ಬ್ರಿಜ್ ಭೂಷಣ್ನಿಂದ ಹಿಡಿದು ಪ್ರಜ್ವಲ್‌ವರೆಗೆ ಅಂಥಾ ಮನಸ್ಥಿತಿಯವರು ಏಕೆ ನಿಮ್ಮ ಪಕ್ಷ ಸೇರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು. ಗದಗದಲ್ಲಿಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ, ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲೇ ಮೋದಿ ಹಾಗು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ನನಗೂ ಅವನಿಗೂ ನನಗೂ ಸಂಬಂಧ ಇಲ್ಲ. ಅಣ್ಣನ ಮಗ ಅಂತಾ ಕುಮಾರಸ್ವಾಮಿಯವ್ರು ಹೇಳುತ್ತಾರೆ. ವೇದಿಕೆ ಮೇಲೆ ಮಗ ಇದ್ದಂಗೆ ಎಂದು ಹೇಳಿದ್ದನ್ನು ನಾವು ಕೇಳಿಸಿಕೊಂಡಿಲ್ಲವೇ?. ಯಾವುದೋ ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಬಿಟ್ಟಿದ್ದಾರೆ. ಇದರಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆಯೇ?. ಹೆಣ್ಣುಮಕ್ಕಳು ದಾರಿ ತಪ್ಪೋದು ಅಂದ್ರೆ ಹಳ್ಳಿಯೊಳಗೆ ಏನು ಅರ್ಥ ಅಂತಾ ಗೊತ್ತಾ ಆ ಮನುಷ್ಯನಿಗೆ ಎಂದು ಪ್ರಶ್ನಿಸಿದ್ರು. ಜೊತೆಗೆ, ಸರಿ, ಹೆಣ್ಣು ಮಕ್ಕಳು ದಾರಿ ತಪ್ಪಿದ್ರು. ನಿಮ್ ಮನಿ ಮಗ ದಾರಿ ತಪ್ಪಿದ್ದಾರಲ್ವಾ, ಅವರೀಗ ಎಲ್ಲಿದ್ದಾರೆ ಎಂಬುದನ್ನು ಹೇಳಿ ಎಂದು ಸವಾಲೆಸೆದರು.
ಕಲ್ಯಾಣ ಕರ್ನಾಟಕಕ್ಕೆ ಪ್ರಧಾನಿ ಮೋದಿ ಬಂದಿದ್ರು. ನಾವು ಕಾಯಕದ ಕಲ್ಯಾಣ ಎನ್ನುತ್ತೇವೆ. ಅವ್ರು ಕಾವಿ ಕಲ್ಯಾಣ ಮಾಡಕ್ಕೆ ಬಂದಿದ್ರು. ಅಲ್ಲಿ ಬಂದು ನೇಹಾ ಪ್ರಕರಣದ ಬಗ್ಗೆ ಮಾತನಾಡ್ತಾರೆ. ನೇಹಾ ನಮಗೆ ಎದೆ ಚುರ್ ಅನ್ನೋದಿಲ್ವೇ?. ನೇಹಾ, ಅದಕ್ಕೂ ಮುನ್ನ ಓರ್ವ ಮುಸ್ಲಿಂ ಹೆಣ್ಣುಮಗಳು.. ಹೀಗೆ ಹತ್ತತ್ತು ಪ್ರಕರಣಗಳಿವೆ. ಯಾಕೆ ಈ ದೌರ್ಜನ್ಯ ನಡೆಯುತ್ತಿದೆ ಎಂದು ಯೋಚನೆ ಮಾಡಬೇಕು. ಅದು ಬಿಟ್ಟು ಅದ್ಕೊಂದು ಜಾತಿ, ಧರ್ಮದ ಲೇಪನ?.
ಬಿಜೆಪಿ ಮಹಿಳಾ ಸದಸ್ಯರಲ್ಲಿ ನನ್ನದೊಂದು ಪ್ರಶ್ನೆ. ಅವ ಯಾರಾದರೂ ಇರ್ಲಿ, ವಿಕೃತ. ಅಶ್ಲೀಲ ಚಿತ್ರವಲ್ಲ, ವಿಕೃತ ಕಾಮ. ಎರಡು ಸಾವಿರ ಹಣ್ಣು ಮಕ್ಕಳು ಕಾಣೋದಿಲ್ಲವೇ ನಿಮಗೆ?. ಅವರು ಹಿಂದೂಗಳಲ್ಲವೇನು?. ಅದರ ಬಗ್ಗೆ ಪ್ರತಿಭಟನೆ ಮಾಡೋದಿಲ್ಲ ನೀವು. ನಾವು ಯೋಚನೆ ಮಾಡದಿದ್ರೆ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಮಂಗ ಮಾಡುತ್ತವೆ ಎಂದು ಕಿಡಿಕಾರಿದರು.