ETV Bharat / state

ಗುಬ್ಬಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ಬೆಂಗಳೂರಲ್ಲಿ ಅರೆಸ್ಟ್ - ಪೊಲೀಸ್ ಠಾಣೆಯಿಂದ ಆರೋಪಿ ಪರಾರಿ

ಗುಬ್ಬಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ಬೆಂಗಳೂರಲ್ಲಿ ಅರೆಸ್ಟ್

author img

By ETV Bharat Karnataka Team

Published : Feb 4, 2024, 11:45 AM IST

ತುಮಕೂರು: ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿದ್ದ ಬಂಧಿತ ಕಳ್ಳತನ ಪ್ರಕರಣದ ಆರೋಪಿ ಸೈಯದ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿ​​ ಸಿಕ್ಕಿಬಿದ್ದಿದ್ದಾನೆ. ಈತನಿಗಾಗಿ ಕಳೆದ ಎರಡು ದಿನದಿಂದ ಶೋಧ ನಡೆಸಲಾಗುತ್ತಿತ್ತು.

ಸೈಯದ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿ ಗುಬ್ಬಿ ಠಾಣೆಗೆ ಕರೆತರಲಾಗಿತ್ತು. ಶುಕ್ರವಾರ ಬೆಳಿಗ್ಗೆ 4:30ಕ್ಕೆ ಗುಬ್ಬಿ ಠಾಣೆಯಿಂದ ಪರಾರಿಯಾಗಿದ್ದ. ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ನಿವಾಸಿಯಾದ ಈತ ಡ್ಯಾನ್ಸ್ ಕೋರಿಯಾಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.

ಆರೋಪಿ ಪರಾರಿಯಾದ ಪ್ರಕರಣ ಸಂಬಂಧ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದರು.

ಇದನ್ನೂ ಓದಿ: ಫೇಸ್‌ಬುಕ್​ನಲ್ಲಿ ಗೋಡ್ಸೆ ಪರ ಕಾಮೆಂಟ್: ಕೇರಳದ ಎನ್‌ಐಟಿ ಪ್ರೊಫೆಸರ್ ವಿರುದ್ಧ FIR

ETV Bharat Logo

Copyright © 2024 Ushodaya Enterprises Pvt. Ltd., All Rights Reserved.