ETV Bharat / state

ಧಾರವಾಡದಲ್ಲಿ ಸದ್ದು ಮಾಡಿದ ರೈತನ ಬಾರುಕೋಲು; ಬರಿಗಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅನ್ನದಾತ - A FARMER FILES NOMINATION

ಧಾರವಾಡ ಲೋಕಸಭಾ ಕ್ಷೇತ್ರ ಸಹ ಈ ಬಾರಿ ಹೆಚ್ಚು ಸದ್ದು ಮಾಡುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಕಾಂಗ್ರೆಸ್​ನಿಂದ ವಿನೋದ್, ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ರೈತರೊಬ್ಬರ ಸ್ಪರ್ಧೆಯಿಂದ ಚುನಾವಣಾ ಕಣ ರಂಗೇರಿದೆ.

A FARMER FILES NOMINATION
ರೈತನಿಂದ ನಾಮಪತ್ರ ಸಲ್ಲಿಕೆ
author img

By ETV Bharat Karnataka Team

Published : Apr 18, 2024, 2:20 PM IST

Updated : Apr 18, 2024, 4:57 PM IST

ಧಾರವಾಡದಲ್ಲಿ ಸದ್ದು ಮಾಡಿದ ರೈತನ ಬಾರುಕೋಲು; ಬರಿಗಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅನ್ನದಾತ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ, ಕಾಂಗ್ರೆಸ್​ನಿಂದ ವಿನೋದ ಅಸೂಟಿ ಅಖಾಡಕ್ಕಿಳಿದಿದ್ದಾರೆ. ಇನ್ನು, ತಮಗೆ ಎಲ್ಲಾ ಜಾತಿ, ಧರ್ಮದವರು, ರೈತ ಸಂಘಟನೆಗಳ ಬೆಂಬಲ ಇದೆ ಎನ್ನುತ್ತಿರುವ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎನ್ನುತ್ತಿರುವಾಗಲೇ ಜಿಲ್ಲೆಯ ರೈತ ಮುಖಂಡರೊಬ್ಬರು ಗಮನ ಸೆಳೆದಿದ್ದಾರೆ.

ಹೌದು, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈ ರೈತ ಮುಖಂಡ ವಿನೂತನವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಮೂಲಕ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದ ರೈತ ಮಲ್ಲಿಕಾರ್ಜುನ ಬಾಳನಗೌಡ ಬಾರುಕೋಲು ಬೀಸುತ್ತ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಾರುಕೋಲು ಹಿಡಿದು ಬರಗಾಲಿನಲ್ಲಿ ಬಂದಿದ್ದ ರೈತ ಬಾಳನಗೌಡ ಅವರು ರೈತರ ಪ್ರತಿನಿಧಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.

ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಬರಿಗಾಲಿನಲ್ಲೇ ಪಾದಯಾತ್ರೆ: ಉಳವಿ ಬಸವೇಶ್ವರ ದೇವಸ್ಥಾನದಿಂದ ಡಿಸಿ ಕಚೇರಿವರೆಗೆ ಬರಿಗಾಲಿನ ಪಾದಯಾತ್ರೆ ಮೂಲಕ ಆಗಮಿಸಿದ ರೈತ ಮಲ್ಲಿಕಾರ್ಜುನ ಬಾಳನಗೌಡ ಬಾರುಕೋಲಿನಿಂದ ಛಾಟಿ ಬೀಸುತ್ತ ನಗರದಲ್ಲಿ ಸದ್ದು ಮಾಡಿದರು.

ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ: ನಾಮಪತ್ರ ಸಲ್ಲಿಸಲು ಡಿಸಿ ಕಚೇರಿ ಒಳಗೆ ಹೋಗುವ ಮುಂಚೆ ಮಾತನಾಡಿದ ರೈತ ಮಲ್ಲಿಕಾರ್ಜುನ ಬಾಳನಗೌಡ, ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ಸಿಗುತ್ತಿಲ್ಲಾ, ಬರದಿಂದ ತತ್ತರಿಸಿರುವ ರೈತರ ಸಾಲಮನ್ನಾ ಆಗುತ್ತಿಲ್ಲ, ಅನ್ನದಾತರಿಗೆ ಪ್ರೋತ್ಸಾಹ ಸಿಗುತ್ತಿಲ್ಲಾ ಎಂದು ಆರೋಪಿಸಿದರು.

ಎಂಟು ಲಕ್ಷ ಮತಗಳು ಬರುವ ವಿಶ್ವಾಸ; ಈ ಬಾರಿ ತನಗೆ ಎಂಟು ಲಕ್ಷ ಮತಗಳು ಬರುತ್ತವೆ ಎಂದು ರೈತ ಮಲ್ಲಿಕಾರ್ಜುನ ಅವರು ವಿಶ್ವಾಸ ವ್ಯಕ್ತಪಡಿಸಿದರು. ಹೀಗಾಗಿ ರೈತರೆಲ್ಲರೂ ತನಗೆ ಬೆಂಬಲ ನೀಡುವುದರೊಂದಿಗೆ ಮತ ಹಾಕುವಂತೆ ಬಾರುಕೋಲು ಬೀಸುವ ಮೂಲಕ ಅವರು ಮನವಿ ಮಾಡಿದರು.

ಇದನ್ನೂ ಓದಿ: ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಪಾರ್ಟಿ ತೊರೆದಿದ್ದೇನೆ: ಸಂಗಣ್ಣ ಕರಡಿ - Sanganna Karadi

Last Updated : Apr 18, 2024, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.