ETV Bharat / state

ಪೇಮೆಂಟ್ ಗೇಟ್ ವೇ ಪ್ಲಾಟ್‌ ಫಾರ್ಮ್ ಕಂಪೆನಿಗೆ ಲಕ್ಷಾಂತರ ವಂಚನೆ: ಆರೋಪಿ ಬಂಧ‌ನ - FRAUD CASE

ಪೇಮೆಂಟ್ ಗೇಟ್ ವೇ ಪ್ಲಾಟ್‌ ಫಾರ್ಮ್ ನೀಡುವ ಕಂಪೆನಿಗೆ ವಂಚಿಸಿದ್ದ ಆರೋಪಿಯನ್ನು ಬಂಧ‌ನ ಮಾಡುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

accused
ಆರೋಪಿ (ETV Bharat)
author img

By ETV Bharat Karnataka Team

Published : Dec 7, 2024, 7:37 AM IST

ಬೆಂಗಳೂರು: ಪೇಮೆಂಟ್ ಗೇಟ್ ವೇ ಪ್ಲಾಟ್‌ ಫಾರ್ಮ್ ನೀಡುವ ಕಂಪೆನಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದ ಸೈಬರ್ ಕಳ್ಳನನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ನಿತೀಶ್ ಯಾದವ್ (26) ಬಂಧಿತ.

ಆರೋಪಿಯು ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪೆನಿಗೆ 15.58 ಲಕ್ಷ ರೂ. ವಂಚನೆ ಮಾಡಿದ್ದ. ಮಾಹಿತಿ ಮೇರೆಗೆ ಹರಿಯಾಣದ ಗುರ್‌ಗಾವ್‌ನಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪತ್ತೆಗೆ ಬಲೆಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ನಕಲಿ ಕಂಪನಿ ನೋಂದಣಿ: ಕ್ಯಾಷ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿಯು ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ಪೇಮೆಂಟ್ ಗೇಟ್ ವೇ ವೇದಿಕೆ ಸೃಷ್ಟಿಸಿ ಸೇವೆ ಸಲ್ಲಿಸುತ್ತಿದೆ. ಈ ಕಂಪನಿ ಜೊತೆಗೆ ಆರೋಪಿಗಳು 'ಸಿವೈಸಿಎನ್' ಎಂಬ ನಕಲಿ ಕಂಪನಿ ಹೆಸರನ್ನು ನೋಂದಣಿ ಮಾಡಿಸಿದ್ದರು. ಐಐಟಿ, ಜೆಇಇ ಮತ್ತು ನೀಟ್‌ಗೆ ಆನ್‌ಲೈನ್‌ನಲ್ಲಿ ತರಗತಿ ಮತ್ತು ಪಠ್ಯಪುಸ್ತಕ ಒದಗಿಸುವುದಾಗಿ ಹೇಳಿಕೊಂಡಿದ್ದರು.

ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಕೋಚಿಂಗ್ ಬಗ್ಗೆ ಜಾಹೀರಾತು ನೀಡಿದ್ದರು. ಮತ್ತೆ ವಿದ್ಯಾರ್ಥಿಗಳ ಹೆಸರಿನಲ್ಲಿ ಸಿವೈಸಿಎನ್‌ನಲ್ಲಿ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿ 2 ಲಕ್ಷ ರೂ. ಶುಲ್ಕ ತುಂಬಿದ್ದರು. ಹಣ ಪಡೆದ ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ತನಗೆ ಬಂದ ಹಣವನ್ನು ಆರೋಪಿಗಳ ಕಂಪನಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಇದೆ ರೀತಿಯಾಗಿ, ಆರೋಪಿಗಳೇ ನಾನಾ ಹೆಸರಿನಲ್ಲಿ ವಿದ್ಯಾರ್ಥಿಗಳೆಂದು ಸುಳ್ಳು ಹೇಳಿ ನೋಂದಣಿ ಮಾಡಿಕೊಂಡು ಹಣ ತುಂಬುತ್ತಿದ್ದರು. ಪೇಮೆಂಟ್ ಗೇಟ್ ವೇ ಕಂಪನಿ ಒಪ್ಪಂದದ ಪ್ರಕಾರ, ಕಮಿಷನ್ ಹಿಡಿದು ವಾಪಸ್ ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿತ್ತು. ಇದಾದ ಮೇಲೆ ಆರೋಪಿಗಳು ವಿದ್ಯಾರ್ಥಿಗಳ ಹೆಸರಿನಲ್ಲಿ ದೂರು ಸಲ್ಲಿಸುತ್ತಿದ್ದರು.

