ETV Bharat / state

ಮಂಗಳೂರು: ಕಟೀಲು ದೇಗುಲದಲ್ಲಿ 72 ಜೋಡಿ ಸರಳ ವಿವಾಹ - Kateel Temple - KATEEL TEMPLE

ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಸರಳ ವಿವಾಹ ಕಾರ್ಯಕ್ರಮ ನಡೆಯಿತು.

ಕಟೀಲು ದೇಗುಲದಲ್ಲಿ 72 ವಧು-ವರ ಜೋಡಿಯ ಸರಳ ವಿವಾಹ

author img

By ETV Bharat Karnataka Team

Published : Apr 29, 2024, 4:19 PM IST

ಮಂಗಳೂರು(ದಕ್ಷಿಣ ಕನ್ನಡ): ಇಲ್ಲಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಭಾನುವಾರ 72 ಜೋಡಿ ಸರಳ ವಿವಾಹವಾದರು. ಕೊರೊನಾ ಬಳಿಕ ಮೊದಲ ಬಾರಿಗೆ ದೇವಸ್ಥಾನದಲ್ಲಿ ಗರಿಷ್ಠ ಸಂಖ್ಯೆಯ ಸರಳ ವಿವಾಹ ಕಾರ್ಯಕ್ರಮ ಬೆಳಗಿನಿಂದ ಮಧ್ಯಾಹ್ನದವರೆಗೆ ಜರುಗಿತು.

ಸರಳ ವಿವಾಹವೆಂದರೆ ಸಾಮೂಹಿಕ ವಿವಾಹವಲ್ಲ, ಮದುವೆ ಕಾರ್ಯಕ್ರಮವನ್ನು ಕಟೀಲು ದೇಗುಲದಲ್ಲಿ ನಡೆಸಿ ಆರತಕ್ಷತೆಯನ್ನು ಬೇರೆಡೆ ನಡೆಸಲಾಗುತ್ತದೆ.

ಭಾನುವಾರವಾದ ಕಾರಣ ಕ್ಷೇತ್ರಕ್ಕೆ ಎಂದಿನಂತೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರು, ವಧು-ವರರ ಸಂಬಂಧಿಕರು, ದಿಬ್ಬಣಿಗರಿಂದ ಸರಸ್ವತಿ ಸದನ, ದೇಗುಲದ ಒಳಾಂಗಣ, ಹೊರಾಂಗಣಗಳಲ್ಲಿ ಜನಸಂದಣಿ ಹೆಚ್ಚಿತ್ತು.

ಸಂಚಾರ ದಟ್ಟಣೆ: ಎಕ್ಕಾರಿನಲ್ಲಿರುವ ಕಟೀಲು ದ್ವಾರದಿಂದ ಕಟೀಲು ರಥಬೀದಿವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಕಟೀಲು ಸೇತುವೆ ಬಳಿಯಿಂದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಏರ್‌ಪೋರ್ಟ್ ಹಾಗೂ ತುರ್ತು ಅವಶ್ಯಕತೆಗೆ ತೆರಳುವವರು ಟ್ರಾಫಿಕ್ ಸಂಕಷ್ಟ ಎದುರಿಸಿದರು.

ಇದನ್ನೂಓದಿ: ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಇಡೀ ರಾಷ್ಟ್ರವೇ ಆತಂಕದಲ್ಲಿದೆ: ಪ್ರಧಾನಿ ಮೋದಿ - PM Modi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.