ETV Bharat / state

ಬಳ್ಳಾರಿ: ನಟ ಯಶ್ ಬೆಂಗಾವಲು ಪಡೆ ವಾಹನ ಹರಿದು ಅಭಿಮಾನಿಯ ಕಾಲಿಗೆ ಗಾಯ - ಬಳ್ಳಾರಿ

ನಟ ಯಶ್​ ಅವರ ಬೆಂಗಾವಲು ವಾಹನ ಹರಿದು ಅಭಿಮಾನಿಯ ಕಾಲಿಗೆ ಗಾಯವಾದ ಘಟನೆ ಬಳ್ಳಾರಿಯಲ್ಲಿ ನಡೆಯಿತು.

Yash fan injured in Ballari
ಯಶ್ ಬೆಂಗಾವಲು ಪಡೆಯ ವಾಹನ ಹರಿದು ಅಭಿಮಾನಿಯ ಕಾಲಿಗೆ ಗಾಯ
author img

By ETV Bharat Karnataka Team

Published : Feb 29, 2024, 4:37 PM IST

Updated : Feb 29, 2024, 5:40 PM IST

ಗಾಯಾಳು ವಸಂತನ ತಂದೆ ರಾಮ

ಬಳ್ಳಾರಿ: ನಟ ಯಶ್​ ಬೆಂಗಾವಲು ವಾಹನ ಡಿಕ್ಕಿಯಾಗಿ ಅವರ ಅಭಿಮಾನಿಯೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ಬಾಲಾಜಿ ಕ್ಯಾಂಪ್​ನಲ್ಲಿ ಇಂದು ಸಂಭವಿಸಿದೆ. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನದ ಉದ್ಘಾಟನೆಗೆ ಯಶ್​ ಬಂದಿದ್ದರು. ಈ ಸುದ್ದಿ ತಿಳಿದು ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಯಶ್ ಹೊರಡುವ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳು ಹಿಂಬಾಲಿಸಿದ್ದಾರೆ. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಮೇಲೆ ಬೆಂಗಾವಲು ಪಡೆಯ ವಾಹನ ಹರಿಯಿತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಗಾಯಾಳು ವಸಂತ ಅವರ ತಂದೆ ರಾಮ ಮಾತನಾಡಿ, ''ಯಶ್​ ಅವರನ್ನು ನೋಡಲು ಹೋಗಿದ್ದಾಗ ಈ ಅವಘಡ ನಡೆಯಿತು. ಅವರ ಬೆಂಗವಾಲು ಕಾರು ಹರಿದು ಕಾಲಿಗೆ ಗಾಯವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಿಸಿದ್ದೇವೆ. ಚಿಕಿತ್ಸೆ ನಡೆಯುತ್ತಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬರ್ತ್​ ಡೇ ಅಂದ್ರೆನೇ ಭಯ ಆಗ್ತಿದೆ, ಮೃತರ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡುವೆ: ಯುವಕರ ಪೋಷಕರಿಗೆ ಯಶ್​ ಸಾಂತ್ವನ

Last Updated : Feb 29, 2024, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.