ETV Bharat / state

ಸಿಲಿಕಾನ್​​ ಸಿಟಿಗೆ ಬುನಾದಿ ಹಾಕಿದ ನಾಯಕ SM ಕೃಷ್ಣ: ಸಾವಿರ ಕೋಟಿಯಿಂದ ಲಕ್ಷ ಕೋಟಿ ವರೆಗಿನ ರಾಜ್ಯದ ಐಟಿಗಾಥೆ! - SM KRISHNA CONTRIBUTION

ದೂರಗಾಮಿ ನಾಯಕ, ಸೈಬರ್​ ನಾಯಕ, ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರು ಬೆಂಗಳೂರಿಗೆ ನೀಡಿರುವ ಕೊಡುಗೆಯ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆಯೇ.

BENGALURU  FORMER CM SM KRISHNA  SILICON CITY  ಎಸ್​​ಎಮ್​​ ಕೃಷ್ಣ
ಸಿಲಿಕಾನ್​​ ಸಿಟಿಗೆ ಬುನಾದಿ ಹಾಕಿದ ಸೈಬರ್​ ನಾಯಕ SM ಕೃಷ್ಣ (GETTY IMAGE AND IANS)
author img

By ETV Bharat Karnataka Team

Published : Dec 12, 2024, 9:48 AM IST

ಬೆಂಗಳೂರು: ಮಾಜಿ ಸಿಎಂ ಎಸ್​.ಎಂ. ಕೃಷ್ಣ ಬೆಂಗಳೂರನ್ನು ದೇಶದ ಐಟಿ ಸಿಟಿ, ಸಿಲಿಕಾನ್​ ಸಿಟಿಯಾಗಿ ರೂಪಾಂತರಿಸವಲ್ಲಿ ಭದ್ರ ಬುನಾದಿ ಹಾಕಿದ ದೂರಗಾಮಿ ವ್ಯಕ್ತಿ. ಐಟಿ ಕ್ರಾಂತಿ ಮೂಲಕ ಬೆಂಗಳೂರಿಗೆ ಅಂತಾರಾಷ್ಟ್ರೀಯ ಹೆಗ್ಗಳಿಕೆ ತಂದುಕೊಡುವಲ್ಲಿ ಶ್ರಮಿಸಿದ ಸೈಬರ್​ ನಾಯಕ. ಎಸ್​.ಎಂ. ಕೃಷ್ಣ ರಾಜ್ಯ ಕಂಡ ಒಬ್ಬ ದೂರದೃಷ್ಟಿ ಮುಖ್ಯಮಂತ್ರಿ. ಕರ್ನಾಟಕ ಅಭಿವೃದ್ಧಿಗೆ ಚುರುಕು ನೀಡಿದ ದೂರಗಾಮಿ ನಾಯಕ. ಅವರು ಬೆಂಗಳೂರಿಗಾಗಿ ನೀಡಿದ ಕೊಡುಗೆಯೇ ಸಣ್ಣ ಮೆಲುಕು.

ಎಸ್​.ಎಂ. ಕೃಷ್ಣ ಬೆಂಗಳೂರನ್ನು ಐಟಿ, ಬಿಟಿ ನಗರ, ಸಿಲಿಕಾನ್ ಸಿಟಿಯಾಗಿ ಪರಿವರ್ತಿಸಿದ ಸಿಲಿಕಾನ್ ನಾಯಕರಾಗಿದ್ದಾರೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ತರಲು ಬುನಾದಿ ಹಾಕಿದ ಎಸ್.ಎಂ. ಕೃಷ್ಣ, ರಾಜ್ಯ ರಾಜಧಾನಿಗೆ ಹೊಸ ಕಾಯಕಲ್ಪ ನೀಡಿದ್ದರು. ಐಟಿ ಹಾಗೂ ಕಂಪ್ಯೂಟರ್​ ಕರ್ನಾಟಕವನ್ನು ಆಧುನಿಕ ರಾಜ್ಯವನ್ನಾಗಿ ಮಾಡಲಿರುವ ಎರಡು ಪ್ರಮುಖ ಆಯುಧ ಎಂದು ಅವರು ಹೇಳುತ್ತಿದ್ದರು. ಅದರಂತೆ ಎಸ್.ಎಂ.ಕೃಷ್ಣ ಬೆಂಗಳೂರನ್ನು ಸಿಲಿಕಾನ್ ಸಿಟಿಯ ಹಾದಿಗೆ ಕೊಂಡೊಯ್ದರು.

