ETV Bharat / state

ಬೆಂಗಳೂರು: ಮ್ಯಾಟ್ರಿಮೋನಿ ವೆಬ್​ಸೈಟ್​​ನಲ್ಲಿ ನಕಲಿ ಪ್ರೊಫೈಲ್​; 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಸೆರೆ - matrimony case

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಪರಿಚಯವಾಗಿ ಮಹಿಳೆಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

accused cheated  arrested in Bengaluru  ಮಹಿಳೆಯರಿಗೆ ವಂಚಿಸಿದ್ದ ಆರೋಪಿ  ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌
250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಅಂದರ್​
author img

By ETV Bharat Karnataka Team

Published : Feb 28, 2024, 10:19 PM IST

Updated : Feb 29, 2024, 10:23 AM IST

ರಾಜ್ಯ ರೈಲ್ವೇ ಇಲಾಖೆಯ ಡಿಐಜಿಪಿ ಡಾ.ಎಸ್.ಡಿ.ಶರಣಪ್ಪ

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ತಾನೊಬ್ಬ ಕಸ್ಟಮ್ಸ್ ಅಧಿಕಾರಿ ಎಂದು ಮಹಿಳೆಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ರಾಜ್ಯ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನರೇಶ್ ಪುರಿ ಗೋಸ್ವಾಮಿ (45) ಎಂದು ಗುರುತಿಸಲಾಗಿದೆ.

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪವನ್ ಅಗರ್‌ವಾಲ್ ಹೆಸರಿನ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ ಆರೋಪಿ, ಕೊಯಮತ್ತೂರು ಮೂಲದ ವಿಚ್ಛೇದಿತ ಮಹಿಳೆಯೊಬ್ಬರಿಗೆ ತಾನೊಬ್ಬ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. ಬಳಿಕ ವಿವಾಹದ ಮಾತುಕತೆಗಾಗಿ ಜನವರಿ 14ರಂದು ಆಕೆಯ ಪೋಷಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಆರೋಪಿಯ ಮಾತಿನಂತೆ ಬೆಂಗಳೂರಿಗೆ ಬಂದಿದ್ದ ಮಹಿಳೆಯ ಪೋಷಕರಿಗೆ ಕರೆ ಮಾಡಿ, 'ನನ್ನ ಚಿಕ್ಕಪ್ಪ ನಿಮ್ಮನ್ನು ರಿಸೀವ್​ ಮಾಡಿಕೊಳ್ಳುತ್ತಾರೆ' ಅಂತಾ ತಿಳಿಸಿ ಮತ್ತೋರ್ವನನ್ನು ಕಳಿಸಿದ್ದ. ನಂತರ ಟಿಕೆಟ್​ ರಿಸರ್ವೇಷನ್ ಮಾಡಿಸಬೇಕಿದೆ, ಪರ್ಸ್‌ ಅನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದೇನೆ. ಮನೆಗೆ ಬಂದ ಮೇಲೆ ಹಣ ವಾಪಸ್ ನೀಡುವುದಾಗಿ ನಂಬಿಸಿ ಅವರಿಂದಲೇ 10 ಸಾವಿರ ರೂ. ಪಡೆದಿದ್ದನು. ಬಳಿಕ ಟಿಕೆಟ್ ರಿಸರ್ವೇಷನ್ ಮಾಡಿಸಿಕೊಂಡು ಬಂದುಬಿಡುತ್ತೇನೆಂದು ಹೇಳಿ ಫೋನ್ ಸ್ವಿಚ್ಡ್​ ಆಫ್ ಮಾಡಿ ಅಲ್ಲಿಂದ ನಾಪತ್ತೆಯಾಗಿದ್ದ. ಆರೋಪಿಯ ವಂಚನೆಯ ಕುರಿತು ಮಹಿಳೆಯ ಪೋಷಕರು ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅದರಂತೆ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯು ಕಾಟನ್‌ಪೇಟೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಿ-ಆ್ಯಕ್ಟಿವ್ ಆದ ಸಿಮ್ ಕಾರ್ಡುಗಳನ್ನು ಬ್ಲಾಕ್‌ನಲ್ಲಿ ಖರೀದಿಸಿ ಹಿಂದಿ ಪತ್ರಿಕೆಗಳ ಜಾಹೀರಾತಿನಲ್ಲಿ ಬರುವ ವಧು-ವರರ ಮೊಬೈಲ್ ನಂಬರ್‌ಗೆ ಫೋನ್ ಮಾಡಿ ಮಾತನಾಡುತ್ತಿದ್ದನು. ತಾನು ಪವನ್ ಅಗರ್‌ವಾಲ್ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿ ಎಂದು ನಕಲಿ ಬಯೋಡೇಟಾ ಹಾಗೂ ನಕಲಿ ಭಾವಚಿತ್ರವನ್ನು ಕಳುಹಿಸುತ್ತಿದ್ದ.

