ಶಿವಮೊಗ್ಗ: ಜಿಲ್ಲೆಯ ಹೊರ ಭಾಗದಲ್ಲಿ ಇರುವ ರಾಜ್ಯದ ನೂತನ ಕಾರಾಗೃಹ ಸೋಗಾನೆಯ ಸೆಂಟ್ರಲ್ ಜೈಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಕರೆತರಲಾಗಿದೆ.
ಇಂದು ಬೆಂಗಳೂರು ಪರಪ್ಪನ ಅಗ್ರಹಾರದಿಂದ ಆರೋಪಿಗಳಾದ ಜಗದೀಶ್ ಹಾಗೂ ಲಕ್ಷ್ಮಣ್ನನ್ನು ಶಿವಮೊಗ್ಗ ಜೈಲಿಗೆ ಕರೆತರಲಾಯಿತು. ಜಗದೀಶ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ A6 , ಲಕ್ಷ್ಮಣ A13ನೇ ಆರೋಪಿಯಾಗಿದ್ದಾನೆ. ಇಬ್ಬರು ಆರೋಪಿಗಳನ್ನು ಶಿವಮೊಗ್ಗದ ಡಿಆರ್ ವಾಹನದಲ್ಲಿ ಕರೆತರಲಾಯಿತು.
ಶಿವಮೊಗ್ಗದ ಹೊರವಲಯ ಸೋಗಾನೆಯಲ್ಲಿ ಸುಮಾರು 63 ಎಕರೆ ಭೂಮಿಯಲ್ಲಿ ನೂತನ ಸೆಂಟ್ರಲ್ ಜೈಲನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿಯೇ ಹೈಟೆಕ್ ಜೈಲು ಇದಾಗಿದ್ದು, ಕೊರಿಯನ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕಾರಾಗೃಹ ಒಟ್ಟು 270 ಕೊಠಡಿಗಳನ್ನು ಹೊಂದಿದ್ದು, 500 ಜನ ಖೈದಿಗಳನ್ನು ಬಂಧಿಯಾಗಿಸುವ ಅವಕಾಶವಿದೆ. ಆದರೆ, ಪ್ರಸ್ತುತ ಹೆಚ್ಚಿಗೆಯಾಗಿ 773 ಖೈದಿಗಳು ಇದ್ದಾರೆ.