ETV Bharat / state

ನೋಂದಣಿಗೆ ಇ-ಖಾತೆ ಕಡ್ಡಾಯಗೊಳಿಸುವ 2024 ಸಾಲಿನ‌ ನೋಂದಣಿ ತಿದ್ದುಪಡಿ ವಿಧೇಯಕ ಅಂಗೀಕಾರ - ಕಾವೇರಿ ತಂತ್ರಾಂಶ

ಕಾವೇರಿ ತಂತ್ರಾಂಶದಲ್ಲಿ ಅಟೋಮೆಟಿಕ್ ಆಗಿ ನಗರಸಭೆ ವ್ಯಾಪ್ತಿ ಡೇಟಾ ಬೇಸ್ ಚೆಕ್‌ ಮಾಡುತ್ತೆ, ಅದರಲ್ಲಿ ಖಾತೆ ಆಗಿದ್ದರೆ ಮಾತ್ರ ನೋಂದಣಿ ಆಗಲಿದೆ. ಇನ್ನು ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ಆಗಲ್ಲ. ಇನ್ನು ಇ ಖಾತೆಯಲ್ಲಿ ಆಸ್ತಿ ನೋಂದಣಿ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

Krishna Byre Gowda informed
ನೋಂದಣಿ ಇ-ಖಾತೆ ಕಡ್ಡಾಯ ಕುರಿತು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
author img

By ETV Bharat Karnataka Team

Published : Feb 21, 2024, 8:11 PM IST

ನೋಂದಣಿ ಇ-ಖಾತೆ ಕಡ್ಡಾಯ ಕುರಿತು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಬೆಂಗಳೂರು: ನೋಂದಣಿ ಇ-ಖಾತೆ ಕಡ್ಡಾಯಗೊಳಿಸುವ 2024 ಪ್ರಸಕ್ತ ಸಾಲಿನ‌ ನೋಂದಣಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ನಗರ ಸಭೆಗಳಲ್ಲಿ ಇ-ಖಾತೆ ಇದ್ದರೆ ಮಾತ್ರ ನೋಂದಣಿ ಮಾಡುವದಕ್ಕೆ ಕಾನೂನು ಅನ್ವಯ ಎಂದು ವಿಧೇಯಕ ತಿದ್ದುಪಡಿಗೆ ತರಲಾಗಿದೆ.

ಈ ಬಗ್ಗೆ ಪರ್ಯಾಲೋಚನೆ ಮಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಹಣಕಾಸು ಇಲಾಖೆಯವರು ಡಿಸೆಂಬರ್ ನಲ್ಲಿ ನಮಗೆ ಪತ್ರ ಬರೆದು ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ನಡೆಯುತ್ತಿದೆ.‌ ಇದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಸಂಬಂಧ ಇದೀಗ ಬಜೆಟ್ ಘೋಷಣೆಯಂತೆ ತಿದ್ದುಪಡಿ ವಿಧೇಯಕ ತರುತ್ತಿದ್ದೇವೆ. 71Aಯಡಿ ತಿದ್ದುಪಡಿ ಮಾಡಲಾಗುತ್ತಿದೆ.‌ ಖಾತಾ ಮಾಡುವಾಗ ಗ್ರಾಮೀಣ ಪ್ರದೇಶಕ್ಕೆ ಇ ಸ್ವತ್ತು ನೀಡಲಾಗಿತ್ತು. ನಗರ ಪ್ರದೇಶಗಳಿಗೆ ಇ ಆಸ್ತಿ ನೀಡಲಾಗಿತ್ತು. ಜನರು ಆಸ್ತಿ ನೋಂದಣಿ ಮಾಡುವಾಗ ಪಂಚಾಯತಿ ವ್ಯಾಪ್ತಿಯಲ್ಲಿ ಇ ಖಾತೆ ಇದೆಯಾ ಎಂದು ಅಟೊಮೇಟಿಕ್ ಆಗಿ ಚೆಕ್ ಮಾಡಲಾಗುತ್ತೆ. ಆದರೆ ನಗರ ಪ್ರದೇಶಗಳಲ್ಲಿ ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ಮಾಡಲಾಗುತ್ತಿತ್ತು ಎಂದು ವಿವರಿಸಿದರು.‌

