ETV Bharat / state

ದಾವಣಗೆರೆಯಲ್ಲಿ ಮಳೆ ಅಬ್ಬರಕ್ಕೆ 93 ಭಾಗಶಃ, 12 ಮನೆಗಳು ಸಂಪೂರ್ಣ ಹಾನಿ: ಡಿಸಿ ಮಾಹಿತಿ - RAIN DAMAGES

''ಜಿಲ್ಲೆಯಲ್ಲಿ ಪ್ರವಾಹಕ್ಕೀಡಾಗುವ ಒಟ್ಟು 9 ಸ್ಥಳಗಳನ್ನು ಗುರುತಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಾದರೆ, ಜನರನ್ನು ರಕ್ಷಣೆ ಮಾಡಲು ಈಗಾಗಲೇ ಕಾಳಜಿ ಕೇಂದ್ರ ಆರಂಭಿಸಲಾಗಿದೆ'' ಎಂದು ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ.ಎಂ. ತಿಳಿಸಿದರು.

houses completely damaged  heavy rain  Davanagere
ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ.ಎಂ. (ETV Bharat)
author img

By ETV Bharat Karnataka Team

Published : Jul 24, 2024, 12:54 PM IST

ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ.ಎಂ. ಮಾತನಾಡಿದರು. (ETV Bharat)

ದಾವಣಗೆರೆ: ''ಜಿಲ್ಲೆಯಲ್ಲಿ ಪ್ರವಾಹಕ್ಕೀಡಾಗುವ ಒಟ್ಟು 9 ಸ್ಥಳಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾದರೆ, ಜನರನ್ನು ರಕ್ಷಣೆ ಮಾಡಲು ಈಗಾಗಲೇ ಕಾಳಜಿ ಕೇಂದ್ರ ತೆರೆದಿದ್ದೇವೆ'' ಎಂದು ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ.ಎಂ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ''ಪಿಡಿಒಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜನೆ ಮಾಡಲಾಗಿದೆ. ಭಾರೀ ಮಳೆಗೆ 93 ಮನೆಗಳು ಭಾಗಶಃ ಹಾನಿಯಾದರೆ, 12 ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಮನೆಗಳ ಹಾನಿ ವರದಿ ನೀಡಲು ಆಯಾ ತಹಶೀಲ್ದಾರ್​ಗಳಿಗೆ ಸೂಚಿಸಿದ್ದೇವೆ. ಭಾಗಶಃ ಹಾನಿಯಾಗಿರುವ ಮನೆಗಳಿಗೆ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಅಡಿಯಲ್ಲಿ ₹1.20 ಲಕ್ಷ ಹಣ ಸರ್ಕಾರ ನೀಡಲಿದೆ. ಇನ್ನು ತೀವ್ರವಾಗಿ ಹಾನಿಯಾಗಿರುವ ಮನೆಗಳಿಗೆ ಡಿಬಿಟಿ ಮೂಲಕ ಪರಿಹಾರ ನೀಡಲಾಗುವುದು. ಸಾಕಷ್ಟು ಬೆಳೆ ಹಾನಿಯಾಗಿದೆ. ಹೊನ್ನಾಳಿಯಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ತಹಶೀಲ್ದಾರ್, ವಿಲೇಜ್​ ಅಕೌಂಟೆಂಟ್​ ಮೂಲಕ ಮಾಹಿತಿ ಪಡೆದು ರೈತರಿಗೆ ಪರಿಹಾರ ನೀಡಲು ಕ್ರಮ ವಹಿಸಿದ್ದೇವೆ'' ಎಂದರು.

''ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬರ ನಿರ್ವಹಣೆ ಮಾಡಲು ಹಣದ ಬರವಿಲ್ಲ. ನಮ್ಮ ಪಿಡಿ ಖಾತೆಗಳಲ್ಲಿ 17 ಕೋಟಿ, ತಹಶೀಲ್ದಾರ್, ಜಿಲ್ಲಾಧಿಕಾರಿ ಖಾತೆಗಳಲ್ಲಿ 16.50 ಕೋಟಿ ಹಣ ಇದೆ. ಸರ್ಕಾರದಿಂದ ಅಂಗನವಾಡಿ, ಶಾಲೆಗಳು ಸೋರುವುದು‌ ಸಮಸ್ಯೆಯಿದ್ದರೆ, ಎಸ್ ಡಿಆರ್​ಎಫ್, ಎನ್​ಡಿಆರ್​ಎಫ್ ಅಡಿ ಸರಿಪಡಿಸಲು ಸೂಚನೆ ಇದೆ. ಶಾಲೆಗಳು, ಅಂಗನವಾಡಿ ಕೇಂದ್ರಗಳು ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿ ಪಡೆಯಲಾಗುವುದು. ಅವುಗಳನ್ನು ಸರಿಪಡಿಸಲು ಮುಂದಾಗುತ್ತೇವೆ'' ಎಂದು ತಿಳಿಸಿದರು.

