ETV Bharat / state

ಕೋರ್ಟ್​ ಕಲಾಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಸ್ಥಗಿತಕ್ಕೆ ಹೈಕೋರ್ಟ್‌ಗೆ ವಕೀಲರ ಸಂಘ ಮನವಿ - Advocates Appeals To High Court - ADVOCATES APPEALS TO HIGH COURT

ನ್ಯಾಯಾಲಯದ ಕಲಾಪ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವುದು, ಸಂಕಲನ ಮಾಡಿ ಮರುಪ್ರಸಾರ ಮಾಡುವುದನ್ನು ಸ್ಥಗಿತಗೊಳಿಸುವಂತೆ ಕೋರಿ ವಕೀಲರ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

high court
ಹೈಕೋರ್ಟ್‌ (ETV Bharat)
author img

By ETV Bharat Karnataka Team

Published : Sep 23, 2024, 3:45 PM IST

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೇಳಿಕೆಗಳು ಗೊಂದಲಕ್ಕೆ ಕಾರಣವಾದ ಬೆನ್ನಲ್ಲೇ ನ್ಯಾಯಾಲಯ ಕಲಾಪದ ಪ್ರಕ್ರಿಯೆಯ ನೇರ ಪ್ರಸಾರದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳು, ವೈಯಕ್ತಿಕ ಖಾತೆಗಳು, ಸಂಕಲನ ಮಾಡುವುದು ಹಾಗೂ ಮರು ಪ್ರಸಾರ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ವಕೀಲರ ಮನವಿ ಆಲಿಸಿದ ಪೀಠವು ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ತಿಳಿಸಿತು.

ಅರ್ಜಿಯಲ್ಲಿ ಏನಿದೆ?: ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಕಾರ್ಪ್ (ಟ್ವಿಟ್ಟರ್) ಮತ್ತು ಇತರೆ ತಾಣಗಳಲ್ಲಿರುವ ಯೂಟ್ಯೂಬ್‌ನಲ್ಲಿ ನೇರ ಪ್ರಸಾರದ ಮೂಲಕ ಪಡೆದಿರುವ ವಿಡಿಯೋಗಳು, ವಿಡಿಯೋ ಕ್ಲಿಪ್‌ಗಳು ಹಾಗೂ ಸಂಕಲನ ಮಾಡಿರುವ ವಿಡಿಯೋಗಳನ್ನು ತಕ್ಷಣ ತೆರವು ಮಾಡಬೇಕು. ಈ ರೀತಿಯ ವಿಡಿಯೋಗಳನ್ನು ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೆ, ನೇರ ಪ್ರಸಾರವನ್ನು ದುರುಪಯೋಗ ಮಾಡಿಕೊಳ್ಳುವುದು ಮತ್ತು ಅಂತಹ ಕೃತ್ಯ ಕಾನೂನುಬಾಹಿರವಾದದ್ದಾಗಿದೆ. ವೈವಾಹಿಕ ಪ್ರಕರಣಗಳ ನೇರ ಪ್ರಸಾರವನ್ನು ಟ್ರೋಲ್ ಮಾಡುವುದು ಸಂವಿಧಾನದ ಪರಿಚ್ಛೇದ 21ರ ಉಲ್ಲಂಘನೆಯಾಗಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನ್ಯಾಯಮೂರ್ತಿಗಳ ಹೇಳಿಕೆಗಳುಳ್ಳ ವಿಡಿಯೋಗಳು ಸಾರ್ವಜನಿಕವಾಗಿ ಅಗಾಧವಾದ ಜನಪ್ರಿಯತೆಯನ್ನು ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಲಯ ಮಾತ್ರವಲ್ಲದೆ, ವಕೀಲರ ವೃತ್ತಿ ಮಾಡುವವರನ್ನು ಅನಗತ್ಯವಾಗಿ ಟೀಕೆ ಮಾಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ. ಇದು ಯುವ ವಕೀಲ ಸಮುದಾಯಕ್ಕೆ ಘಾಸಿಯನ್ನುಂಟು ಮಾಡಲಿದೆ. ಜೊತೆಗೆ, ವಕೀಲರ ಮಾಡುವ ವಾದಗಳು ಟ್ರೋಲ್‌ಗೆ ಒಳಗಾಗಬಹುದು ಎಂಬ ಆತಂಕಕ್ಕೆ ಕಾರಣವಾಗಲಿದ್ದು, ಅವರಲ್ಲಿನ ಉತ್ಸಾಹವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಲಿದೆ. ಉತ್ತಮ ವಕೀಲರ ಸೃಷ್ಠಿಗೆ ತೊಂದರೆಯಾಗಲಿದೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಸಂವಿಧಾನದ 14ನೇ ವಿಧಿ ಉಲ್ಲಂಘನೆ: ಹೈಕೋರ್ಟ್​ನಲ್ಲಿ ವಕೀಲರ ವಾದ - Guarantee Schemes In Karnataka

ETV Bharat Logo

Copyright © 2025 Ushodaya Enterprises Pvt. Ltd., All Rights Reserved.