ಇನ್ನು "ಅಗರ್‌ಸೇನ್‌ಜಿ ವೈವಾಹಿಕ್ ಮಂಚ್" ಎಂಬ ವಾಟ್ಸ್‌ ಆ್ಯಪ್ ಗ್ರೂಪ್‌ನಲ್ಲಿ ಸೇರ್ಪಡೆಗೊಂಡು ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರನ್ನು ಗುರುತಿಸಿ ಅವರ ಜೊತೆ ಫೋನ್ ಮೂಲಕ ಮಾತನಾಡಿ, ಅವರೊಂದಿಗೆ ಸಲುಗೆ ಬೆಳೆಸಿ ಮದುವೆ ಆಗುವುದಾಗಿ ನಂಬಿಸುತ್ತಿದ್ದ. ಬಳಿಕ ಬೆಂಗಳೂರಿಗೆ ಮದುವೆ ಮಾತುಕತೆಗೆ ಕರೆದು ಅವರಿಂದ ಹಣ ಪಡೆದು ವಂಚಿಸುತ್ತಿದ್ದ. ಇದಕ್ಕೆಂದೇ ಆತ ಪ್ರತ್ಯೇಕವಾದ ಮೊಬೈಲ್ ಬಳಸುತ್ತಿದ್ದ. ಆರೋಪಿಯು ರಾತ್ರಿ ವೇಳೆಯಲ್ಲಿ ಮಾತ್ರವೇ ಮಹಿಳೆಯರಿಗೆ ಕರೆ ಮಾಡಿ ಮಾತನಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಯು ಇದೇ ರೀತಿ ರಾಜಸ್ಥಾನದ 56 ಮಹಿಳೆಯರು, ಉತ್ತರಪ್ರದೇಶ 32, ದೆಹಲಿಯ 32, ಕರ್ನಾಟಕದ 17, ಮಧ್ಯಪ್ರದೇಶದ 16, ಮಹಾರಾಷ್ಟ್ರದ 13, ಗುಜರಾತ್‌ನ 11, ತಮಿಳುನಾಡಿನ 06, ಬಿಹಾರ & ಜಾರ್ಖಂಡ್‌ನ 05 ಮತ್ತು ಆಂಧ್ರಪ್ರದೇಶ ಇಬ್ಬರು ಮಹಿಳೆಯರು ಸೇರಿದಂತೆ 250ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಇದೇ ರೀತಿ ಚಾಟ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಹಾಗೂ ಈ ರೀತಿಯಲ್ಲಿ ವಂಚನೆಗೊಳಗಾದವರು ಯಾರಾದರೂ ಇದ್ದಲ್ಲಿ ಸಂಬಂಧಿಸಿದ ಠಾಣೆಗಳಿಗೆ ಈ ಕುರಿತು ತಮ್ಮ ದೂರು ಸಲ್ಲಿಸಬಹುದು ಎಂದು ರಾಜ್ಯ ರೈಲ್ವೇ ಇಲಾಖೆಯ ಡಿಐಜಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಜಿ‌‌ ಸಿಎಂ ಜಗದೀಶ್ ಶೆಟ್ಟರ್ ಫೇಸ್​ಬುಕ್ ಖಾತೆ ಹ್ಯಾಕ್: ಹಣ ಹಾಕದಂತೆ ಪುತ್ರನ ಮನವಿ

Last Updated : Feb 29, 2024, 10:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.