತಷ್ಟು ಭದ್ರತೆ ದೃಷ್ಟಿಯಿಂದ ಆ್ಯಂಟಿ ಹೈಜಾಕ್ ಭದ್ರತೆಯನ್ನು ಅನುಷ್ಠಾನ ಮಾಡಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಕೂಡ ಪ್ರಾಯೋಗಿಕ ಚಾಲನೆ ದೊರೆತಿದೆ.

ಇದನ್ನೂ ಓದಿ : ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ಜೀವ ಬೆದರಿಕೆ ಮೇಲ್​ - Life threatening mail

ETV Bharat Logo

Copyright © 2025 Ushodaya Enterprises Pvt. Ltd., All Rights Reserved.