ETV Bharat / state

ಶಿವಮೊಗ್ಗ ನಗರದಿಂದ ರಾಘವೇಂದ್ರಗೆ 1.5 ಲಕ್ಷ ಮತ ಕೊಡಿಸುವ ಗುರಿ ಇದೆ: ಶಾಸಕ ಚನ್ನಬಸಪ್ಪ - mla channabasappa

ಮಾ. 31ರಂದು ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಪೇಜ್ ಪ್ರಮುಖರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.

aiming-to-give-1-and-half-lakh-votes-from-shivamoga-city-to-raghavendra-says-mla-channabasappa
ಶಿವಮೊಗ್ಗ ನಗರದಿಂದ ರಾಘವೇಂದ್ರಗೆ 1.5 ಲಕ್ಷ ಮತ ಕೊಡಿಸುವ ಗುರಿ ಇದೆ: ಶಾಸಕ ಚನ್ನಬಸಪ್ಪ
author img

By ETV Bharat Karnataka Team

Published : Mar 29, 2024, 10:07 PM IST

Updated : Mar 29, 2024, 10:59 PM IST

ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಬಂದರೆ ಜೊತೆಯಲ್ಲಿ, ಬಾರದಿದ್ದರೆ ಬಿಟ್ಟು, ಎದುರು ಬಂದರೆ ಮೆಟ್ಟಿ ದೇಶ ಕಟ್ಟಿದವರು ನಾವು. ಎಲ್ಲಾ ರಾಷ್ಟ್ರ ಭಕ್ತರು ಬಿಜೆಪಿ ಜೊತೆಗಿದ್ದಾರೆ. ಹಿಂದೂ ಸಮಾಜಕ್ಕೆ ಶಕ್ತಿ ತುಂಬುವಂತಹ ಹಿರಿಯರು ನಮ್ಮೊಂದಿಗಿದ್ದಾರೆ. ಈಶ್ವರಪ್ಪನವರೊಂದಿಗೆ ಐದಾರು ಜನ ಕಾರ್ಪೋರೇಟರ್​ಗಳು ಹೋಗಿದ್ದಾರೆ, ಆದರ ಬಗ್ಗೆ ನಾವು ಯೋಚನೆ ಮಾಡುತ್ತೇವೆ ಎಂದು ಶಿವಮೊಗ್ಗ ನಗರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಜನ ಸಂಘದಿಂದ ಹಿಡಿದು 1980 ರಿಂದ ಭಾರತೀಯ ಜನತಾ ಪಕ್ಷವಾಗಿ ರೂಪುಗೊಂಡಿದೆ. ಜನಸಂಘದಿಂದಲೂ ಹಿಂದೂಗಳ ಹಿತರಕ್ಷಣೆಗಾಗಿ ಹಾಗೂ ಉಳಿವಿಗಾಗಿ ಮತ ನೀಡುವಂತೆ ಮತಯಾಚಿಸುತ್ತಾ ಬಂದಿದೆ. ಈಗಲೂ ಸಹ ಹಿಂದುತ್ವದ ಮೇಲೆ ಮತಯಾಚಿಸುತ್ತಿದೆ. ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಗಟ್ಟಾಗಿದ್ದು, ಪಕ್ಷ ನಿರಂತರವಾಗಿ ವೈಚಾರಿಕತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತ ಜನರ ಜೊತೆಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಿದ್ಧತೆಗಳು ನಡೆಯದೇ, ನಿರಂತರವಾಗಿ ನಡೆಯುತ್ತಿದೆ ಎಂದರು.

ಪ್ರತಿ ಮತಗಟ್ಟೆಯಲ್ಲಿ 13 ಜನರ ಕಾರ್ಯಕರ್ತರ ತಂಡ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಮೋರ್ಚಾ, ಯುವ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ ಒಳಗೊಂಡಂತೆ ಎಂಟು ವಿವಿಧ ಮೋರ್ಚಾಗಳನ್ನು ಬಲಪಡಿಸುವ ಕೆಲಸ ಆಗಿದೆ. ಒಂದು ಪೇಜ್‌ನಲ್ಲಿ 30 ಮತಗಳಿದ್ದು ಅವರನ್ನು ಪೇಜ್ ಪ್ರಮುಖರು ಸಂಪರ್ಕಿಸಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ 10 ಸಾವಿರದ 700 ಮತಗಳು ಬಂದಿದ್ದವು. ಹಿಂದುತ್ವದ ಉಳಿವಿಗೆ ನಮ್ಮ ಆದ್ಯತೆ. ಕಳೆದ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿಗೆ ಸಾಕಷ್ಟು ಮತಗಳು ಬಂದಿವೆ. ಈ ಬಾರಿಯೂ ಕೂಡ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗ ನಗರದಿಂದ 1.5 ಲಕ್ಷ ಮತವನ್ನು ಕೊಡಿಸುವುದರ ಮೂಲಕ ಅವರನ್ನು ಗೆಲ್ಲಿಸುತ್ತೇವೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ 1.5 ಲಕ್ಷ ಮತ ಕೊಡಿಸುವ ಗುರಿ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಮಾ. 31ರಂದು ಸಂಜೆ 5ಕ್ಕೆ ನಗರದ ಸೈನ್ಸ್ ಮೈದಾನದಲ್ಲಿ ಪೇಜ್ ಪ್ರಮುಖರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಬೂತ್ ಗೆದ್ದರೆ ದೇಶ ಗೆದ್ದಂತೆ ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸುತ್ತಿದ್ದೆವು. ಆದರೆ ಇದೀಗ ಅದಕ್ಕಿಂತ ಮುಂದೆ ಸಾಗಿ ಪೇಜ್ ಗೆದ್ದರೆ ದೇಶ ಗೆಲ್ಲಲಿದೆ ಎಂದು ಚುನಾವಣೆಗೆ ಹೊರಟಿದ್ದೇವೆ. ಶಿವಮೊಗ್ಗ ನಗರದ ಏಳು ಸಾವಿರ ಪೇಜ್ ಪ್ರಮುಖರಿದ್ದು, ಅವರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಠಾಧೀಶರ ಬಗ್ಗೆ ಹಗುರ ಹೇಳಿಕೆ ಆರೋಪ: ದೇವಾಲಯಕ್ಕೆ ಈಶ್ವರಪ್ಪ ಬಂದು ಘಂಟೆ ಹೊಡೆಯಲಿ - ಬಿ ವೈ ರಾಘವೇಂದ್ರ ಸವಾಲು - BJP candidate b y raghavendra

Last Updated : Mar 29, 2024, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.