ETV Bharat / state

ಯುವ ದಸರಾ: ದಿಗ್ಗಜ ಕಲಾವಿದರಿಂದ ಸಂಗೀತ ಸುಧೆ; ಹಾಲು ಕರೆಯುವ ಸ್ಪರ್ಧೆ ಗೆದ್ದವರಿಗೆ ₹1 ಲಕ್ಷ ಬಹುಮಾನ! - Yuva Dasara 2024 - YUVA DASARA 2024

ಯುವ ದಸರಾ ಸಂಗೀತ ರಸಸಂಜೆಯಲ್ಲಿ ಸಂಗೀತ ಕ್ಷೇತ್ರದ ದಿಗ್ಗಜ ಕಲಾವಿದರಾದ ಇಳಿಯರಾಜ, ಎ.ಆರ್.ರೆಹಮಾನ್ ಮತ್ತು ಶ್ರೇಯಾ ಘೋಷಾಲ್ ಸೇರಿದಂತೆ ಹಲವರು ಸಂಗೀತ ಸುಧೆ ಹರಿಸಲಿದ್ದಾರೆ.

ಯುವ ದಸರಾ ರಸಸಂಜೆ ಮತ್ತು ಹಾಲು ಕರೆಯುವ ಸ್ಪರ್ಧೆಯ ಪೋಸ್ಟರ್
ಯುವ ದಸರಾ ರಸಸಂಜೆ ಮತ್ತು ಹಾಲು ಕರೆಯುವ ಸ್ಪರ್ಧೆಯ ಪೋಸ್ಟರ್ ಬಿಡುಗಡೆ (ETV Bharat)
author img

By ETV Bharat Karnataka Team

Published : Sep 26, 2024, 8:46 AM IST

ಮೈಸೂರು: ಈ ಬಾರಿಯ ಯುವ ದಸರಾದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಎ.ಆರ್.ರೆಹಮಾನ್ ಸಂಗೀತದ ಮೋಡಿಯೊಂದಿಗೆ ಶ್ರೇಯಾ ಘೋಷಾಲ್ ಅವರ ಸುಮಧುರ ಗಾಯನ ಕೇಳಬಹುದು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವೂ ಇದೆ. ಇದರ ಜೊತೆಗೆ, ಇದೇ ಮೊದಲ ಬಾರಿಗೆ ಟಿಕೆಟ್ ಆಧರಿತ ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ.

ಯುವ ದಸರಾ ಸಮಿತಿಯಿಂದ ಅ.6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.6ರಂದು ಅಶ್ವಿನಿ ಪುನೀತ್ ರಾಜ್‌ಕುಮರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಲ್ಕು ದಿನಗಳ ಕಾಲ ಸಂಜೆ 6ರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮಗಳ ಪಟ್ಟಿ: ಅಕ್ಟೋಬರ್ 6ರಂದು ಬಾಲಿವುಡ್‌ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಅ.7ರಂದು ಸಂಗೀತ ಸಂಯೋಜಕ ರವಿ ಬಸ್ರೂರು, ಅ.8ರಂದು ಖ್ಯಾತ ರಾಪರ್ ಬಾದ್ ಷಾ, ಅ.9ರಂದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಅ.10ರಂದು ಸಂಗೀತ ಸಂಯೋಜಕ, ನಿರ್ದೇಶಕ ಇಳಯರಾಜ ಮತ್ತು ಅವರ ತಂಡ ಪ್ರೇಕ್ಷಕರಿಗೆ ಸಂಗೀತ ರಸಸಂಜೆ ಉಣಬಡಿಸಲಿದ್ದಾರೆ.

ಯುವ ದಸರಾ ಕಾರ್ಯಕ್ರಮಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸುಮಾರು ಒಂದು ಲಕ್ಷ ಜನ ವೀಕ್ಷಿಸಬಹುದಾಗಿದೆ. ಅಲ್ಲದೇ, ವೀಕ್ಷಣೆಗೆ ಟಿಕೆಟ್ ಆಧರಿತ ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ಮಾಡಲಾಗುತ್ತಿದ್ದು, ಆಸನ ಕಾಯ್ದಿರಿಸಲು ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಧಿಕೃತ ಜಾಲತಾಣ www.mysoredasara.gov.in ಹಾಗೂ ಬುಕ್ ಮೈ ಶೋ ಮೂಲಕ ಸೆ.27ರಿಂದ ಟಿಕೆಟ್ ಖರೀದಿಸಬಹುದು.

