ETV Bharat / state

ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್​​ ಚಂದ್ರು ಪರ ನಟ ದರ್ಶನ್ ಮತಬೇಟೆ - Darshan Campaign - DARSHAN CAMPAIGN

ಮಂಡ್ಯ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು ಪರ ನಟ​ ದರ್ಶನ್ ಇಂದು​ ಚುನಾವಣಾ ಪ್ರಚಾರ ನಡೆಸಿದರು.

ಕೈ ಅಭ್ಯರ್ಥಿ ಸ್ಟಾರ್​​ ಚಂದ್ರು ಪರ ನಟ ದರ್ಶನ ಚುನಾವಣೆ ಪ್ರಚಾರ

author img

By ETV Bharat Karnataka Team

Published : Apr 18, 2024, 8:34 PM IST

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ದಿನ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಕಾಂಗ್ರೆಸ್ ಪಕ್ಷ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಮಾಡಿರುವ ಕೈ ಪಕ್ಷ ನಟ ದರ್ಶನ್ ಅವರನ್ನು ಮತ ಪ್ರಚಾರಕ್ಕೆ ಬಳಸಿಕೊಂಡಿದೆ.

ಇಂದು ಮಳವಳ್ಳಿ ವಿಧಾನಸಭಾ ವ್ಯಾಪ್ತಿಯ ಸುಮಾರು ಹದಿನೇಳು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ದರ್ಶನ್ ಪ್ರಚಾರ ನಡೆಸಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮತ್ತೊಂದೆಡೆ, ಸ್ಟಾರ್ ಚಂದ್ರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸುಮಾರು 35 ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ರೋಡ್ ಶೋ ಮೂಲಕ ಪ್ರಚಾರ ಆರಂಭಿಸಿದ ಅವರು ಸರ್ಕಾರದ ಐದೂ ಗ್ಯಾರಂಟಿಗಳು ಜನರಿಗೆ ತಲುಪುತ್ತಿವೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಇನ್ನೂ ಇಪ್ಪತ್ತೈದು ಗ್ಯಾರಂಟಿಗಳು ಜನರನ್ನು ತಲುಪುತ್ತವೆ. ಆದ್ದರಿಂದ ತಮ್ಮ ಸೇವೆ ಮಾಡಲು ಈ ಬಾರಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಕೊತ್ತತ್ತಿಯಿಂದ ಶಾಸಕ ರಮೇಶಬಾಬು ಅವರೊಂದಿಗೆ ಪ್ರಚಾರ ಆರಂಭಿಸಿದ ಸ್ಟಾರ್ ಚಂದ್ರು ಬೇವಿನಹಳ್ಳಿ, ಕ್ಯಾತುಂಗೆರೆ, ಕಿರಗಂದೂರು, ಇಂಡುವಾಳು, ಬೇಲೂರು, ಹೊಸ ಬೂದನೂರು, ಕಬ್ಬನಹಳ್ಳಿ ಸೇರಿದಂತೆ ಸುಮಾರು ಮೂವತ್ತೈದು ಗ್ರಾಮಗಳಲ್ಲಿ ಮತಬೇಟೆ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಅಭ್ಯರ್ಥಿಗಳು ಸೋತರೆ ಸಿಎಂ ಸಿದ್ದರಾಮಯ್ಯನವರ ಸ್ಥಾನಕ್ಕೆ ಕಂಟಕ: ಸಚಿವ ಬೈರತಿ ಸುರೇಶ್​ - Byrathi Suresh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.