ETV Bharat / state

ಖಾಸಗಿ ಸಹಭಾಗಿತ್ವದಲ್ಲಿ ಎಂಪಿಎಂ ಪುನರಾರಂಭಕ್ಕೆ ಕ್ರಮ: ಸಚಿವ ಎಂ.ಬಿ. ಪಾಟೀಲ್ - MPM Factory

ಭದ್ರಾವತಿಯ ಮೈಸೂರು ಪೇಪರ್ ಮಿಲ್ ಪುನರಾರಂಭಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಖಾಸಗೀ ಸಹಭಾಗಿತ್ವದಲ್ಲಿ ಸಂಸ್ಥೆ ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಸಚಿವ ಎಂ.ಬಿ. ಪಾಟೀಲ್
ಸಚಿವ ಎಂ.ಬಿ. ಪಾಟೀಲ್ (ETV Bharat)
author img

By ETV Bharat Karnataka Team

Published : Jul 16, 2024, 7:32 PM IST

ಬೆಂಗಳೂರು: ಭದ್ರಾವತಿಯಲ್ಲಿರುವ ಮೈಸೂರು ಪೇಪರ್ ಮಿಲ್ (ಎಂಪಿಎಂ) ಪುನರಾರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಖಾಸಗೀ ಸಹಭಾಗಿತ್ವದಲ್ಲಿ ಸಂಸ್ಥೆ ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಿಲ್ಕಿಸ್ ಬಾನು ಪ್ರಶ್ನೆಗೆ ಉತ್ತರಿಸಿದ‌ ಸಚಿವರು, ಮೈಸೂರು ಕಾಗದ ಕಾರ್ಖಾನೆಗೆ 20005.42 ಹೆಕ್ಟೇರ್ ಅರಣ್ಯ ಭೂಮಿಯ ಗುತ್ತಿಗೆಯನ್ನು 2020 ರಿಂದ 2060 ರವರೆಗೆ ನವೀಕರಣ ಮಾಡಲಾಗಿದೆ. ಈ ಜಾಗವು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ವ್ಯಾಪ್ತಿಯಲ್ಲಿದೆ. ಸದ್ಯ ಕಾರ್ಖಾನೆ ಸ್ಥಗಿತಗೊಂಡಿದ್ದು, ಕಾರ್ಖಾನೆಯ ಪುನರಾರಂಭಕ್ಕೆ ಕ್ರಮ ವಹಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಎಂಪಿಎಂ ಮತ್ತೆ ಕಾರ್ಯಾರಂಭ ಮಾಡುವಂತೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಪ್ರಸ್ತುತ ಎಂಪಿಎಂ ಕಾರ್ಖಾನೆ 1650.6 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ಬೆಳೆ ಇದೆ. ಇವು ಹಳೆಯ ನೆಡುತೋಪುಗಳಾಗಿದ್ದು, 2017 ರಿಂದ ಯಾವುದೇ ಹೊಸ ನೀಲಗಿರಿ ನೆಡುತೋಪು ಮಾಡಿಲ್ಲ. ಅರಣ್ಯ ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ ಬೆಳೆಯಲು ನಿಷೇಧ ಇದೆ. ಇದರ ಪಾಲನೆಯಾಗುತ್ತಿದೆ ಎಂದರು.

ಕೈಗಾರಿಕಾ ನಿವೇಶನ ಅನ್ಯ ಉದ್ದೇಶಕ್ಕೆ ಬಳಸಿದಲ್ಲಿ ಕ್ರಮ: ಕೈಗಾರಿಕಾ ಸ್ಥಾಪನೆಗೆ ನೀಡಲಾದ ಭೂಮಿಗಳು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದಿದ್ದರೆ ಶಿಸ್ತುಕ್ರಮ, ಬೇರೆ ಉದ್ದೇಶಕ್ಕೆ ನಿವೇಶನ ಬಳಕೆ ಮಾಡಿದ್ದರೆ ಅಂತಹ ಸೈಟುಗಳಿಗೆ ಹೆಚ್ಚುವರಿ ಪೆನಾಲ್ಟಿ ಹಾಕಲಾಗುತ್ತದೆ. ಜೊತೆಗೆ ಸೂಕ್ತ ಕಾರ್ಯಕ್ಕೆ ಬಳಸಲು ಸೂಚಿಸಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸದಸ್ಯ ತಿಪ್ಪಣ್ಣ ಕಮಕನೂರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲಬುರಗಿ ವ್ಯಾಪ್ತಿಯಲ್ಲಿ ವಿತರಣೆಯಾದ ಕೈಗಾರಿಕಾ ನಿವೇಶನಗಳ ಮಾಹಿತಿ ಕೇಳಿದ್ದಾರೆ. ಅದಕ್ಕೆ ಪೂರಕ ದಾಖಲೆ ಕೊಟ್ಟಿದ್ದೇವೆ. ನಿವೇಶನ ದುರುಯೋಗ ಆರೋಪ ಬಂದರೆ ಪರಿಶೀಲನೆ ಮಾಡಲಾಗುತ್ತದೆ. ಉದ್ದೇಶಿತ ಕಾರ್ಯಕ್ಕೆ ನಿವೇಶನ ಬಳಕೆಯಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಇದನ್ನೂ ಓದಿ: ಗುಡ್ಡ ಕುಸಿದು ದುರಂತ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಕೊಡಲು ಸೂಚನೆ - ಕೃಷ್ಣ ಬೈರೇಗೌಡ ಮಾಹಿತಿ - Uttarakannada Land Slide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.