ಐಟಿ ಕ್ರಾಂತಿಗೆ ಬುನಾದಿ ಹಾಕಿದ ಎಸ್‌.ಎಂ.ಕೃಷ್ಣ: ಬೆಂಗಳೂರಿನಲ್ಲಿ ಐಟಿ, ಬಿಟಿ ಕ್ಷೇತ್ರಗಳ ಕ್ರಾಂತಿಗೆ ಬುನಾದಿ ಹಾಕಿದ್ದು ಎಸ್.ಎಂ. ಕೃಷ್ಣ 1999ರಲ್ಲಿ ಸಿಎಂ ಆಗಿದ್ದಾಗ ಎಸ್.ಎಂ.ಕೃಷ್ಣ ಐಟಿ ನೀತಿಗಳನ್ನು ರೂಪಿಸಿ, ಸಮಗ್ರ ತಂತ್ರಜ್ಞಾನ ಕ್ಷೇತ್ರ ಕೇಂದ್ರಿತ ನಿಯಮಗಳನ್ನು ರೂಪಿಸಿದರು. ಆ ಮೂಲಕ ಬೆಂಗಳೂರನ್ನು ಸಿಲಿಕಾನ್ ನಗರದತ್ತ ಮುಖ ಮಾಡಿಸಿದರು. ಅವರು ಹಾಕಿದ ಅಡಿಗಲ್ಲು ಇಂದು ಹೆಮ್ಮರವಾಗಿ ಬೆಳೆದು, ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದ ನಾವಿನ್ಯತೆ, ಐಟಿ, ಬಿಟಿ ನಗರವನ್ನಾಗಿ ಪರಿವರ್ತಿಸಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಐಟಿ ಹಬ್ ಆಗಿ ರೂಪಾಂತರಿಸಿದೆ.

ರಾಜ್ಯದಲ್ಲಿ ಐಟಿ, ಬಿಟಿ ಕೇಂದ್ರಿತ ನೀತಿ ರೂಪಿಸಿದ ಬೆಂಗಳೂರನ್ನು ಅಂತಾರಾಷ್ಟ್ರೀಯ ಐಟಿ ತಾಣವಾಗಿಸಲು ಕಾರಣಕರ್ತರು. 1999ರಲ್ಲಿ ಬೆಂಗಳೂರು ಅಜೆಂಡಾ ಕಾರ್ಯಪಡೆ ರಚಿಸುವ ಮೂಲಕ, ಬೆಂಗಳೂರು ನಗರಾಭಿವೃದ್ಧಿಗೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಲಾಯಿತು. ಎಸ್‌.ಎಂ.ಕೃಷ್ಣ ಟೆಕ್​ ಉದ್ದಿಮೆಯ ದಿಗ್ಗಜರಾದ ವಿಪ್ರೋದ ಅಜೀಮ್​ ಪ್ರೇಮ್​ ಜಿ, ಇನ್ಫೊಸಿಸ್​ನ ನಾರಾಯಣ ಮೂರ್ತಿ ಹಾಗೂ ಮೈಕ್ರೋ ಲ್ಯಾಂಡ್​ನ ಪ್ರದೀಪ್​ ಕಾರ್​ ಅಂಥವರನ್ನು ಬೆಂಗಳೂರಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನಿಸಿದ್ದರು.

ಎಸ್‌.ಎಂ.ಕೃಷ್ಣ ಸರ್ಕಾರ 1999ರಲ್ಲಿದ್ದ ಸಾಫ್ಟ್ ವೇರ್​ ರಪ್ತು 3,200 ಕೋಟಿ ರೂ‌.ರಿಂದ ಐದು ವರ್ಷದೊಳಗೆ 15,000 ಕೋಟಿ ರೂ.ಗೆ ಏರಿಕೆ ಮಾಡಲು ಗುರಿ ನೀಡಿದ್ದರು. ಇದರ ಜೊತೆಗೆ ರಾಜ್ಯವನ್ನು ಹಾರ್ಡ್​ ವೇರ್​​ ತಾಣವಾಗಿಸಲು ನೀತಿ ರೂಪಿಸುತ್ತಿದ್ದರು. ಎಸ್.ಎಂ. ಕೃಷ್ಣ ನೀತಿಗಳು ಕೇವಲ ಐಟಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ.‌ ಅವರು ಇ-ಆಡಳಿತ ಆರಂಭಿಸುವ ಮೂಲಕ ತಂತ್ರಜ್ಞಾನ ಆಧಾರಿತ ಸಾಮಾಜಿಕ ಮತ್ತು ಆರ್ಥಿಕ ಉಪಕ್ರಮಗಳನ್ನು ಜಾರಿ ಮಾಡಿದ್ದರು. ಆ ಮೂಲಕ ಐಟಿ, ಬಿಟಿ ಬುನಾದಿ ಹಾಕಿದ್ದರು.

