ETV Bharat / state

ಕಾರವಾರ: ಮೊಬೈಲ್​ ಬಿಟ್ಟು ಕೆಸರು ಗದ್ದೆಯಲ್ಲಿ ಮಿಂದೆದ್ದ ಮಂದಿ - mud pit game - MUD PIT GAME

ಕಾರವಾರದಲ್ಲಿ ನಿನ್ನೆ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸಂಭ್ರಮಿಸಿದ್ದಾರೆ.

ಕೆಸರು ಗದ್ದೆ
ಕೆಸರು ಗದ್ದೆ (ETV Bharat)
author img

By ETV Bharat Karnataka Team

Published : Jul 31, 2024, 12:53 PM IST

ಮೊಬೈಲ್​ ಬಿಟ್ಟು ಕೆಸರು ಗದ್ದೆಯಲ್ಲಿ ಮಿಂದೆದ್ದ ಮಂದಿ (ETV Bharat)

ಕಾರವಾರ: ಮೊಬೈಲ್​ಗೆ ಜೋತುಬಿದ್ದು ಅಂಗಳಕ್ಕೆ ಇಳಿಯುವುದಕ್ಕೂ ಹಿಂದೆಮುಂದೆ ನೋಡುವ ಜನಗಳ ನಡುವೆ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟವೊಂದರಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು, ಮಕ್ಕಳು ಪಾಲ್ಗೊಂಡು ಕೆಸರಿನಲ್ಲಿ ಮಿಂದೆದ್ದು ಗಮನ ಸೆಳೆದರು.

ಗ್ರಾಮೀಣ ಕ್ರೀಡೆಯನ್ನು ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇರವಡಿ, ದೇವಳಮಕ್ಕಿ, ವೈಲವಾಡ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಮಂಗಳವಾರ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ನೂರಾರು ಜನರು ಆಟವಾಡಿ ಸಂಭ್ರಮಿಸಿದರು. ಕಾರವಾರದಲ್ಲಿ ಈ ಹಿಂದೆ ಕೃಷಿ ಚಟುವಟಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿ ಕೃಷಿ ಭೂಮಿಗಳು ಬರಡಾಗತೊಡಗಿದ್ದವು. ಆದರೆ ಇದೀಗ ಒಂದಿಷ್ಟು ಯುವಕರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.

ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಜನ; ಗೋವಾ ಸೇರಿದಂತೆ ವಿವಿಧೆಡೆ ಉದ್ಯೋಗದಲ್ಲಿದ್ದವರು ಮನೆಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಂತಹ ಯುವ ಉತ್ಸಾಹಿ ಯುವಕರು ಇದೀಗ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮಸ್ಥರನ್ನು ಕೃಷಿಯತ್ತ ಹುರಿದುಂಬಿಸಿದ್ದಾರೆ. ಕ್ರೀಡೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓಟ ಮತ್ತು ಚಮಚ-ಲಿಂಬೆಹಣ್ಣು ನಡಿಗೆ ಸ್ವರ್ಧೆ, ಪುರುಷರಿಗೆ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು.

ಪುರುಷರ ಕ್ರೀಡೆಯಲ್ಲಿ ನಿವಳಿ ತಂಡ ಚಾಂಪಿಯನ್​: ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶ್ರೀ ಬ್ರಹ್ಮದೇವ ನಾಯ್ತಿವಾಡದ ದೀಪಕ್​ ಹಳದೀಪುರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ರನ್ನರ್ ಆಫ್ ಆಗಿ ದೇವಳಮಕ್ಕಿ ಬಾಯ್ಸ್ ವಿಜಯ ಸಾಧಿಸಿದರು. ವಾಲಿಬಾಲ್‌ ಕ್ರೀಡೆಯಲ್ಲಿ ನಿವಳಿ ಗ್ರಾಮದ ತಂಡ ಸತತವಾಗಿ ಮೂರನೇ ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ. ರನ್ನರ ಆಫ್ ಶ್ರೀ ನಾರಾಯಣ ತಂಡ ಕೋವೆ ತಂಡ ಪಡೆದುಕೊಂಡಿತು.

ಕ್ರೀಡಾಕೂಟದ ವೇದಿಕೆ ಕಾರ್ಯಕ್ರಮದಲ್ಲಿ ದೇವಳಮಕ್ಕಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವನಶ್ರೀ ಕುಲಕರ್ಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಗೌಡ, ಸದಸ್ಯರಾದ ಪ್ರತಿಕ್ಷಾ ವೈಂಗಣಕರ, ಗ್ರಾಮಸ್ಥರಾದ ದೇವಿದಾಸ ದೇಸಾಯಿ, ಮರಿ ಗೌಡ, ಮೋಹನ ಕಾಣಕೂಣಕರ, ಶಿವಾನಂದ ಕಾಣಕೂಣಕರ, ರೂಪೇಶ್​ ನಾಯ್ಕ, ಕೃಷ್ಣಾನಂದ ಕೊಳಂಬಕರ, ಮಂಜುನಾಥ ಕೊಳಂಬಕರ ಹಾಗೂ ಕೆಸರುಗದ್ದೆ ಕ್ರೀಡಾಕೂಟದ ಆಯೋಜಕ ಸದಸ್ಯರು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಹಾಲ್ನೊರೆಯಂತೆ ಹರಿದ ಭದ್ರೆಯ ನೋಡಲು ಕಣ್ಣೆರಡು ಸಾಲದು! ಪ್ರವಾಸಿಗರು ಪುಳಕ - Bhadra Dam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.