ETV Bharat / state

ಪಕ್ಕದ್ಮನೆ ದಂಪತಿಯ ಸರಸ ಸಲ್ಲಾಪದಿಂದ ಕಿರಿಕಿರಿ ಆರೋಪ: ಪೊಲೀಸರಿಗೆ ದೂರು ನೀಡಿದ ಮಹಿಳೆ - Girinagar Police station

ಪಕ್ಕದ ಮನೆಯ ದಂಪತಿಯಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸ್​ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ
ಪೊಲೀಸ್​ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ
author img

By ETV Bharat Karnataka Team

Published : Mar 20, 2024, 10:53 AM IST

Updated : Mar 20, 2024, 11:11 AM IST

ಬೆಂಗಳೂರು: ಪಕ್ಕದ ಮನೆಯಲ್ಲಿರುವ ಬಾಡಿಗೆದಾರ ದಂಪತಿಯ ಸರಸ ಸಲ್ಲಾಪದಿಂದ ಕಿರಿಕಿರಿಯಾಗುತ್ತಿದೆ ಎಂದು 44 ವರ್ಷದ ಮಹಿಳೆಯೊಬ್ಬರು ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರುದಾರ ಮಹಿಳೆ ಆವಲಹಳ್ಳಿಯ ಬಿಡಿಎ ಲೇಔಟ್​ನಲ್ಲಿ ವಾಸವಿದ್ದಾರೆ. ತನ್ನ ಮನೆ ಬಾಗಿಲಿಗೆ ಪಕ್ಕದ ಮನೆಯ ಬೆಡ್​ರೂಮ್​ ಹೊಂದಿಕೊಂಡಿದೆ. ಆ ಮನೆಯಲ್ಲಿ ವಾಸವಾಗಿರುವ ದಂಪತಿ ತಮ್ಮ ಬೆಡ್​ರೂಮ್ ಕಿಟಕಿ ತೆರೆದಿಟ್ಟು ಸರಸ ಸಲ್ಲಾಪದಲ್ಲಿ ತೊಡಗುವ ಮೂಲಕ ವಿಕೃತ ಮತ್ತು ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಬೆಡ್​ರೂಮ್​ ಕಿಟಕಿ ಮುಚ್ಚಿಕೊಳ್ಳುವಂತೆ ಮನವಿ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ತಮ್ಮ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕೆಲ ಯುವಕರನ್ನೂ ಕರೆಯಿಸಿ ನಮ್ಮ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆದ್ದರಿಂದ ನಮಗೆ ಮತ್ತು ಕುಟುಂಬದವರಿಗೆ ರಕ್ಷಣೆ ಒದಗಿಸಿ, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅವರು ಮನವಿ ಮಾಡಿದ್ದಾರೆ.

ಗಿರಿನಗರ ಠಾಣಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸರ್​ ನನ್ನ ಹೆಂಡ್ತಿ ನನಗೆ ಥಳಿಸುತ್ತಾಳೆ, ಆಕೆಯಿಂದ ನನ್ನನ್ನು ಕಾಪಾಡಿ: ಪೊಲೀಸರಿಗೆ ಮೊರೆ ಹೋದ ವೈದ್ಯ

Last Updated : Mar 20, 2024, 11:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.