ETV Bharat / state

ಪತ್ನಿಗೆ ಗೊತ್ತಿಲ್ಲದಂತೆ ಮತ್ತೊಂದು ನಿಶ್ಚಿತಾರ್ಥ ಆರೋಪ: ಕಿರುತೆರೆ ನಟನ ವಿರುದ್ಧ ದೂರು - Complaint Against Serial Actor - COMPLAINT AGAINST SERIAL ACTOR

ಪತ್ನಿ ಇರುವಾಗಲೇ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಆರೋಪ ಕನ್ನಡ ಕಿರುತೆರೆ ನಟನ ವಿರುದ್ಧ ಕೇಳಿ ಬಂದಿದೆ.

ಕಿರುತೆರೆ ನಟ ಸನ್ನಿ ಮಹಿಪಾಲ್
ಕಿರುತೆರೆ ನಟ ಸನ್ನಿ ಮಹಿಪಾಲ್ (ETV Bharat)
author img

By ETV Bharat Karnataka Team

Published : Jul 23, 2024, 10:35 AM IST

Updated : Jul 23, 2024, 10:41 AM IST

ಬೆಂಗಳೂರು: ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಪ್ರಶ್ನಿಸಿದ ಪತ್ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪ ಕನ್ನಡ ಕಿರುತೆರೆ ನಟನ ವಿರುದ್ಧ ಕೇಳಿಬಂದಿದೆ.

ಪತ್ನಿಯ ಆರೋಪ: ಸನ್ನಿ ಮಹಿಪಾಲ್ ಹಾಗು ನಾನು ಫೆಬ್ರವರಿಯಿಂದ ಪರಿಚಿತರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸನ್ನಿ ಮಹಿಪಾಲ್​, ಧಾರಾವಾಹಿಯೊಂದರಲ್ಲಿ​ ನಟಿಸುತ್ತಿದ್ದರು. ಜನವರಿಯಲ್ಲಿ ಫೇಸ್‌ಬುಕ್​ ಮೂಲಕ ನನಗೆ ಪರಿಚಯವಾದರು. ನಂತರ ಪ್ರೀತಿಸುತ್ತಿರುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದರು. ಗರ್ಭಿಣಿಯಾಗಿದ್ದ ನಾನು ಮದುವೆಯಾಗುವಂತೆ ಒತ್ತಾಯಿಸಿದೆ. ಜೂನ್​​ 15ರಂದು ದೇವಸ್ಥಾನವೊಂದರಲ್ಲಿ ನಮ್ಮಿಬ್ಬರ ವಿವಾಹ ನಡೆಯಿತು.

ಮದುವೆಯಾದ ಬಳಿಕ ಒಂದು ವಾರವೂ ಜೊತೆಗಿರದ ಪತಿ ತನ್ನ 'ಪೋಷಕರನ್ನು ಒಪ್ಪಿಸಿ ಬರುತ್ತೇನೆ, ಅಲ್ಲಿಯವರೆಗೂ ಇಬ್ಬರೂ ಸ್ನೇಹಿತರಂತೆಯೇ ಇರಬೇಕು, ಸ್ನೇಹಿತರಂತೆಯೇ ಮೆಸೇಜ್ ಮಾಡಬೇಕು' ಎಂದು ಷರತ್ತು ಹಾಕಿದ್ದರು. ನಂತರ ಅವರು ಮಂಗಳೂರಿಗೆ ತೆರಳಿದ್ದು, ಕೆಲ ದಿನಗಳ ಹಿಂದೆ ಪೋಷಕರ ಸಮ್ಮುಖದಲ್ಲಿ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಎರಡು ತಿಂಗಳ ಗರ್ಭಿಣಿಯಾಗಿರುವ ನಾನು ಸನ್ನಿಯನ್ನು ಪ್ರಶ್ನಿಸಲು ತಡರಾತ್ರಿ ವಿಜ್ಞಾನ ನಗರದಲ್ಲಿರುವ ಆತನ ನಿವಾಸಕ್ಕೆ ತೆರಳಿದ್ದೆ. ಈ ವೇಳೆ ಗಲಾಟೆ ನಡೆದು ಚಾಕುವಿನಿಂದ ತೋಳಿಗೆ ಇರಿದಿದ್ದಾರೆ. ಸ್ವತಃ ಕಾರು ಚಲಾಯಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲಾದೆ. ಗಲಾಟೆಯಲ್ಲಿ ನನಗೆ ಗರ್ಭಪಾತವಾಗಿದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ತಮ್ಮನ್ನು ಬಲವಂತವಾಗಿ ಮದುವೆ ಮಾಡಿಕೊಂಡಿದ್ದು, ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ‌ ಸನ್ನಿ ಮಹಿಪಾಲ್ ಎಚ್​ಎಎಲ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ; ಸ್ಥಳಕ್ಕೆ ಧಾವಿಸಿ ಮೂವರ ಪ್ರಾಣ ರಕ್ಷಿಸಿದ ಪೊಲೀಸರು - Police Foil Suicide Bid

Last Updated : Jul 23, 2024, 10:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.