ETV Bharat / state

ಮರಿ ಹಾಕಿ ಬಿಟ್ಟೋದ ಮಂಗವನ್ನು ಸಾಕಿದ ಕುಟುಂಬ; ಈಗ ಈ 'ಹನುಮಂತ'ನೇ ಇವರ ಮನೆ ಮಗ

ಹಾವೇರಿಯ ಕುಟುಂಬವೊಂದು ಕಾಡುಮಂಗದ ಮರಿಯನ್ನು ಸಾಕಿ ಹನುಮಂತ ಎಂದು ನಾಮಕರಣ ಮಾಡಿದ್ದಾರೆ. ಈ ಹನುಮಂತ ಸಿಕ್ಕಿದ್ದು ಹೇಗೆ, ಬೆಳೆಸಿದ್ದು ಹೇಗೆ?.. ಇಲ್ಲಿದೆ ನೋಡಿ ಪೂರ್ತಿ ಸ್ಟೋರಿ

author img

By ETV Bharat Karnataka Team

Published : Mar 5, 2024, 2:47 PM IST

haveri
ಹನುಮಂತನ ಜೊತೆ ಮಾಲೀಕ
a-family-rearing-a-wild-monkey-at-haveri

ಹಾವೇರಿ: ಮನುಷ್ಯಪ್ರಾಣಿ ಸಂಘರ್ಷದ ಮಧ್ಯೆ ಕಾಡು ಪ್ರಾಣಿಯೊಂದು ಮಾನವರ ಜೊತೆ ಮನೆಯ ಸದಸ್ಯನಂತೆ ವಾಸಿಸುತ್ತಿರುವ ಸುಂದರ ದೃಶ್ಯ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಕಾಕೋಳದಲ್ಲಿ ಬೆಳಕಿಗೆ ಬಂದಿದೆ.

ಕಾಕೋಳ ಗ್ರಾಮದ ಪ್ರಭುಗೌಡ ಕಲ್ಲನಗೌಡ್ರ ಮನೆಯಲ್ಲಿ ಕಾಡು ಮಂಗವೊಂದು ವಾಸಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಪ್ರಭುಗೌಡರ ಮನೆಯಲ್ಲಿ ವಾಸಿಸುತ್ತಿರುವ ಮಂಗ ಮನೆಯ ಸದಸ್ಯನಂತಾಗಿದೆ. ಮೂರು ವರ್ಷಗಳ ಹಿಂದೆ ಕಾಡುಮಂಗಗಳು ಹಿಂಡು ಬಂದಿತ್ತು. ಅದರಲ್ಲಿ ಹೆಣ್ಣಮಂಗವೊಂದು ಮರಿಗೆ ಜನ್ಮನೀಡಿ ಅವಧಿ ತುಂಬಿರದ ಕಾರಣ ತಾಯಿ ಮಂಗ ಮರಿ ಬಿಟ್ಟು ಹೋಗಿತ್ತು. ಆವಾಗ ಸಮೀಪದಲ್ಲಿದ್ದ ನಾನು ಮತ್ತು ನನ್ನ ಮಗ ಈ ಮರಿ ತಂದು ಪೋಷಣೆ ಮಾಡಿದೆವು. ಎರಡು ಮೂರು ದಿನಗಳ ಕಾಲ ಕಣ್ಣುಬಿಡದ ಮರಿ ನಂತರ ಆರೋಗ್ಯ ಪೂರ್ಣವಾಯಿತು. ಅಂದಿನಿಂದ ನಮ್ಮನ್ನು ಹಚ್ಚಿಕೊಂಡ ಮಂಗ ಮನೆ ಬಿಟ್ಟು ಹೋಗಲಿಲ್ಲ. ಈಗ ಈ ಮಂಗ ನಮ್ಮ ಮನೆಯ ಸದಸ್ಯನಂತಾಗಿದ್ದು, ಇದಕ್ಕೆ ಹನುಮಂತ ಎಂದು ಹೆಸರು ಇಟ್ಟಿದ್ದೇವೆ ಎನ್ನುತ್ತಾರೆ ಪ್ರಭುಗೌಡ.