ರೀಫಂಡ್ ಹೆಸರಲ್ಲಿ ವಂಚನೆ: ಐಐಟಿ, ಜೆಇಇ ಮತ್ತು ನೀಟ್ ಸಂಬಂಧ ಯಾವುದೇ ಆನ್‌ಲೈನ್ ತರಗತಿ ನಡೆಸುತ್ತಿಲ್ಲ. ನಮಗೆ ಪಠ್ಯಪುಸ್ತಕಗಳು ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸುತ್ತಿದ್ದರು. ಆರ್‌ಬಿಐ ಮಾರ್ಗಸೂಚಿ ಪ್ರಕಾರ ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ನೇರ ಗ್ರಾಹಕರ (ವಿದ್ಯಾರ್ಥಿಗಳು) ಬ್ಯಾಂಕ್ ಖಾತೆಗೆ ರೀಫಂಡ್ ಮಾಡಿ ಬಳಿಕ ತಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಆರೋಪಿಗಳು, ಕಂಪನಿಗೆ ರೀಫಂಡ್ ಮಾಡುವಂತೆ ಸೂಚಿಸುತ್ತಿದ್ದರು. ಆದರೆ, ಒಪ್ಪಂದದ ಪ್ರಕಾರ ಹಣ ಕಳುಹಿಸದೆ ಆರೋಪಿಗಳು ವಂಚನೆ ಮಾಡುತ್ತಿದ್ದರು.

ಇದನ್ನೂ ಓದಿ: ಅಪರಿಚಿತ APK ಫೈಲ್ ಕಳಿಸಿ ಮಂಗಳೂರಿಗನಿಗೆ ಹ್ಯಾಕ್, ವಂಚನೆ: ದೆಹಲಿಯಲ್ಲಿ ಆರೋಪಿ ಬಂಧನ

ಇದೇ ರೀತಿಯಾಗಿ 8 ವಿದ್ಯಾರ್ಥಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ರಿಫಂಡ್ ಮಾಡಿಕೊಂಡಿದ್ದರು. ಈ ಬಗ್ಗೆ ಅನುಮಾನ ಬಂದು ಕ್ಯಾಶ್​ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ದೂರು ಸಲ್ಲಿಸಿತ್ತು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಎಸಿಪಿ ಡಾ.ಗೋವರ್ಧನ್ ಗೋಪಾಲ್, ಇನ್‌ಸ್ಪೆಕ್ಟರ್ ಪಿ. ಎನ್. ಈಶ್ವರಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಖದೀಮರ ಐಷಾರಾಮಿ ಜೀವನ: ಬಿಎಸ್‌ಸಿ ಓದಿದ್ದ ನಿತೇಶ್ ಯಾದವ್ ಮತ್ತು ತಲೆಮರೆಸಿಕೊಂಡಿರುವ ಈತನ ಸ್ನೇಹಿತ ಬಿಇ ಓದಿದ್ದ. ಖಾಸಗಿ ಕಂಪನಿಯಲ್ಲಿ ನೌಕರಿಗೆ ಸೇರಿ ಅಲ್ಲಿ ಬರುತ್ತಿದ್ದ ವೇತನ ಸಾಕಾಗುವುದಿಲ್ಲ ಎಂದು ಪೇಮೆಂಟ್ ಗೇಟ್ ವೇಗೆ ವಂಚನೆಗೆ ಇಳಿದಿದ್ದರು. ಹರಿಯಾಣದ ಗುರುಗಾವ್‌ನ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಬಾಡಿಗೆಗೆ ಪಡೆದು, ಅಲ್ಲಿಂದಲೇ ಕಾರ್ಯ ನಿರ್ವಹಿಸುತ್ತಿದ್ದರು. ತಾವಿರುವ ಜಾಗಕ್ಕೆ ಊಟ, ಬಟ್ಟೆ ಪಾರ್ಸೆಲ್ ತಿಳಿಸಿಕೊಳ್ಳುತ್ತಿದ್ದರು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.