ETV Bharat / state

ಉಂಡ ಮನೆಗೆ ದ್ರೋಹ ಬಗೆದ ಕೆಲಸದಾಕೆ ಅರೆಸ್ಟ್; ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ - Gold ornaments stolen - GOLD ORNAMENTS STOLEN

ಮಾಲೀಕರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಮನೆ ಕೆಲಸದವರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

gold-ornaments
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ (ETV Bharat)
author img

By ETV Bharat Karnataka Team

Published : Jul 30, 2024, 3:47 PM IST

ಬೆಂಗಳೂರು : ಕೆಲಸ‌ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಮನೆ ಕೆಲಸದಾಕೆ ಸೇರಿದಂತೆ ಮೂವರನ್ನ ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ದಿವ್ಯಾ, ಮಂಜು ಹಾಗೂ ಜೋಮನ್ ಎಂಬುವರಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಯಮಲೂರಿನ ದಿವ್ಯಶ್ರೀ ಟೆಕ್​ ಪಾರ್ಕ್​ನ ವಿಲ್ಲಾವೊಂದರಲ್ಲಿ ನೆಲೆಸಿದ್ದ ಉದ್ಯಮಿ ಮನೆಯಲ್ಲಿ ದಿವ್ಯಾ ಎರಡು ವರ್ಷಗಳಿಂದ‌ ಕೆಲಸ ಮಾಡುತ್ತಿದ್ದಳು. ರಜೆ ಹಿನ್ನೆಲೆಯಲ್ಲಿ ಮಾಲೀಕರ ಕುಟುಂಬ ಜುಲೈ 13 ರಂದು ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿತ್ತು. 27ರಂದು ಪ್ರವಾಸ ಮುಗಿಸಿ ಮನೆಗೆ ಬಂದು ಪರಿಶೀಲಿಸಿದಾಗ ಡೈಮಂಡ್ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ‌.

Joman
ಜೋಮನ್ (ETV Bharat)

ಈ ಸಂಬಂಧ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ವಿರುದ್ಧ ಅನುಮಾನ ವ್ಯಕ್ತಪಡಿಸಿ, ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮನೆಕೆಲಸದಾರರನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ದಿವ್ಯಾ ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಾಲೀಕರ ಮಕ್ಕಳನ್ನ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ದಿವ್ಯಾ, ಹಂತ - ಹಂತವಾಗಿ ಕಳೆ‌ದ ಆರು ತಿಂಗಳಿಂದ ಚಿನ್ನಾಭರಣ ಎಗರಿಸಿರುವ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಅಲ್ಲದೇ ಪೊಲೀಸರ ವಿಚಾರಣೆ ವೇಳೆ ಕೈ ಕುಯ್ದುಕೊಳ್ಳಲು ಯತ್ನಿಸಿ ಹೈಡ್ರಾಮ ಮಾಡಿದ್ದಳು.

ಈಕೆ ನೀಡಿದ ಮಾಹಿತಿ ಮೇರೆಗೆ 30 ಲಕ್ಷ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ‌. ಕಳ್ಳತನ ಮಾಡಿದ ಮಾಲನ್ನ ಮಂಜು ಬಚ್ಚಿಟ್ಟು ಅದನ್ನ ವಿಲೇವಾರಿ ಮಾಡುವ ಕೆಲಸವನ್ನ ಡ್ರೈವರ್ ಆಗಿದ್ದ ಜೋಮನ್​ಗೆ ವಹಿಸಿದ್ದಳು‌.‌ ಇನ್ನೇನು ಅಡ ಇಡಲು ಮುಂದಾಗುವಷ್ಟರಲ್ಲೇ ಆರೋಪಿತರನ್ನ ಪೊಲೀಸರು ಲಾಕ್ ಮಾಡಿದ್ದಾರೆ.

ಇದನ್ನೂ ಓದಿ : ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ 67.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು - Diamond Jewellery Stolen

ETV Bharat Logo

Copyright © 2025 Ushodaya Enterprises Pvt. Ltd., All Rights Reserved.