ಕಾನೂನು ಬಾಹಿರ ನೋಂದಣಿಗೆ ಕಡಿವಾಣ ಹಾಕಲು ತಿದ್ದುಪಡಿ: ಈ ವಿಧೇಯಕದಲ್ಲಿ ಪೇಪರ್ ಖಾತಾ ಆಧಾರದಲ್ಲಿ ನೋಂದಣಿ ಮಾಡುವುದನ್ನು ರದ್ದು ಮಾಡುತ್ತಿದ್ದೇವೆ. ಈ ವಿಧೇಯಕದಲ್ಲಿ ಇನ್ನು ಮುಂದೆ ನೋಂದಣಿಗೆ ಈಗ ಇ-ಆಸ್ತಿ ಕಡ್ಡಾಯ ಮಾಡಲಾಗುತ್ತಿದೆ. ಕಾವೇರಿ ತಂತ್ರಾಂಶದಲ್ಲಿ ಅಟೋಮೇಟಿಕ್ ಆಗಿ ನಗರಸಭೆ ವ್ಯಾಪ್ತಿ ಡೇಟಾ ಬೇಸ್ ಚೆಕ್‌ ಮಾಡುತ್ತೆ. ಅದರಲ್ಲಿ ಖಾತೆ ಆಗಿದ್ದರೆ ಮಾತ್ರ ನೋಂದಣಿ ಆಗಲಿದೆ. ಪೇಪರ್ ಖಾತೆ ಆಧಾರದಲ್ಲಿ ನೋಂದಣಿ ಆಗಲ್ಲ. ಬಿಡಿಎ ಖಾತೆ ಅಥವಾ ಇ ಖಾತಾ ಇದ್ದರೆ ಮಾತ್ರ ನೋಂದಣಿ ಆಗಲಿದೆ.ಕಾನೂನು ಬಾಹಿರ ನೋಂದಣಿಯನ್ನು ಕಡಿವಾಣ ಹಾಕಲು ಈ ತಿದ್ದುಪಡಿ ತರಲಾಗುತ್ತಿದೆ ಎಂದರು.

ಜನರು ಅವರ ಜಾಗದಲ್ಲಿ ಕೂತು ನೋಂದಣಿ ಕಚೇರಿಗೆ ಹೋಗದೇ ನೋಂದಣಿ ಮಾಡಬಹುದಾಗಿದೆ. ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಈ ತಿದ್ದುಪಡಿ ತರಲಾಗುತ್ತಿದೆ. ಇಸಿ (ಎನ್ ಕಂಬರೆನ್ಸಿ ಸರ್ಟಿಫಿಕೇಟ್)ನ್ನು ಎಲೆಕ್ಟ್ರಾನಿಕ್ ಆಗಿ ಕೊಡಲಾಗುತ್ತಿದೆ. ಅದೇ ರೀತಿ ಸಿಸಿ ಹಳೆ ಡೀಡ್ಸ್​​ಗಳನ್ನು ಈಗ ಪೇಪರ್ ಮೂಲಕ ಕೊಡಲಾಗುತ್ತಿದೆ. ಅವುಗಳನ್ನು ಎಲೆಕ್ಟ್ರಾನಿಕ್ ಮೋಡ್​ ನಲ್ಲಿ ಕೊಡಲು ನಿಯಮ ರೂಪಿಸಲಾಗಿದೆ. ನೂರು ವರ್ಷದಷ್ಟು ಹಳೆ ಡೀಡ್​ಗಳನ್ನು ಸ್ಕ್ಯಾನ್ ಮಾಡುತ್ತೇವೆ. ಹಳೆ ಡೀಡ್ ಗಳ ದೃಢೀಕೃತ ಪ್ರತಿಯನ್ನು ಎಲೆಕ್ಟ್ರಾನಿಕ್ ಆಗಿ ಕೊಡಲಾಗುವುದು. ಆನ್ ಲೈನ್ ಆಗಿ ಅರ್ಜಿ ಹಾಕಿದರೆ ಆನ್ ಲೈನ್ ಮೂಲಕ ಎಲೆಕ್ಟ್ರಾನಿಕ್ ಸಹಿ ಹಾಕಿ ಸಿಸಿ ಪ್ರತಿಗಳನ್ನು ಕೊಡಲಾಗುವುದು ಎಂದು ಈ ವೇಳೆ ಸ್ಪಷ್ಟಪಡಿಸಿದರು.

ಸ್ಟಾಂಪ್​ ಡ್ಯೂಟಿ ಡಿಡಿ ಬದಲು ಡಿಜಿಟಲ್ ಮೂಲಕ ಪಾವತಿ: 2024 ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕಕ್ಕೂ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. ಪಾರದರ್ಶಕ ಕಾಯ್ದುಕೊಳ್ಳಲು ಡಿಡಿ ಮೂಲಕ ಕಟ್ಟುವ ಹಣವನ್ನು ಆನ್ ಲೈನ್ ಪಾವತಿ ಮೂಲಕ ಸ್ಟಾಂಪ್ ಡ್ಯೂಟಿ ಕಟ್ಟುವ ತಿದ್ದುಪಡಿ ವಿಧೇಯಕ ಇದಾಗಿದೆ. ಡಿಡಿ ವ್ಯವಸ್ಥೆಯನ್ನು ತೆಗೆದು ಹಾಕಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ತರಲಾಗುತ್ತಿದೆ. ಪಾರದರ್ಶಕತೆ, ಸೋರಿಕೆ ತಡೆ ಕಟ್ಟಲು ಈ ವಿಧೇಯಕ ತರಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಇದನ್ನೂಓದಿ:ಸಿಗರೇಟು ಸೇದುವ ವಯೋಮಿತಿ 21ಕ್ಕೆ ಹೆಚ್ಚಿಸುವ ವಿಧೇಯಕ ಅಂಗೀಕಾರ: ನಿಯಮ ಮೀರಿದ್ರೆ 1000 ರೂ. ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.