ETV Bharat / state

ಮಗನಿಗೆ ಜಾಮೀನು ಕೊಡಿಸಲು ಆತನ ತಾಯಿ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ದಾಖಲು

ನಿನ್ನ ಮಗನಿಗೆ ಜಾಮೀನು ಕೊಡಿಸುವುದಕ್ಕೆ ಸಹಾಯ ಮಾಡುವುದಾಗಿ ಹೇಳಿ ವ್ಯಕ್ತಿಯೊಬ್ಬ ಆರೋಪಿಯ ತಾಯಿಯ ಮೇಲೆ ಕಳೆದ ಒಂದು ತಿಂಗಳಿನಿಂದ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

rape on mother  bail matter  rape Case registered  ತಾಯಿ ಮೇಲೆ ಅತ್ಯಾಚಾರ ಆರೋಪ  ಅತ್ಯಾಚಾರ ಪ್ರಕರಣ ದಾಖಲು
ಮಗನಿಗೆ ಜಾಮೀನು ಕೊಡಿಸಲು ತಾಯಿ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ದಾಖಲು
author img

By ETV Bharat Karnataka Team

Published : Feb 27, 2024, 6:09 PM IST

ಬೆಳಗಾವಿ: ಕೊಲೆ ಪ್ರಕರಣವೊಂದರ ಆರೋಪಿಗೆ ಜಾಮೀನು ಕೊಡಿಸುವ ನೆಪದಲ್ಲಿ ಆತನ ತಾಯಿ ಮೇಲೆ ಕಳೆದ ಒಂದು ತಿಂಗಳಿನಿಂದ ಕೀಚಕನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಅನೈತಿಕ ಸಂಬಂಧಕ್ಕೆ ಪುಸಲಾಯಿಸಿ ಮಹಿಳೆಯ ಮನಸ್ಸಿಗೆ ವಿರುದ್ಧವಾಗಿ ತಿಂಗಳ ಕಾಲ ದೈಹಿಕ ಸಂಪರ್ಕ ಎಸಗಿರುವ ಆರೋಪ ವ್ಯಕ್ತಿಯೊಬ್ಬನ ವಿರುದ್ಧ ಕೇಳಿ ಬಂದಿದೆ.

ಕೊಲೆ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದೆ ಎನ್ನುತ್ತಿರುವ ಮಹಿಳೆಯ ಮಗ ಬಂಧಿತವಾಗಿದ್ದ. ಮಹಿಳೆಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿಡಿಯೋವನ್ನು ಆರೋಪಿ ಹರಿಯಬಿಟ್ಟು ವಿಕೃತಿ ಮೆರೆದಿದ್ದಾನೆ.

ಅಷ್ಟೇ ಅಲ್ಲದೆ ಮಹಿಳೆಯ ಮಗಳನ್ನು ಸಹ ಆರೋಪಿ ಕಿಡ್ನಾಪ್ ಮಾಡಿದ್ದು, ಸದ್ಯ ನ್ಯಾಯಕ್ಕಾಗಿ ಸಂತ್ರಸ್ತ ಮಹಿಳೆ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ. ನ್ಯಾಯ ಕೊಡಿಸಿ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಈ ಮಹಿಳೆಯ ಸಹಾಯಕ್ಕೆ ಎನ್​ಜಿಓ ಬಂದಿದೆ. ಪ್ರಕರಣ ಸಹ ದಾಖಲಾಗಿದೆ.

ಎನ್​ಜಿಒ ಮುಖ್ಯಸ್ಥೆ ಪ್ರಮೀದಾ ಹಜಾರೆ ಮಾತನಾಡಿ, 'ಆ ನೊಂದ ಮಹಿಳೆ ನಮ್ಮ ಕಚೇರಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು. ತನ್ನ ಎರಡನೇ ಮಗ 2023ರ ಡಿಸೆಂಬರ್ ತಿಂಗಳಲ್ಲಿ ಕೊಲೆ ಆರೋಪದಡಿ ಆರೋಪಿಯಾಗಿದ್ದಾನೆ. ಆತ ನ್ಯಾಯಾಂಗ ಬಂಧನದಲ್ಲಿದ್ದು, ಬಿಡಿಸಿಕೊಂಡು ಬರಲು ಜಾಮೀನುದಾರ ಬೇಕಾಗುತ್ತಾರೆ. ಯಾರೂ ಕೂಡ ಸಹಾಯಕ್ಕೆ ಬರದೇ ಇದ್ದಾಗ ಪರಿಚಿತ ಮುಂದ ಬಂದ' ಸಂತ್ರಸ್ತೆ ಹೇಳಿಕೊಂಡಿರುವ ಬಗ್ಗೆ ಹಜಾರೆ ಅವರು ವಿವರಿಸಿದ್ದಾರೆ.

'ಆದರೆ ನಿಮ್ಮ ಪುತ್ರನಿಗೆ ಜಾಮೀನು ನೀಡ್ತಿನಿ, ಆದ್ರೆ ನೀನು ನನ್ನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಳ್ಳಬೇಕು. ಇಲ್ಲವಾದರೇ ನಾನು ಜಾಮೀನು ಆಗಲ್ಲ ಎಂದಿದ್ದರು. ಇದರಿಂದ ವಿಧಿಯಿಲ್ಲದೇ ತಾಯಿ ತನ್ನ ಮಗನನ್ನು ಬಿಡಿಸಿಕೊಳ್ಳಲು ಆತ ಹೇಳಿದ ಮಾತಿಗೆ ಸಮ್ಮತಿ ಸೂಚಿಸಿದ್ದಳು. ಬಳಿಕ ಮಗ ಜಾಮೀನು ಪಡೆದು ಹೊರ ಬಂದ ಬಳಿಕ ತನ್ನ ಅನೈತಿಕ ಸಂಬಂಧದ ತಪ್ಪಿನ ಅರಿವಾಗಿ ಆರೋಪಿಯೊಂದಿಗಿನ ಸಂಪರ್ಕ ಕಡಿತಗೊಳಿಸಿದ್ದಳು. ಇದರಿಂದ ರೊಚ್ಚಿಗೆದ್ದ ಆರೋಪಿಯು ಮಹಿಳೆ ಜೊತೆಗೆ ಇದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಅಲ್ಲದೇ ನನಗೆ 50 ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು, ಕುಟುಂಬ ಸದಸ್ಯರನ್ನೂ ಕಿಡ್ನಾಪ್ ಮಾಡಿದ್ದಾನೆ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ. ಇವನಿಗೆ ಶಿಕ್ಷೆ ಆಗಬೇಕು' ಎಂದು ಎನ್​ಜಿಒ ಮುಖ್ಯಸ್ಥೆ ಹಜಾರೆ ಅವರು ಆಗ್ರಹಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಪ್ಪ ಗುಳೇದ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ‌ ಹರಿಯಬಿಟ್ಟಿರುವ ವಿಡಿಯೋಗಳನ್ನು ಪರಿಶೀಲಿಸಲಾಗುವುದು. ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಓದಿ: ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬರುತ್ತಿದ್ದಾಗ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ 6 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.