ETV Bharat / state

ಅಂತರ್ಜಲದ ಮೇಲೆ ಕಣ್ಣಿಡಲು ಎಐ ಆಧಾರಿತ ಗ್ರೌಂಡ್‌ ವಾಟರ್‌ ಮಾನಿಟರಿಂಗ್‌ ಸಿಸ್ಟಮ್‌ ಅಳವಡಿಕೆ: ಜಲಮಂಡಳಿ ಅಧ್ಯಕ್ಷ - ground water monitoring system - GROUND WATER MONITORING SYSTEM

ಬೆಂಗಳೂರು ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಮಟ್ಟ ಕಡಿಮೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ಅಂತರ್ಜಲಮಟ್ಟ ತಿಳಿದುಕೊಳ್ಳಲು ಎಐ ಆಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರು ಜಲಮಂಡಳಿ ಮುಂದಾಗಿದೆ.

Etv Bharat
Etv Bharat
author img

By ETV Bharat Karnataka Team

Published : Apr 23, 2024, 8:32 AM IST

ಬೆಂಗಳೂರು: ಬೆಂಗಳೂರು ನಗರದ ಅಂತರ್ಜಲ ಮಟ್ಟವನ್ನು ನಿರಂತರಾಗಿ ಮಾನಿಟರಿಂಗ್‌ ಮಾಡಲು ಐಐಎಸ್‌ಸಿ ವಿಜ್ಞಾನಿಗಳು, ಸಿಜಿಡಬ್ಲೂಬಿ ಜೊತೆಗೂಡಿ ಎಐ ಬೇಸ್ಡ್‌ ಅಡ್ವಾನ್ಸ್‌ಡ್‌ ಗ್ರೌಂಡ್‌ ವಾಟರ್‌ ಮಾನಿಟರಿಂಗ್‌ ಸಿಸ್ಟಮ್‌ ಅಳವಡಿಸಿಕೊಳ್ಳಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

ಸೋಮವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಐಐಎಸ್‌ಸಿ ವಿಜ್ಞಾನಿಗಳು ಮತ್ತು ಸೆಂಟ್ರಲ್‌ ಗ್ರೌಂಡ್‌ ವಾಟರ್‌ ಬೋರ್ಡ್‌ನ ಅಧಿಕಾರಿಗಳೊಂದಿನ ಸಭೆಯ ನಂತರ ಮಾತನಾಡಿದ ಅವರು, ಐಐಎಸ್‌ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಗ್ರೌಂಡ್‌ ವಾಟರ್‌ ಟಾಸ್ಕ್‌ ಫೋರ್ಸ್‌ ರಚಿಸಲಾಗುವುದು. ಈ ಟಾಸ್ಕ್‌ ಫೋರ್ಸ್‌ ಮೂಲಕ ನಗರದ ಅಂತರ್ಜಲ ಮಟ್ಟವನ್ನು ನಿರಂತರವಾಗಿ ಮಾನಿಟರಿಂಗ್‌ ಮಾಡಲಾಗುವುದು. ನಿರಂತರವಾಗಿ ದತ್ತಾಂಶಗಳ ಕ್ರೋಢೀಕರಣ ವಿಶ್ಲೇಷಣೆ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಈ ಟಾಸ್ಕ್‌ ಫೋರ್ಸ್‌ ಸಹಾಯ ಮಾಡಲಿದೆ ಎಂದರು.

ಎಐ ಆಧಾರಿತ ಅಡ್ವಾನ್ಸ್‌ಡ್‌ ಗ್ರೌಂಡ್‌ ವಾಟರ್‌ ಮಾನಿಟರಿಂಗ್‌ ಸಿಸ್ಟಮ್‌: ಬೆಂಗಳೂರು ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಮಟ್ಟ ಕಡಿಮೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಯಾವ ಪ್ರದೇಶಗಳಲ್ಲಿ ನೀರಿನ ಲಭ್ಯತೆ ವಿಫುಲವಾಗಿದೆ. ಸಾಂಪ್ರದಾಯಿಕ ವ್ಯವಸ್ಥೆಯಿಂದ ಸರಿಯಾದ ಮಾಹಿತಿ ಲಭ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಮಾನಿಟರಿಂಗ್‌ ಸಿಸ್ಟಮ್‌ ಅಳವಡಿಕೆ ಅಗತ್ಯವಿದೆ. ಇದನ್ನು ಮನಗಂಡಿರುವ ಜಲಮಂಡಳಿ ಐಐಎಸ್‌ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಎಐ ಬೇಸ್ಡ್‌ ಅಡ್ವಾನ್ಸ್‌ಡ್‌ ಗ್ರೌಂಡ್‌ ವಾಟರ್‌ ಮಾನಿಟರಿಂಗ್‌ ಸಿಸ್ಟಮ್‌ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದರು.

