ETV Bharat / state

ಬ್ಯಾಂಕ್ ಕ್ಯಾಷಿಯರ್​ನಿಂದಲೇ ಗ್ರಾಹಕರಿಗೆ ಪಂಗನಾಮ: 26 ಲಕ್ಷ ಹಣ ಖಾತೆಗೆ ಜಮೆ ಮಾಡದ ಆರೋಪ - FIR Against Bank Cashier - FIR AGAINST BANK CASHIER

ಗ್ರಾಹಕರು ನೀಡಿದ್ದ ಹಣವನ್ನು ಖಾತೆಗಳಿಗೆ ಜಮೆ ಮಾಡದೇ ಎಸ್​ಬಿಐ ಕ್ಯಾಷಿಯರ್​ 26 ಲಕ್ಷ ರೂ. ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.

ಬ್ಯಾಂಕ್ ಕ್ಯಾಷೀಯರ್​ನಿಂದಲೇ ಗ್ರಾಹಕರಿಗೆ ಪಂಗನಾಮ

author img

By ETV Bharat Karnataka Team

Published : Mar 23, 2024, 1:58 PM IST

Updated : Mar 25, 2024, 4:19 PM IST

ಚಾಮರಾಜನಗರ: ಗ್ರಾಹಕರು ತಮ್ಮ‌ ಖಾತೆಗಳಿಗೆ ಕಟ್ಟಿದ್ದ ಹಣವನ್ನು ಜಮೆ ಮಾಡದೇ ಲಕ್ಷಾಂತರ ರೂ. ಹಣ ಗುಳುಂ ಮಾಡಿರುವ ಆರೋಪ ಪ್ರಕರಣ ಚಾಮರಾಜನಗರ ತಾಲೂಕಿನ‌ ಸಂತೇಮರಹಳ್ಳಿ ಎಸ್​ಬಿಐ ಬ್ಯಾಂಕ್​ನಲ್ಲಿ ನಡೆದಿದೆ.

ಸಂತೇಮರಹಳ್ಳಿ ಶಾಖೆಯ ಎಸ್​ಬಿಐ ಬ್ಯಾಂಕ್​ನ‌ ಕ್ಯಾಷ್​ ಆಫೀಸರ್ ಮನೋರಂಜನ್ ಮುರ್ಮು ಎಂಬಾತ ಸ್ವಸಹಾಯ ಸಂಘಗಳ ಸಾಲ‌ ಮರುಪಾವತಿ ಹಣವನ್ನು ಜಮೆ ಮಾಡದೇ ಗುಳುಂ‌ ಮಾಡಿರುವ ಆರೋಪಿ. ಬರೋಬ್ಬರಿ 26,15,920 ರೂ. ಹಣವನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾನೆ ಎಂದು ಬ್ಯಾಂಕ್ ವ್ಯವಸ್ಥಾಪಕರು ದೂರು ಕೊಟ್ಟಿದ್ದಾರೆ. ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿ ಕೆಲವು ಸ್ವ-ಸಹಾಯ ಸಂಘಗಳು ಸಾಲ ಪಡೆದು ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಹಣವನ್ನು ಖಾತೆಗಳಿಗೆ ಜಮೆ ಮಾಡದೇ ಕೌಂಟರ್ ಚಲನ್​ ಅನ್ನು ಗ್ರಾಹಕರಿಗೆ ಕೊಟ್ಟು ಯಾಮಾರಿಸಿದ್ದಾನೆ ಎಂದು ದೂರು ಕೊಡಲಾಗಿದೆ. ಈ ಸಂಬಂಧ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರಲ್ಲಿ ಆರು ಜನ ರೌಡಿಗಳು ಪತ್ತೆ - arms license

Last Updated : Mar 25, 2024, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.