ಆರಂಭದಲ್ಲಿ ಹಣ್ಣು ಸೇವಿಸುತ್ತಿದ್ದ ಮಂಗ: ಇನ್ನು ಆರಂಭದಲ್ಲಿ ಸೇಬುಹಣ್ಣು ಹಾಲು ಸೇವಿಸುತ್ತಿದ್ದ ಹನುಮಂತ ಈಗ ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ಸೇವಿಸುತ್ತಿದೆ. ಮಂಗ ನೋಡಿದ ಹಲವರು ಇವರಿಗೆ ಅರಣ್ಯ ಇಲಾಖೆಗೆ ಅಥವಾ ಮಂಗಗಳ ಗುಂಪಿಗೆ ಬಿಡುವಂತೆ ಸೂಚಿಸಿದ್ದಾರೆ. ಆದರೆ ಹನುಮಂತ ಮಾತ್ರ ಮಂಗಗಳ ಹಿಂಡು ಸೇರದೇ ಮನೆಗೆ ಮರಳುತ್ತಿದೆ. ಕಾಕೋಳದ ತಮ್ಮ ಮನೆಯ ಓಣಿಯಲ್ಲಿ ಚಿಕ್ಕಮಕ್ಕಳು ಸೇರಿದಂತೆ ಹಲವರು ಇದರ ಸ್ನೇಹಿತರಾಗಿದ್ದಾರೆ. ಅವರನ್ನು ನೋಡಿದ ತಕ್ಷಣ ಹೋಗಿ ಆಟವಾಡುತ್ತದೆ ಎಂದು ಮಾಲೀಕರು ಸಂತಸ ವ್ಯಕ್ತಪಡಿಸುತ್ತಾರೆ.

ಹನುಮಂತನಿಗೆ ಮನೆಯವರು ಹೇಗೆ ಮನೆಯ ಮಕ್ಕಳಿಗೆ ಉಡುಪು ತರುವಂತೆ ಹನುಮಂತನಿಗೂ ಉಡಪುಗಳನ್ನು ತಂದು ನಿತ್ಯ ಒಂದೊಂದು ಹಾಕುತ್ತಾರೆ. ಅಲ್ಲದೇ ದಿನವೂ ಶಾಂಪು ಹಾಕಿ ಸ್ನಾನ ಮಾಡಿಸಿ ರೆಡಿ ಮಾಡುತ್ತಾರೆ. ಮದುವೆ ಬೇರೆ ಮನೆಗಳಲ್ಲಿ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹನುಮಂತನಿಗೆ ಅಚ್ಚುಮೆಚ್ಚು. ಇಂತಹ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆ ಆಗುವ ಈತ ತನ್ನ ತುಂಟಾಟದಿಂದ ಎಲ್ಲರ ಗಮನ ಸೆಳೆಯುತ್ತಾನೆ.

ಹಾಗೇ ಪ್ರಭುಗೌಡ ಕಲ್ಲನಗೌಡ್ರರಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಬೇರೆಯವರು ಮುಟ್ಟಲು ಈ ಮಂಗ ಬಿಡುವುದಿಲ್ಲ. ಪ್ರಭುಗೌಡ ಸುಮ್ಮನಿರು ಎಂದರೆ ಮಾತ್ರ ಸುಮ್ಮನಿರುತ್ತದೆ. ಇಲ್ಲದಿದ್ದರೆ ಗುರ್ರ ಗುರ್ರ ಎಂದು ಹೆದರಿಸುತ್ತೆ. ಹನುಮಂತ ಸಿಕ್ಕ ದಿನವನ್ನು ಪ್ರತಿವರ್ಷ
ಜನ್ಮದಿನವಾಗಿ ಆಚರಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಹನುಮಂತನ ಅಭಿಮಾನಿಗಳ ಸಂಖ್ಯೆ ಅಧಿಕವಾಗುತ್ತಿದೆಯಂತೆ.

ಮಂಗನಿಗೆ ನಾಯಿಗಳು ಕಚ್ಚಿದರೆ ಅಥವಾ ಮಂಗ ಮನುಷ್ಯರಿಗೆ ಕಚ್ಚಿದರೆ ಯಾವುದೇ ಖಾಯಿಲೆಗಳು ಬರದಂತೆ ಮುಂಜಾಗೃತವಾಗಿ
ವಿವಿಧ ಚುಚ್ಚಮುದ್ದು ಹಾಕಿಸಲಾಗಿದೆ. ಹೀಗಾಗಿ ಮನೆಯ ಮಂದಿಯಲ್ಲದೇ ಓಣಿಯ ಜನರು ಸಹ ಮಂಗನ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಒಂದು ದಿನ ಮಂಗ ಕಾಣಲಿಲ್ಲ ಎಂದರೆ ಸಾಕು ಬೇಸರ ವ್ಯಕ್ತಪಡಿಸುತ್ತಾರೆ. ಅರಣ್ಯಾಧಿಕಾರಿಗಳು ಕೇಳಿದರೂ ಕೊಡುವ ಮನಸ್ಸು ನಮಗಿಲ್ಲ ಎಂದು ಪ್ರಭುಗೌಡ ತಮ್ಮ ಪ್ರತೀ ಒಡನಾಟವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೇಕೆ ಮರಿಗೆ ಹಾಲುಣಿಸುತ್ತಿರುವ ಶ್ವಾನ: ಅಪರೂಪದ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.