ಅಂತರ್ಜಲ ಮಾನಿಟರಿಂಗ್‌ ವ್ಯವಸ್ಥೆ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲಾಗುವ ಎಐ ಮತ್ತು ಐಓಟಿ ತಂತ್ರಜ್ಞಾನ ನಿರ್ಮಾಣ ಮತ್ತು ಅಳವಡಿಕೆಯ ಮುಂದಾಳತ್ವವನ್ನು ದೇಶದ ಪ್ರಮುಖ ಸಂಸ್ಥೆಯಾಗಿರುವ ಐಐಎಸ್​​ಸಿ ವಿಜ್ಞಾನಿಗಳು ವಹಿಸಿಕೊಳ್ಳಲಿದ್ದಾರೆ. ಮಾಹಿತಿಯ ಸಂಗ್ರಹಣೆ, ದತ್ತಾಂಶದ ವಿಶ್ಲೇಷಣೆ ಸೇರಿದಂತೆ ಅಗತ್ಯ ಮಾಹಿತಿಯ ಕ್ರೋಢೀಕರಣ ಹಾಗೂ ವರದಿಯನ್ನು ನೀಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ವಾಹನ ತೊಳೆಯಲು, ಗಿಡಗಳಿಗೆ ಕುಡಿಯುವ ನೀರು ಬಳಕೆ: ₹20.25 ಲಕ್ಷ ದಂಡ ವಸೂಲಿ - Drinking Water Wastage

ಈ ಹೊಸ ತಂತ್ರಜ್ಞಾನದ ಅಳವಡಿಕೆಯು ಬೆಂಗಳೂರು ನಗರದ ಅಂತರ್ಜಲವನ್ನು ಸಮರ್ಪಕ ನಿರ್ವಹಣೆ ಮತ್ತು ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಅನುವು ಮಾಡಿಕೊಡಲಿದೆ. ಬೆಂಗಳೂರು ನಗರದ ಯಾವ ಪ್ರದೇಶದಲ್ಲಿ ಅಂತರ್ಜಲ ನೀರಿನ ಲಭ್ಯತೆಯಿದೆ. ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಅಂತರ್ಜಲ ಮಟ್ಟದಲ್ಲಿ ಆಗುತ್ತಿರುವ ಏರುಪೇರಿನ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಇದರಿಂದ ಜಲಮಂಡಳಿ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಪರಿಹಾರ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಪ್ರಸ್ತುತ ಅಂತರ್ಜಲ ಮರುಪೂರಣ ವ್ಯವಸ್ಥೆ ಅಳವಡಿಸುವಾಗ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಒಳಗೊಂಡ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇದಕ್ಕೆ ಮಾಹಿತಿಯ ಕೊರತೆಯೇ ಕಾರಣವಾಗಿದೆ. ಹೊಸ ವ್ಯವಸ್ಥೆಯ ಅಳವಡಿಕೆಯಿಂದ ನಾವು ಯಾವ ಪ್ರದೇಶದಲ್ಲಿ‌ ಇನ್‌ಫಿಲ್ಟರೇಷನ್‌ ರೇಟ್ ಹೆಚ್ಚಾಗುತ್ತದೆ ಎನ್ನುವುದರ ಮಾಹಿತಿ ದೊರೆಯಲಿದೆ. ಇದರಿಂದ ಕಡಿಮೆ ವೆಚ್ಚದ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದೇ ರೀತಿ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಪರಿಣಾಮಕಾರಿ ಕ್ರಮಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲೇ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ನಟ ಚಿರಂಜೀವಿ - Chiranjeevi

ಸಭೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋ.ಎಂ ಶೇಖರ್‌, ಅಸೋಸಿಯೇಟ್‌ ಪ್ರೊಫೆಸರ್‌ ಎಲ್.ಎನ್‌ ರಾವ್‌, ಸಿಜಿಡಬ್ಲೂಬಿಯ ಪ್ರಾದೇಶಿಕ ನಿರ್ದೇಶಕ ಜ್ಯೋತಿ ಕುಮಾರ್‌, ವಿಜ್ಞಾನಿಗಳಾದ ಹೆಚ್‌.ಪಿ ಜಯ ಪ್ರಕಾಶ್‌ ಮತ್ತು ರಾಹುಲ್‌ ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರು ಅಪಾರ್ಟ್​ಮೆಂಟ್​ಗಳಲ್ಲಿ ಬಳಸಿದ ನೀರು ಸಂಸ್ಕರಿಸಿ ಮಾರಲು ಮುಂದಾದ ಜಲಮಂಡಳಿ - Water Recycling

ETV Bharat Logo

Copyright © 2025 Ushodaya Enterprises Pvt. Ltd., All Rights Reserved.