ಐಟಿ ರಪ್ತು 3,500 ಕೋಟಿ ರೂ.ರಿಂದ 8 ಲಕ್ಷ ಕೋಟಿ ರೂ.ಗೆ ಏರಿಕೆ: ರಾಜ್ಯದಲ್ಲಿ ಐಟಿ ರಪ್ತು 1999ರಲ್ಲಿ 3,500 ಕೋಟಿ ರೂ. ಇತ್ತು. ಇದೀಗ ಐಟಿ ರಪ್ತು 8 ಲಕ್ಷ ಕೋಟಿ ರೂ. ಏರಿಕೆಯಾಗಿದೆ. 2022ರಲ್ಲಿ ರಾಜ್ಯದ ಐಟಿ ರಪ್ತು 7.50 ಕೋಟಿ ರೂ. ಇತ್ತು. ಬೆಂಗಳೂರು ಹೊರತು ಪಡಿಸಿ ಇತರ ಜಿಲ್ಲೆಗಳಿಂದ ಸುಮಾರು 8,000 ಕೋಟಿ ರೂ.ಗೂ ಅಧಿಕ ರಪ್ತು ಮಾಡಲಾಗಿದೆ. ದೇಶದ ಒಟ್ಟು ಐಟಿ ರಪ್ತಿನಲ್ಲಿ ಬೆಂಗಳೂರಿನ‌ ಪಾಲು ಸುಮಾರು 40%. ಸುಮಾರು 10 ಲಕ್ಷ ಜನರಿಗೆ ನೇರ ಉದ್ಯೋಗ ಕಲ್ಪಿಸುತ್ತಿದೆ.

1991-92ರಲ್ಲಿ ಕರ್ನಾಟಕದ ಒಟ್ಟು ಐಟಿ ರಪ್ತು 16 ಕೋಟಿ ರೂ. ಇತ್ತು. ಆ ಸಂದರ್ಭ ಸುಮಾರು 13 ಸಾಫ್ಟ್ ವೇರ್ ಕಂಪನಿಗಳಿದ್ದವು. 1999ರಲ್ಲಿ ರಾಜ್ಯದ ಐಟಿ ರಪ್ತು 3,500 ಕೋಟಿ ರೂ.ಗೆ ಏರಿಕೆಯಾಯಿತು. 2024ರಲ್ಲಿ ರಾಜ್ಯ ಐಟಿ ರಪ್ತು ಸುಮಾರು 8 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ ಸುಮಾರು 1,400ಕ್ಕೂ ಅಧಿಕ ಐಟಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ರಾಜ್ಯದಲ್ಲಿ ಸ್ಥಾಪಿಸಲಾದ ಟೆಕ್​​ಪಾರ್ಕ್​ಗಳು ಐಟಿ ವಹಿವಾಟನ್ನು ದ್ವಿಗುಣಗೊಳಿಸಲು ಸಹಕಾರಿಯಾಯಿತು. ಐಟಿ ಪಾರ್ಕ್​ಗಳಾದ ಎಲೆಕ್ಟ್ರಾನಿಕ್​ ಸಿಟಿ ಮತ್ತು ಅಂತಾರಾಷ್ಟ್ರೀಯ ಟೆಕ್​ ಪಾರ್ಕ್ ಬೆಂಗಳೂರು (ಐಟಿಪಿಬಿ) ಹೊಸ ಐಟಿ ಸಂಸ್ಥೆಗಳಿಗೆ ಸ್ವರ್ಗತಾಣವಾಗಿ ಪರಿಣಮಿಸಿತು. ಬೆಂಗಳೂರು ಭಾರತದ ಸ್ಟಾರ್ಟ್ ಅಪ್ ರಾಜಧಾನಿಯೂ ಆಗಿದೆ. ಸುಮಾರು 45 ಯುನಿಕಾರ್ನ್​ಗಳು ಬೆಂಗಳೂರಿನಲ್ಲೇ ಇವೆ. ಬೆಂಗಳೂರಲ್ಲಿ 14,000 ಸ್ಟಾರ್ಟ್ ಕಂಪನಿಗಳು ನೋಂದಣಿಯಾಗಿವೆ. ಸುಮಾರು 4,000 ಕ್ಕೂ ಅಧಿಕ ಸ್ಟಾರ್ಟ್ ಅಪ್ ಹೂಡಿಕೆದಾರರು ಇದ್ದಾರೆ.

ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್​, "ಬೆಂಗಳೂರನ್ನು ಐಟಿ ಬಿಟಿ ಸಿಟಿ ಮಾಡುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ. ಎಸ್.ಎಂ.ಕೃಷ್ಣ ವಿಶ್ವದ ಏಕೈಕ ಸೈಬರ್ ನಾಯಕರಾಗಿದ್ದರು. ಶೇ.60 ಭಾಗ ಕೇಂದ್ರ ಸರ್ಕಾರದ ಹಣ ರಾಜ್ಯದ ಐಟಿ, ಬಿಟಿಯಿಂದ ಹೋಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರದ ಹಣಕಾಸು ವ್ಯವಸ್ಥೆಯನ್ನೂ ಗಟ್ಟಿ ಮಾಡಿದವರೂ ಎಸ್.ಎಂ.ಕೃಷ್ಣ ಎಂದಿದ್ದಾರೆ.

ಇದನ್ನೂ ಓದಿ: ಹುಟ್ಟೂರಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಎಸ್‌.ಎಂ.ಕೃಷ್ಣ ಅಂತ್ಯಕ್ರಿಯೆ; ಅಪರೂಪದ ರಾಜಕೀಯ ಮುತ್ಸದ್ಧಿಗೆ ಭಾವಪೂರ್ಣ ವಿದಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.