ETV Bharat / state

ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಶಕ್ತಿಪ್ರದರ್ಶನ - congress candidate road show - CONGRESS CANDIDATE ROAD SHOW

ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹಾವೇರಿಯಲ್ಲಿ ಶಕ್ತಿ ಪ್ರದರ್ಶಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಶಕ್ತಿಪ್ರದರ್ಶನ

author img

By ETV Bharat Karnataka Team

Published : Apr 18, 2024, 5:59 AM IST

ಹಾವೇರಿ: ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಬುಧವಾರ ತಮ್ಮ ಶಕ್ತಿಪ್ರದರ್ಶನ ಮಾಡಿದರು. ಏಲಕ್ಕಿ ನಗರಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಹಾವೇರಿಯ ಎಂ.ಜಿ.ರೋಡ್. ಹಳೇ ಪಿಬಿರಸ್ತೆ ಜೆಪಿ ಸರ್ಕಲ್, ಜೆ.ಹೆಚ್.ಪಟೇಲ್ ವೃತ್ತದಿಂದ ದುಂಡಿಬಸವೇಶ್ವರ ದೇವಸ್ಥಾನದವರೆಗೆ ರೋಡ್ ಶೋ ನಡೆಸಿದರು. ತೆರೆದ ವಾಹನದಲ್ಲಿ ನಡೆದ ರೋಡ್​ ಶೋನಲ್ಲಿ ಆನಂದಸ್ವಾಮಿ ಗಡ್ಡದೇವರಮಠಗೆ ಸಚಿವರಾದ ಹೆಚ್.ಕೆ.ಪಾಟೀಲ್, ಶಿವಾನಂದಪಾಟೀಲ್ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ರುದ್ರಪ್ಪ ಲಮಾಣಿ, ಬಸವರಾಜ್ ಶಿವಣ್ಣನವರ್, ಯು.ಬಿ.ಬಣಕಾರ್ ಸೇರಿದಂತೆ ಪ್ರಮುಖ ನಾಯಕರು ಸಾಥ್ ನೀಡಿದರು.

ಮೆರವಣಿಗೆ ಉದ್ದಕ್ಕೂ ವಿವಿಧ ಜಾನಪದ ಕಲಾತಂಡಗಳ ತಮ್ಮ ಕಲಾಪ್ರದರ್ಶನ ಮಾಡಿದವು. ಡೊಳ್ಳುಕುಣಿತ ಕುದುರೆ ಕುಣಿತ, ಮದ್ದಲೆ, ಜಾಂಜ್ ಬೃಹತ್ ಗೊಂಬೆಗಳ ಪ್ರದರ್ಶನ ಸೇರಿದಂತೆ ವಿವಿಧ ಕಲಾತಂಡಗಳು ಕಲಾಪ್ರದರ್ಶನ ನಡೆಸಿದವು. ಮೆರವಣಿಗೆ ಉದ್ದಕ್ಕೂ ನಾಯಕರಿಗೆ
ಪುಷ್ಪಗಳ ಸುರಿಮಳೆಯನ್ನೇ ಹರಿಸಲಾಯಿತು.

ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪ್ರದರ್ಶನ ಮಾಡಲಾಯಿತು. ಮುಂಜಾನೆ 11 ಗಂಟೆಗೆ ಸಚಿವರಾದ ಹೆಚ್.ಕೆ.ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಜೊತೆ ಚುನಾವಣಾಧಿಕಾರಿಗೆ ಮೂರು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಕ್ಯಾವಟರ ಪರ ಬಿಎಸ್​ವೈ ಮತಯಾಚನೆ - BS Yediyurappa

ETV Bharat Logo

Copyright © 2025 Ushodaya Enterprises Pvt. Ltd., All Rights Reserved.