ETV Bharat / state

ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಹೋಟೆಲ್​​ ಕಾರ್ಮಿಕನ ಮೇಲೆ ಹಲ್ಲೆ ಆರೋಪ

ಸಂಬಳದ ಹಣ ಕೇಳಿದ ಹೋಟೆಲ್‌ ಕಾರ್ಮಿಕನಿಗೆ ಮನಸೋಯಿಚ್ಛೆ ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

a-hotel-worker assaulted-for-asking-salary-in-chikkamagaluru
ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಹೋಟೆಲ್​​ ಕಾರ್ಮಿಕನಿಗೆ ಹಲ್ಲೆ ಆರೋಪ
author img

By ETV Bharat Karnataka Team

Published : Feb 4, 2024, 5:45 PM IST

ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ಹೋಟೆಲ್‌ ಕಾರ್ಮಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೊಪ್ಪ ತಾಲೂಕಿನ ಸೋಮಲಾಪುರದಲ್ಲಿ ನಡೆದಿದೆ. ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕನಾಗಿದ್ದಾನೆ.

ಸತೀಶ್‌ ಬೆಂಗಳೂರಿನ ಕೊಪ್ಪ ಮೂಲದ ಮಂಜು ಎಂಬುವರ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಸಂಬಳದ ವಿಚಾರವಾಗಿ ಗಲಾಟೆಯಾಗಿದ್ದರಿಂದ ಕೆಲಸ ಬಿಟ್ಟು ಸತೀಶ್‌ ವಾಪಸ್‌ ಊರಿಗೆ ಬಂದಿದ್ದ. ಈ ನಡುವೆ ಕೆಲಸ ಮಾಡಿದ ಹಣವನ್ನು ಕೇಳಲು ಹೋಟೆಲ್‌ ಮಾಲೀಕ ಮಂಜುಗೆ ಫೋನ್ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಮಂಜು ಸಹೋದರ ಹಣ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಾರೆ. ಬಳಿಕ ಬೈಕ್‌ನಲ್ಲಿ ಕರೆದೊಯ್ದು ಮಂಜು ಸಹೋದರನ ನಾಲ್ಕೈದು ಸ್ನೇಹಿತರು ಬಟ್ಟೆ ಬಿಚ್ಚಿಸಿ ಸತೀಶ್‌ನನ್ನು ಮರಕ್ಕೆ ಕಟ್ಟಿಹಾಕಿ ಕಬ್ಬಿಣದ ರಾಡ್‌, ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಕೊಪ್ಪದ ದ್ಯಾವೇಗೌಡ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ವಿಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಸಂಬಂಧ ಮಹೇಶ್, ವಿಠ್ಠಲ್, ಸಿರಿಲ್, ಸುನೀಲ್, ಸುನೀಲ್ ಕಟ್ಟೆಹಕ್ಲು, ಮಂಜು ಎಂಬುವವರ ವಿರುದ್ಧ ಸತೀಶ್ ದೂರು ನೀಡಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿರುವ ಸತೀಶ್ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಾಯಿ ಸಾಕುವ ವಿಚಾರಕ್ಕೆ ಕೈ ಕೈ ಮಿಲಾಯಿಸಿದ ಮನೆ ಮಾಲೀಕರು - ಬಾಡಿಗೆದಾರ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.