ಟಿಕೆಟ್ ದರ: ಕಾರ್ಯಕ್ರಮ ವೀಕ್ಷಕರಿಗೆ ಕಾಯ್ದಿರಿಸಲಾಗುವ ವೀಕ್ಷಕರ ಗ್ಯಾಲರಿ-1ರ ವೇದಿಕೆ ಸಮೀಪದ ಟಿಕೆಟ್ ಬೆಲೆ ₹8,000 ಹಾಗೂ ವೀಕ್ಷಕರ ಗ್ಯಾಲರಿ-2 ಕ್ಕೆ ₹5,000 ನಿಗದಿಪಡಿಸಲಾಗಿದೆ. ಒಂದು ಟಿಕೆಟ್‌ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ.

ಯುವ ದಸರ ಕಾರ್ಯಕ್ರಮ ಉತ್ತನಹಳ್ಳಿಗೆ ಸ್ಥಳಾಂತರ: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರತೀ ವರ್ಷವೂ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮವನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸುವ ದೃಷ್ಟಿಯಿಂದ ಲಲಿತಾದ್ರಿಪುರ ಮತ್ತು ಉತ್ತನಹಳ್ಳಿ ನಡುವಿನ ಖಾಲಿ ಜಮೀನಿನಲ್ಲಿ ಆಯೋಜಿಸಲಾಗುತ್ತಿದೆ. ಸುಮಾರು 100 ಎಕರೆಯಷ್ಟು ಕೃಷಿ ಭೂಮಿಯನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದ್ದು, 1 ಲಕ್ಷ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

ಮೈಸೂರು ದಸರಾ 2024ರ ಅಂಗವಾಗಿ ರೈತ ದಸರಾ ಉಪ ಸಮಿತಿ ಹೊರತಂದಿರುವ ಶ್ವಾನ ಪ್ರದರ್ಶನ ಹಾಗೂ ಅಧಿಕ ಹಾಲು ಕರೆಯುವ ಸ್ಪರ್ಧೆಗಳ ಪೋಸ್ಟರ್​ಗಳನ್ನು ಪಶು ಸಂಗೋಪಾನೆ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಅವರು ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಬಿಡುಗಡೆ ಮಾಡಿದರು. ಜೆ.ಕೆ.ಮೈದಾನದಲ್ಲಿ ಅ.6 ಮತ್ತು 7ರಂದು ಕಾರ್ಯಕ್ರಮ ನಡೆಯಲಿದ್ದು, ರಾಸುಗಳ ಹಾಗೂ ಸಾಕು ಪ್ರಾಣಿಗಳ ಜೊತೆ ಭಾಗವಹಿಸಿ ಅತ್ಯಾಕರ್ಷಕ ಬಹುಮಾನ ಪಡೆಯುವಂತೆ ಕೋರಿದರು.

ಅ.6ರಂದು ಹಾಲು ಕರೆಯುವ ಸ್ಪರ್ಧೆ: ಹಾಲು ಕರೆಯುವ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ 1 ಲಕ್ಷ ರೂ., ದ್ವಿತೀಯ ಬಹುಮಾನ 80 ಸಾವಿರ ರೂ., ತೃತೀಯ 60 ಸಾವಿರ, ನಾಲ್ಕನೇ ಬಹುಮಾನ 40 ಸಾವಿರ ರೂ. ನಿಗದಿಗೊಳಿಸಲಾಗಿದೆ. ಅ.6ರಂದು ಶ್ವಾನ, ಮುದ್ದು ನಾಯಿಗಳ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ: ರಾಜ ಪಾರಂಪರೆಯ ಪ್ರತೀಕ ದಸರಾ ಕುಸ್ತಿ ಹೇಗೆ ನಡೆಯುತ್ತೆ ಗೊತ್ತಾ?: ಇಲ್ಲಿವೆ ಕುತೂಹಲಕಾರಿ ಮಾಹಿತಿಗಳು - Dasara wrestling

ETV Bharat Logo

Copyright © 2025 Ushodaya Enterprises Pvt. Ltd., All Rights Reserved.