ದಾವಣಗೆರೆ : ಬಿಜೆಪಿ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಸಾಕಷ್ಟು ಬೇಡಿಕೆ ಇದೆ. ಟಿಕೆಟ್ಗಾಗಿ ಪ್ರಭಾ ಮಲ್ಲಿಕಾರ್ಜುನ್ ಹಾಗು ಜಿ. ಬಿ ವಿನಯ್ ಕುಮಾರ್ ಅವರು ರೇಸ್ನಲ್ಲಿದ್ದು, ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಆದರೆ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿ ಆಗಿರುವ ಜಿ. ಬಿ ವಿನಯ್ ಕುಮಾರ್ ಅವರಿಗೆ ಟಿಕೆಟ್ ಕೊಡುವಂತೆ ಅಹಿಂದ ವರ್ಗದ ಮುಖಂಡರು ಆಗ್ರಹಿಸಿದ್ದಾರೆ. ಆಂತರಿಕ ಮಾಹಿತಿ ಪ್ರಕಾರ, ಅವರಿಗೆ ಟಿಕೆಟ್ ಕೈತಪ್ಪುತ್ತದೆ ಎಂಬುದು ತಿಳಿದು ಬರುತ್ತಿದ್ದಂತೆ ಅವರ ಅಭಿಮಾನಿಗಳು ಅಹಿಂದ ಸಮಾಜ, ಸರ್ವಸಮಾಜ ಚುನಾವಣಾ ಕಣದಿಂದ ಹಿಂದೆ ಸರಿಯಬಾರದು. ಪಕ್ಷೇತರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ಬೇಕೆಂಬ ಒತ್ತಾಯ ಮಾಡ್ತಿದ್ದಾರೆ.
ವಿನಯ್ ಕುಮಾರ್ ಅವರನ್ನು ಕಳೆದುಕೊಳ್ಳಬೇಡಿ - ಅಹಿಂದ ಮನವಿ: ಈ ವಿಚಾರವಾಗಿ ಕಾಂಗ್ರೆಸ್ ಯುವ ಮುಖಂಡ ರಘು ದೊಡ್ಮನೆ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯ ಮೂರನೇ ಪಟ್ಟಿಯ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ. ಅದರಲ್ಲಿ ಯಾರಿಗೆ ಟಿಕೆಟ್ ಆಗುತ್ತೆ ಎಂಬುದನ್ನು ನೋಡಿಕೊಂಡು ನಮ್ಮ ನಿರ್ಧಾರ ಮಾಡುತ್ತೇವೆ ಎಂದರು.
ಜಿ ಬಿ ವಿನಯ್ ಕುಮಾರ್ ಅವರು ಪ್ರಬಲ ಆಕಾಂಕ್ಷಿಗಳು, ಅವರಿಗೆ ಟಿಕೆಟ್ ಆಗುತ್ತೋ ಆಗಲ್ವೋ ಎಂಬ ಗೊಂದಲ ಇದೆ. ಆಂತರಿಕ ಮಾಹಿತಿ ಪ್ರಕಾರ, ಅವರಿಗೆ ಟಿಕೆಟ್ ಕೈತಪ್ಪುತ್ತದೆ ಎಂಬುದು ತಿಳಿದು ಬರುತ್ತಿದೆ. ಈ ಕ್ಷಣದಲ್ಲಾದ್ರೂ ವರಿಷ್ಠರು ವಿನಯ್ ಕುಮಾರ್ ಅವರು ಹೆಸರು ಅಂತಿಮಗೊಳಿಸಬೇಕು. ಅವರ ಹೆಸರು ಅಂತಿಮ ಆಗಲಿಲ್ಲ ಎಂದರೆ ಎರಡು ದಿನಗಳ ಬಳಿಕ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತೇವೆ. ಸಭೆ ನಡೆಸಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಗೌರವ ಇಟ್ಟುಕೊಂಡು ಮಾತನಾಡಬೇಕು: ಮಾಜಿ ಸಚಿವ ಅಶ್ವತ್ಥ್ ನಾರಾಯಣ