ETV Bharat / state

ತಲವಾರ್​ ಹಿಡಿದು ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ಸೇಡಂ ಪೊಲೀಸರಿಂದ ಬರ್ತಡೇ ಬಾಯ್ ಬಂಧನ​ - A man arrested - A MAN ARRESTED

ತಲವಾರ್​ ಹಿಡಿದು ಕೇಕ್​​​ ಕತ್ತರಿಸಿ ಡ್ಯಾನ್ಸ್​ ಮಾಡುತ್ತಾ ಬರ್ತ್​ಡೇ ಆಚರಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯನ್ನು ಸೇಡಂ ಪೊಲೀಸರು ಬಂಧಿಸಿದ್ದಾರೆ.

ತಲವಾರ್​ ಹಿಡಿದು ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಣೆ

author img

By ETV Bharat Karnataka Team

Published : Apr 5, 2024, 10:42 AM IST

ಕಲಬುರಗಿ: ತಲವಾರ್​ ಹಿಡಿದುಕೊಂಡ ಡ್ಯಾನ್ಸ್​​​ ಮಾಡುತ್ತಾ ಕೇಕ್​​​ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ವ್ಯಕ್ತಿಯನ್ನು ಸೇಡಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸೇಡಂನ ಇಂದಿರಾನಗರದ ನಿವಾಸಿ ರಾಮು ಅಲಿಯಾಸ್​ ರಮೇಶ ಇಂಜಳ್ಳಿಕರ್​ ಎಂಬಾತ ಜನ್ಮದಿನದಂದು ತಲವಾರ್​ವೊಂದನ್ನು ಹಿಡಿದುಕೊಂಡು‌ ಡ್ಯಾನ್ಸ್​​ ‌ಮಾಡಿ‌ ಕೇಕ್ ಕತ್ತರಿಸುವ ವಿಡಿಯೋ ಮಾಡಿದ್ದಲ್ಲದೇ, ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸೇಡಂ ಠಾಣೆಯ ಪೊಲೀಸರು ಯುವಕನ ಮೇಲೆ ಪ್ರಕರಣ ದಾಖಲಿಸಿ ತಲವಾರ್​​​ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಸ್ಐ ತಿರುಮಲೇಶ ಹಾಗೂ ಅವರ ಸೋಷಿಯಲ್​ ಮೀಡಿಯಾ ಮಾನಿಟರಿಂಗ್ ತಂಡ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುವ ಮಾಹಿತಿ ಪಡೆಯುತ್ತಾರೆ. ತಕ್ಷಣ ಎಸ್ಪಿ‌ ಅಕ್ಷಯ್​ ಹಾಕೆ, ಹೆಚ್ಚುವರಿ ಎಸ್​​​​ಪಿ ಎನ್​. ಶ್ರೀನಿಧಿ, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಯುವಕನನ್ನು ವಿಚಾರಿಸಿ ಆತನ ತಪ್ಪೊಪ್ಪಿಗೆಯ ನಂತರ ಆತನಿಂದ ತಲವಾರ್​ ಮಾದರಿಯ ಮಾರಾಕಾಸ್ತ್ರವನ್ನು ವಶಕ್ಕೆ ಪಡೆದುಕೊಂಡು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾದ್ಯಂತ ಖಾಕಿ‌ ಪಡೆಯ‌ ಹದ್ದಿನ ಕಣ್ಣು: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪಿಸ್ತೂಲ್​​, ತಲವಾರ್​​, ಕತ್ತಿ ಸೇರಿದಂತೆ ಇನ್ನಿತರ ಮಾರಕಾಸ್ತ್ರಗಳು ಹಿಡಿದು ಕೇಕ್​ ಕತ್ತಿರಿಸುವ, ತಲವಾರ್​​ಗಳನ್ನು ಹಿಡಿದುಕೊಂಡು ಬಹಿರಂಗವಾಗಿ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ‌ ವಿಡಿಯೋ ಹರಿಬಿಟ್ಟು ಹವಾ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸೇಡಂ ಸೇರಿದಂತೆ ಪ್ರತಿಯೊಂದು ಠಾಣೆಯಲ್ಲಿಯೂ ಪೊಲೀಸರು ಎಸ್ಪಿ ಅಕ್ಷಯ್​ ಹಾಕೆಯವರ ಸೂಚನೆ ಮೇರೆಗೆ ವಿಶೇಷವಾದ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೇಲ್​ನ ಇಬ್ಬರು ಸಿಬ್ಬಂದಿಯ ತಂಡವನ್ನು ರಚಿಸಿದ್ದಾರೆ. ಈ ಮೂಲಕ ಯುವಕರ ಸಾಮಾಜಿಕ ಜಾಲತಣಗಳ ಮೇಲೆ ನಿಗಾ ವಹಿಸಲಾಗುತ್ತಿದೆ.

ಹೀಗಾಗಿ ಸೇಡಂ ತಾಲೂಕಿನಲ್ಲಿನ ಯವಕರು ಸೇರಿದಂತೆ ಪ್ರತಿಯೊಬ್ಬರು ಕೂಡ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ‌ ಮುಂದಾಗಬೇಡಿ‌ ಎಂದು ಮನವಿ ಮಾಡಿದ್ದಾರೆ. ಒಂದು‌ ವೇಳೆ ಪೊಲೀಸರ‌ ಮನವಿಗೂ ಖ್ಯಾರೇ ಎನ್ನದೇ ಮತ್ತದೇ ಚಾಳಿ ಮುಂದುವರೆಸಿದರೆ ಪ್ರಕರಣ ದಾಖಲಿಸಿ ಕ್ರಮತೆಗೆದುಕೊಳ್ಳಲಾಗುವುದು ಎಂದು ಪಿಎಸ್ಐ ತಿರುಮಲೇಶ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 55 ವರ್ಷದ ಮಹಿಳೆ ಮೇಲೆ ಆತ್ಯಾಚಾರವೆಸಗಿ ಹತ್ಯೆ: 19 ವರ್ಷದ ಯುವಕನ ಬಂಧನ - RAPE AND MURDER CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.