ETV Bharat / state

ಬೆಂಗಳೂರು: ಆಕಸ್ಮಿಕವಾಗಿ ತಂದೆಯ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು - car accident - CAR ACCIDENT

ತಂದೆಯೇ ಚಲಾಯಿಸುತ್ತಿದ್ದ ಕಾರು ಹರಿದು ಮಗು ಸಾವನ್ನಪ್ಪಿದ ಘಟನೆ ಹೆಚ್​ಎಸ್​ಆರ್‌ ಲೇಔಟ್​​ನ ಆಗರದಲ್ಲಿ ನಡೆದಿದೆ.

ಬೆಂಗಳೂರು: ತಂದೆಯ ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

author img

By ETV Bharat Karnataka Team

Published : Apr 23, 2024, 3:26 PM IST

Updated : Apr 23, 2024, 4:22 PM IST

ಬೆಂಗಳೂರು: ತಂದೆಯ ಕಾರು ಆಕಸ್ಮಿಕವಾಗಿ ಹರಿದು ಮಗು ಮೃತಪಟ್ಟ ಘಟನೆ ಏ.21ರ ರಾತ್ರಿ ಹೆಚ್​ಎಸ್​ಆರ್‌ ಲೇಔಟ್​ನ ಆಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಂದೂವರೆ ವರ್ಷ ವಯಸ್ಸಿನ ಶೈಜಾ ಜನ್ನತ್ ಮೃತ ಮಗು.

ಸಂಬಂಧಿಕರ ಮದುವೆಗೆಂದು ಚನ್ನಪಟ್ಟಣಕ್ಕೆ ತೆರಳಿದ್ದ ಕುಟುಂಬ ರಾತ್ರಿ 11:30ರ ಸುಮಾರಿಗೆ ಮನೆಗೆ ವಾಪಸಾಗಿತ್ತು. ಕಾರಿನಿಂದ ಎಲ್ಲರೂ ಇಳಿದ ಬಳಿಕ ಬೇರೆಡೆ ಪಾರ್ಕ್ ಮಾಡಲು ಮಗುವಿನ ತಂದೆ ಮುಂದಾಗಿದ್ದರು. ಈ ವೇಳೆ ತಮ್ಮ ಹಿಂದೆಯೇ ಓಡಿ ಬಂದು ಡೋರ್ ಬಳಿ ನಿಂತಿದ್ದ ಮಗುವನ್ನ ಗಮನಿಸದೆ ತಂದೆ ಕಾರ್ ಚಲಾಯಿಸಿದ್ದರು. ಪರಿಣಾಮ ಕಾರು ಹರಿದು ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಹೆಚ್ಎಸ್ಆರ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಯಚೂರು: ಹನುಮಾನ್​ ಜಯಂತಿಗೆ ನೀರು ತರುವಾಗ ಬೊಲೆರೋ ಹರಿದು ಮೂವರು ಸಾವು - Raichur accident

Last Updated : Apr 23, 2024, 4:22 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.