ಶಿವಮೊಗ್ಗ: ಸೊರಬ ತಾಲೂಕು ಕೊಡಕಣಿ ಗ್ರಾಮದ ಕರಿಯಪ್ಪ ಹೊಸಮನೆ ಎಂಬವರ ಜಮೀನಲ್ಲಿ 8 ಕೆ.ಜಿ ತೂಕದ ಗೆಣಸು ದೊರೆತಿದೆ. ಕರಿಯಪ್ಪ ತಮ್ಮ ಜಮೀನಲ್ಲಿ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಈ ತರಕಾರಿಗಳ ನಡುವೆ ಗೆಣಸಿನ ಬಳ್ಳಿಯನ್ನೂ ಹಾಕಿದ್ದರು. ಬುಧವಾರ ಗೆಣಸು ಕೀಳುವಾಗ ಅಚ್ಚರಿ ಎಂಬಂತೆ ಭಾರಿ ಗಾತ್ರದ ಗೆಣಸು ಸಿಕ್ಕಿದೆ.
"ಸಾಮಾನ್ಯವಾಗಿ ಗೆಣಸು ಅಬ್ಬಬ್ಬಾ ಅಂದ್ರೆ 3 ಕೆ.ಜಿ ತೂಕ ಬರುತ್ತದೆ. ಇಷ್ಟು ದೊಡ್ಡ ಗೆಣಸು ಸಿಕ್ಕಿರುವುದು ಇದೇ ಮೊದಲು ಇರಬೇಕು. ಪ್ರತಿಸಲ ತರಕಾರಿ ಗೆಣಸು ಬೆಳೆಯುವಂತೆ ಈ ಬಾರಿಯೂ ಗೆಣಸಿನ ಬಳ್ಳಿ ಹಾಕಿದ್ದೆವು" ಎಂದು ಕರಿಯಪ್ಪ ಹೇಳಿದರು.
ಇದನ್ನೂ ಓದಿ: ಬರೋಬ್ಬರಿ 5 ಕೆ.ಜಿ ತೂಕದ ನಿಂಬೆಹಣ್ಣು ಬೆಳೆದ ರೈತ- ವಿಡಿಯೋ