ETV Bharat / state

ಮಂಗನ ಕಾಯಿಲೆಗೆ ಮೊದಲ ಬಲಿ: ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚಿದ ಆತಂಕ - ಸಿದ್ದಾಪುರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮಹಿಳೆ ಸಾವನ್ನಪ್ಪಿದ್ದಾರೆ.

ಮಂಗನ ಕಾಯಿಲೆ
ಮಂಗನ ಕಾಯಿಲೆ
author img

By ETV Bharat Karnataka Team

Published : Feb 22, 2024, 10:38 AM IST

ಶಿರಸಿ: ಮಲೆನಾಡಿನ ಭಾಗದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಮಂಗನ ಕಾಯಿಲೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಸಾವಾಗಿದೆ. ಸಿದ್ದಾಪುರದ ಜಿಡ್ಡಿಯ 65 ವರ್ಷದ ಮಹಿಳೆ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.

ಮಂಗನ ಕಾಯಿಲೆಯ ಹಾಟ್ ಸ್ಪಾಟ್ ಆಗಿ ಸಿದ್ದಾಪುರ ಮಾರ್ಪಾಡಾಗಿದೆ. ಶಿವಮೊಗ್ಗ, ಸಿದ್ದಾಪುರ ಭಾಗದಲ್ಲಿ ಮಂಗಲ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದು ಮಲೆನಾಡಿನಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಇದೇ ಕಾಯಿಲೆಯಿಂದ ಮಹಿಳೆಯೊಬ್ಬಳು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 43 ಪಕ್ಷರಣ ಪತ್ತೆ: ಇಲ್ಲಿಯವರೆಗೆ ಜಿಲ್ಲೆಯಲ್ಲಿ 43 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಎಲ್ಲ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲೇ ಪತ್ತೆಯಾಗಿರುವುದು ಈ ಭಾಗದ ಜನರು ಕಂಗಾಲಾಗಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಲಸಿಕೆಯನ್ನ ಬಂದ್ ಮಾಡಲಾಗಿತ್ತು. ಯಾವುದೇ ಪರ್ಯಾಯ ಲಸಿಕೆಯನ್ನು ಸರ್ಕಾರ ಸೂಚಿಸಿರಲಿಲ್ಲ. ಇದರಿಂದ ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ಉಂಟಾಗಿದೆ.

ಇನ್ನು ಮಂಗನ ಕಾಯಿಲೆ ಕುರಿತಂತೆ ಹಲವು ಸಭೆಗಳು ನಡೆದಿದ್ದರೂ ಯಾವುದೇ ಲಸಿಕೆ ಮಾತ್ರ ಜನರಿಗೆ ಲಭ್ಯವಾಗಿಲ್ಲ. ಒಂದೆಡೆ ಮಂಗನ ಕಾಯಿಲೆ ಏರುತ್ತಲೇ ಇದ್ದು, ಲಸಿಕೆಯೂ ಇಲ್ಲದೇ ಜನರು ಪರದಾಡುವಂತಾಗಿದೆ.‌

ಇದನ್ನೂ ಓದಿ: ಏನಿದು ಮಂಗನ ಕಾಯಿಲೆ? ಎಲ್ಲೆಲ್ಲಿ ಹರಡುತ್ತಿದೆ? ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಯಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.