ವಿಪತ್ತು ‌ನಿರ್ವಹಣೆಗೆ ಎಸ್​ಡಿಆರ್​ಎಫ್ ತಂಡ ಸನ್ನದ್ಧ: ವಿಪತ್ತು ‌ನಿರ್ವಹಣೆಗೆ ಎಸ್​ಡಿಆರ್​ಎಫ್ ತಂಡ ಸನ್ನದ್ಧವಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ರಾಘವೇಂದ್ರ ಮಠದ ತಟದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಎಸ್​ಡಿಆರ್​ಎಫ್ ತಂಡದಿಂದ ಪ್ರಾತ್ಯಕ್ಷಿಕೆ ನಡೆಯಿತು. ಎಸ್​ಡಿಆರ್​ಎಫ್ ತಂಡಕ್ಕೆ ಅವಶ್ಯಕತೆ ಇರುವ ಪ್ರವಾಹದ ಸಲಕರಣೆಗಳು ಸುಸ್ಥಿತಿಯಲ್ಲಿ ಇವೆಯೇ ಎಂದು ಖಾತ್ರಿ ಪಡಿಸಿಕೊಳ್ಳಲು ತುಂಗಭದ್ರಾ ನದಿಯಲ್ಲಿ ತಂಡವು ಅಣಕು ಪ್ರದರ್ಶನ ನಡೆಸಿತು.

ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ ಎಂ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಎಸ್​ಡಿಆರ್​ಎಫ್ ತಂಡದ ಬಳಿ ಇರುವ ಸಲಕರಣೆಗಳು, ಪ್ರವಾಹದ ವೇಳೆ ಬಳಕೆ ಆಗುವ ವಸ್ತುಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ತಮ್ಮಲ್ಲಿ ಯಾವೆಲ್ಲ ಸಲಕರಣೆಗಳು, ವಸ್ತುಗಳಿವೆ ಎನ್ನುವ ಬಗ್ಗೆ ತಂಡದಿಂದ ಡಿಸಿಗೆ ಮಾಹಿತಿ ನೀಡಿತು. ದಾವಣಗೆರೆ, ಹರಿಹರ, ಹೊನ್ನಾಳಿ ಒಂದೊಂದು ಬೋಟ್ ಮತ್ತು ಒಬಿಎಂ ಸಿದ್ಧಪಡಿಸಿಕೊಳ್ಳಲಾಗಿದೆ. ಪ್ರವಾಹವನ್ನು ಎದುರಿಸಲು ಎಸ್​ಡಿಆರ್​ಎಫ್ ತಂಡ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರವಾಹವನ್ನು ಎದುರಿಸಲು ಸನ್ನದ್ಧವಾಗಿದ್ದೇವೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

"ಎಸ್​ಡಿಆರ್​ಎಫ್ ತಂಡದಿಂದ ಹೊನ್ನಾಳಿಯಲ್ಲಿ ಅಣಕು ಪ್ರದರ್ಶನ ಜರುಗಿತು. ಭದ್ರಾ ಜಲಾಶಯದಿಂದ ನೀರು ಹರಿಸಿದರೆ ಪ್ರವಾಹ ಎದುರಾಗಬಹುದು. ಇದರಿಂದ ನಾವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನದಿ ಪಾತ್ರದಲ್ಲಿ ರೀಲ್ಸ್ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ'' ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವ ಮುನ್ನ ಅನುಮತಿ ಕಡ್ಡಾಯ: ಹೊನ್ನಾಳಿಯಲ್ಲಿ ವಿಪತ್ತು ನಿರ್ವಹಣೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿ ಎಂ ಅವರು, ''ವಿಪತ್ತು ನಿರ್ವಹಣೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಅಧಿಕಾರಿಗಳು ಜಿಲ್ಲೆಯ ಕೇಂದ್ರ ಸ್ಥಾನ ಬಿಡುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ಪಿಡಿಒಗಳು ಸಿಇಒ ಸುರೇಶ್ ಬಿ. ಇಟ್ನಾಳ್ ಅವರ ಅನುಮತಿ ಪಡೆಯಬೇಕು'' ಎಂದರು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: 'ನಮ್ಮ ಕೆಲಸಕ್ಕೆ ಕೇರಳದವರು ಅಡ್ಡಿ ಮಾಡಬೇಡಿ'- ಶಾಸಕ ಸೈಲ್ ಮನವಿ - Shiruru Hill Collapse Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.