ETV Bharat / state

ವಾರದ 5 ದಿನ ಬೆಂಗಳೂರು-ಗ್ಯಾಟ್ವಿಕ್ ನಡುವೆ ಏರ್ ಇಂಡಿಯಾ ನೇರ ವಿಮಾನ ಸೇವೆ ಆರಂಭ - direct flight btw Bengaluru Gatwick - DIRECT FLIGHT BTW BENGALURU GATWICK

ಮಂಗಳವಾರ ಮತ್ತು ಶನಿವಾರ ಹೊರತುಪಡಿಸಿ ವಾರದ ಐದು ದಿನ ಏರ್ ಇಂಡಿಯಾ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ವಿಮಾನ ಸೇವೆ ಇರಲಿದೆ ಎಂದು ಏರ್​ ಇಂಡಿಯಾ ತಿಳಿಸಿದೆ.

Air India flight
ಏರ್ ಇಂಡಿಯಾ ವಿಮಾನ (ETV Bharat)
author img

By ETV Bharat Karnataka Team

Published : Jun 14, 2024, 1:08 PM IST

ಬೆಂಗಳೂರು: ಯುಕೆಯ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣ ಗ್ಯಾಟ್ವಿಕ್ ನಗರಕ್ಕೆ ಬೆಂಗಳೂರಿನಿಂದ ನೇರ ವಿಮಾನ ಸೇವೆಯನ್ನು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಆರಂಭಿಸುತ್ತಿದೆ. ಆಗಸ್ಟ್ 18 ರಿಂದ ವಿಮಾನಯಾನ ಆರಂಭವಾಗಲಿದ್ದು, ಈಗಾಗಲೇ ಬೆಂಗಳೂರು – ಗ್ಯಾಟ್ವಿಕ್ ಮಾರ್ಗದ ಬುಕ್ಕಿಂಗ್ ಆರಂಭವಾಗಿದೆ ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.

ಬೆಂಗಳೂರು, ಲಂಡನ್‌ನ ಹೀಥ್ರೂ ಮತ್ತು ಗ್ಯಾಟ್ವಿಕ್ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಭಾರತದ ನಗರವಾಗಿದೆ. ಏರ್ ಇಂಡಿಯಾವು ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ವಾರಕ್ಕೆ 5 ಬಾರಿ ವಿಮಾನಯಾನ ಸೇವೆ ನೀಡಲಿದೆ. ವಾರದಲ್ಲಿ ಮಂಗಳವಾರ ಮತ್ತು ಶನಿವಾರ ಸೇವೆ ಇರುವುದಿಲ್ಲ. AI 177 ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ 1.05 ಕ್ಕೆ ಹೊರಟು, ರಾತ್ರಿ 7.05 ಕ್ಕೆ ಗ್ಯಾಟ್ವಿಕ್ ತಲುಪಲಿದೆ. AI 178 ವಿಮಾನವು ಗ್ಯಾಟ್ವಿಕ್ ನಗರದಿಂದ ರಾತ್ರಿ 8.35ಕ್ಕೆ ಟೇಕ್ ಆಫ್ ಆಗಿ, ಬೆಳಗ್ಗೆ 10.50ಕ್ಕೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಏರ್ ಇಂಡಿಯಾ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

''ಬೆಂಗಳೂರು - ಗ್ಯಾಟ್ವಿಕ್ ಮಾರ್ಗದಲ್ಲಿ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವನ್ನು ಏರ್ ಇಂಡಿಯಾ ಸಂಸ್ಥೆ ಬಳಸಲಿದೆ. ಬ್ಯುಸಿನೆಸ್ ಕ್ಲಾಸ್​ನಲ್ಲಿ 18 ಫ್ಲಾಟ್ ಹಾಸಿಗೆಗಳು ಮತ್ತು ಎಕನಾಮಿಕ್ ಕ್ಲಾಸ್​ನಲ್ಲಿ 238 ವಿಶಾಲವಾದ ಆಸನಗಳನ್ನು ಒಳಗೊಂಡಿರಲಿದೆ. ಅತಿಥಿಗಳಿಗೆ ಅನುಕೂಲಕರ, ತಡೆರಹಿತ ವಿಮಾನಗಳನ್ನು ನೀಡಲು ನಮಗೆ ಸಂತೋಷವಾಗುತ್ತಿದೆ. ಈ ಹೊಸ ಮಾರ್ಗವು, ಪ್ರಮುಖ ವ್ಯಾಪಾರ ಮತ್ತು ವಿರಾಮ ಸ್ಥಳಗಳ ನಡುವಿನ ಪ್ರಯಾಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲಿದೆ. ಮತ್ತು ನಮ್ಮ ಜಾಗತಿಕ ಜಾಲವನ್ನು ವಿಸ್ತರಿಸುತ್ತಿದೆ'' ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಬೆಲ್ ವಿಲ್ಸನ್ ತಿಳಿಸಿದರು.

ಇದನ್ನೂ ಓದಿ: ಒಂದೇ ರನ್​ವೇ; ಸೆಕೆಂಡ್​ಗಳಲ್ಲೇ ಒಂದು ವಿಮಾನ ಟೇಕ್ ಆಫ್, ಮತ್ತೊಂದು ಲ್ಯಾಂಡಿಂಗ್! ತಪ್ಪಿದ ಅನಾಹುತ - TWO PLANES ON SAME RUNWAY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.