ಬೆಳಗಾವಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಶ್ನನ್ನ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಪೊಲೀಸ್ ಸಿಬ್ಬಂದಿ ಪೊಲೀಸ್ ವಾಹನದಲ್ಲಿ ಕರೆತಂದರು.
ಕೊಲೆ ಪ್ರಕರಣ 14ನೇ ಆರೋಪಿ ಪ್ರದೋಶ್ ಬ್ಲ್ಯಾಂಕೆಟ್ ಹಾಗೂ ಬ್ಯಾಗ್ ಸಮೇತ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ಜೈಲಿನ ಸಿಬ್ಬಂದಿ ಬ್ಲ್ಯಾಂಕೆಟ್ ಒಳಗೆ ತೆಗೆದುಕೊಂಡು ಹೋಗಲು ನಿರ್ಬಂಧಿಸಿದರು.
ಭದ್ರತಾ ಪಡೆಯ ಸಿಬ್ಬಂದಿ ಬ್ಯಾಗ್ ಅನ್ನು ಸಂಪೂರ್ಣ ತಪಾಸಣೆ ನಡೆಸಿದರು. ಈ ವೇಳೆ ಬ್ಯಾಗ್ನಲ್ಲಿ ಸಿರಪ್ ಪತ್ತೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಕೊಡುತ್ತೇವೆ ಎಂದು ತಿಳಿಸಿದರು. ಎರಡು ಬ್ಯಾಗ್ಗಳಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ. ಸಂಪೂರ್ಣ ತಪಾಸಣೆಯ ಬಳಿಕ ಆರೋಪಿಯನ್ನ ಜೈಲಿನೊಳಗೆ ಪೊಲೀಸರು ಬಿಟ್ಟರು.
ಆರೋಪಿ ಪ್ರದೋಶ್ಗೆ 2894 ಕೈದಿ ನಂಬರ್ ನೀಡಲಾಗಿದೆ. ಹಿಂಡಲಗಾ ಜೈಲಿನ ಅತೀ ಭದ್ರತಾ ವಿಭಾಗದ ಸೆಲ್ನಲ್ಲಿ ಪ್ರದೋಶ್ನನ್ನು ಇರಿಸಲಾಗಿದೆ.