ETV Bharat / state

ಹಾವೇರಿ: ಆಸ್ಟ್ರೇಲಿಯಾದಿಂದ ಬಂದು ವೋಟ್ ಮಾಡಿದ ಮಹಿಳೆ - second phase voting - SECOND PHASE VOTING

ಮಹಿಳೆಯೊಬ್ಬರು ಆಸ್ಟ್ರೇಲಿಯಾದಿಂದ ಬಂದು ಹಾವೇರಿಯಲ್ಲಿ ಮತ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಆಸ್ಟ್ರೇಲಿಯಾದಿಂದ ಬಂದು ವೋಟ್ ಮಾಡಿದ ಮಹಿಳೆ
ಆಸ್ಟ್ರೇಲಿಯಾದಿಂದ ಬಂದು ವೋಟ್ ಮಾಡಿದ ಮಹಿಳೆ (ETV Bharat)
author img

By ETV Bharat Karnataka Team

Published : May 7, 2024, 9:03 PM IST

Updated : May 7, 2024, 10:11 PM IST

ಆಸ್ಟ್ರೇಲಿಯಾದಿಂದ ಬಂದು ವೋಟ್ ಮಾಡಿದ ಮಹಿಳೆ (ETV Bharat)

ಹಾವೇರಿ: ಇಲ್ಲಿನ ಬಸವೇಶ್ವರ ನಗರದ ಭಾವನಾ ಶಿವಾನಂದ್ ಎಂಬುವರು ಆಸ್ಟ್ರೇಲಿಯಾದಿಂದ ಬಂದು ವೋಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಗರದ ಲಯನ್ಸ್ ಸ್ಕೋಲ್‌ನ ಮತಗಟ್ಟೆ ಸಂಖ್ಯೆ 217 ರಲ್ಲಿ ಮತ ಚಲಾಯಿಸಿದರು. ಮೂಲತಃ ಶಿವಮೊಗ್ಗದವರಾದ ಇವರು ಹಾವೇರಿ ವರನನ್ನು ಮದುವೆಯಾಗಿದ್ದಾರೆ. ಈ ಹಿಂದೆ ಸಿಂಗಾಪುರದಿಂದ ಇವರು ಆಗಮಿಸಿ ಮತದಾನ ಮಾಡಿದ್ದರು. ಈಗ ಆಸ್ಟ್ರೇಲಿಯಾದ ಸಿಡ್ನಿಯಿಂದ ಮತಹಕ್ಕು ಚಲಾಯಿಸಿದ್ದಾರೆ.

ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಆಸ್ಟ್ರೇಲಿಯಾ ಪೌರತ್ವ ಪಡೆದುಕೊಂಡಿಲ್ಲ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆಯಾಗುತ್ತೆ. ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ. ನೀವೂ ಚಲಾಯಿಸಿ, ಚುನಾವಣೆಯಲ್ಲಿ ಮತದಾನ ಮಾಡಲು ರಜೆ ನೀಡುತ್ತಾರೆ ಎಂದು ಪಿಕ್ನಿಕ್ ಅಂತಾ ಮಜಾ ಮಾಡಲು ಹೋಗುತ್ತಾರೆ. ಮೊದಲು ಮತ ಹಾಕಿ ಆಮೇಲೆ ನೀವು ರಜೆಯನ್ನು ಸಂತಸದಿಂದ ಕಳೆಯಬಹುದು ಎಂದು ಹೇಳಿದರು.

ಬ್ರಿಟನ್​ನಿಂದ ಬಂದು ಮತ ಚಲಾಯಿಸಿದ ಮಹಿಳೆ (ETV Bharat)

ಬ್ರಿಟನ್​ನಿಂದ ಬಂದು ಮತ ಚಲಾಯಿಸಿದ ಮಹಿಳೆ(ಉತ್ತರ ಕನ್ನಡ): ಮತ್ತೊಂದೆಡೆ, ಕಾರವಾರದಲ್ಲಿ ಮಹಿಳೆಯೊಬ್ಬರು ಬ್ರಿಟನ್‌ದಿಂದ ಆಗಮಿಸಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದ್ದಾರೆ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಮನೆ ಗ್ರಾಮದ ಸುಜಾತಾ ಗಾಂವ್ಕರ್​ ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಮತದಾನ ಇರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿ ಮಾವಿನ ಮನೆ ಗ್ರಾಮದ ಬಾಸಲ ಮತಗಟ್ಟೆಯಲ್ಲಿ ವೋಟ್​ ಹಾಕಿದ್ದಾರೆ.

ಮತದಾನದ ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಆಗಬೇಕಾದರೆ ಮತದಾನ ಮಾಡುವುದು ಅವಶ್ಯಕವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ನ್ಯಾಯ ಈ ಮೂರನ್ನು ಬಿಟ್ಟು ಯಾವುದನ್ನು ಉಚಿತ ಪಡೆಯಬಾರದು. ಉಳಿದ ಎಲ್ಲವನ್ನು ನಾವು ಗಳಿಸಬೇಕಾದರೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನದೇ ಆದ ಹೆಸರು ಮಾಡುತ್ತಿದೆ ಎಂದರು.

ಭಾರತವನ್ನು ಅಭಿವೃದ್ದಿ ಹೊಂದುತ್ತಿರುವ ದೇಶ ಎಂದು ಕರೆಯಲಾಗುತ್ತಿದೆ. ಭಾರತ ಆದಷ್ಟು ಬೇಗ ಅಭಿವೃದ್ದಿ ಹೊಂದಿದ ದೇಶ ಆಗಲಿ ಎಂಬುವುದು ನನ್ನ ಆಶಯ. ಮತದಾನ ಕೇವಲ ನಮ್ಮ ಹಕ್ಕು ಅಲ್ಲ, ಮತದಾನ ಮಾಡುವುದು ನಮ್ಮ ಕರ್ತವ್ಯ. ಹಕ್ಕು ಅಂತಾ ಭಾವಿಸಿ ಅನೇಕರು ಮತದಾನ ಮಾಡುತ್ತಿಲ್ಲ. ಆದರೆ ಹಕ್ಕು ಎನ್ನುವುದರ ಬದಲಾಗಿ ಕರ್ತವ್ಯ ಎಂಬುವುದನ್ನು ಅರಿತು ಮತದಾನ ಮಾಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ದಾವಣಗೆರೆ: ಸಖಿ ವಿಶೇಷ ಮತಗಟ್ಟೆಯಲ್ಲಿ ಮಂಗಳಮುಖಿಯರಿಂದ ಮತದಾನ - TRANSGENDERS VOTING

Last Updated : May 7, 2024, 10:11 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.