ಚಾಮರಾಜನಗರ: ಅನಿವಾಸಿ ಕನ್ನಡಿಗರು ಆಯೋಜನೆ ಮಾಡುವ ಪ್ರತಿಷ್ಠಿತ "ಅಕ್ಕ ವಿಶ್ವ ಕನ್ನಡ ಸಮ್ಮೇಳನ"ಕ್ಕೆ ಚಾಮರಾಜನಗರದ ಗಾಯಕನಿಗೆ ಅವಕಾಶ ಸಿಕ್ಕಿದೆ. ಅಮೆರಿಕದ ರಿಚ್ ಮಂಡ್ ನಗರದಲ್ಲಿ ಆ.30 ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಅಕ್ಕ ಕನ್ನಡ ಸಮ್ಮೇಳನಕ್ಕೆ ಚಾಮರಾಜನಗರದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರಿಗೆ ಅವಕಾಶ ದೊರಕಿದೆ.
ಜಾನಪದವೇ ಸತ್ಯ - ಜಾನಪದವೇ ನಿತ್ಯ ಎಂಬ ಶೀರ್ಷಿಕೆಯಡಿ ಜಾನಪದ ಸಂಸ್ಕೃತಿಯನ್ನು ನರಸಿಂಹಮೂರ್ತಿ ಅನಾವರಣ ಮಾಡಲಿದ್ದಾರೆ. ಅಂದಹಾಗೆ ಮೂರನೇ ಬಾರಿ ನರಸಿಂಹಮೂರ್ತಿ ಅವರಿಗೆ ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗುವ ಭಾಗ್ಯ ಸಿಕ್ಕಿದೆ. ಸಮ್ಮೇಳನದಲ್ಲಿ ಚಾಮರಾಜನಗರ ಜಿಲ್ಲೆಯ ಪವಾಡ ಪುರುಷರಾದ ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ ಸ್ವಾಮಿ, ಮಂಟೆಸ್ವಾಮಿ ಗೀತೆಗಳನ್ನು ಹಾಡಿ ಅಮೆರಿಕದ ಕನ್ನಡಿಗರನ್ನು ರಂಜಿಸಲಿದ್ದಾರೆ. 2010 ರಲ್ಲಿ ನ್ಯೂಜೆರ್ಸಿಯಲ್ಲಿ, 2014 ರಲ್ಲಿ ನಡೆದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ನರಸಿಂಹಮೂರ್ತಿ ಭಾಗಿಯಾಗಿದ್ದರು.
ಇದನ್ನೂ ಓದಿ: ಗಗನಯಾನಕ್ಕೆ ತೆರಳಲಿವೆ ಧಾರವಾಡದ ನೊಣಗಳು - FLIES READY TO FLY TOWARDS SPACE