ETV Bharat / state

ದರ್ಶನ್ ತಂಡದಿಂದ 70 ಲಕ್ಷ ರೂ. ಜಪ್ತಿ: ಐಟಿ, ಇನ್​​ಸ್ಟಾಗ್ರಾಮ್​ಗೆ ಪತ್ರ ಬರೆದ ಪೊಲೀಸರು - 70 lakhs detained from Darshan Team - 70 LAKHS DETAINED FROM DARSHAN TEAM

ದರ್ಶನ್ ತಂಡದಿಂದ 70 ಲಕ್ಷ ರೂಪಾಯಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಜಪ್ತಿ ಮಾಡಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರು ಐಟಿಗೆ ಪತ್ರ ಬರೆದಿದ್ದಾರೆ.

Darshan
ನಟ ದರ್ಶನ್ (ETV Bharat)
author img

By ETV Bharat Karnataka Team

Published : Jun 26, 2024, 2:28 PM IST

ಬೆಂಗಳೂರು: ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಹತ್ಯೆಯನ್ನು ಮರೆಮಾಚಲು ಸಹ ಆರೋಪಿಗಳಿಗೆ ನೀಡಲಾಗಿದ್ದ 70 ಲಕ್ಷ ರೂಪಾಯಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು.‌ ದೊಡ್ಡ ಮಟ್ಟದಲ್ಲಿ ನಗದು ಪತ್ತೆಯಾಗಿದ್ದರಿಂದ ಐಟಿಗೆ ಪತ್ರ ಬರೆದಿದ್ದಾರೆ. ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.

ಜೂನ್ 8ರಂದು ರೇಣುಕಾಸ್ವಾಮಿ ಹತ್ಯೆ ಬಳಿಕ ರಾಘವೇಂದ್ರ ಅಂಡ್ ಟೀಮ್​​ನೊಂದಿಗೆ ದರ್ಶನ್​​​ 30 ಲಕ್ಷ ರೂಪಾಯಿಯ ಡೀಲ್ ಮಾಡಿಕೊಂಡಿದ್ದರು. ನಂತರ ಹೆಚ್ಚುವರಿಯಾಗಿ ಪರಿಚಯಸ್ಥ ಮೋಹನ್ ರಾಜ್ ಎಂಬುವರಿಂದ 40 ಲಕ್ಷ ರೂ. ಪಡೆದಿದ್ದರು. ಹೀಗೆ, ಪ್ರಕರಣವನ್ನು ಮರೆಮಾಚಲು ಯತ್ನಿಸಿದ್ದರು ಎಂಬುದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದರು. ಆರೋಪಿಗಳಿಂದ 70 ಲಕ್ಷ ರೂ. ಹಣವನ್ನು ಸೀಜ್‌ ಮಾಡಿಕೊಂಡ ಬಳಿಕ ಇದೀಗ ಐಟಿ ಇಲಾಖೆಗೆ ಪತ್ರ ಬರೆದು ಹಣದ ಮೂಲದ‌ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದ ನಟ ದರ್ಶನ್​​ಗೆ ಐಟಿ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.

ಕಾನೂನು ಪ್ರಕಾರ, ಓರ್ವ ವ್ಯಕ್ತಿ 10 ಲಕ್ಷ ರೂ.ಗಿಂತ ಹೆಚ್ಚು ನಗದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. 10 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟುಕೊಂಡರೆ ಅದಕ್ಕೆ ಸೂಕ್ತ ಪುರಾವೆ ಒದಗಿಸಬೇಕು. ದಾಖಲಾತಿ ನೀಡದಿದ್ದರೆ ಅಥವಾ ಹಣದ ಮೂಲದ ಬಗ್ಗೆ ಸ್ಪಷ್ಟವಾಗಿ ತಿಳಿಸದಿದ್ದರೆ ತೆರಿಗೆ ನಿಯಮ ಉಲ್ಲಂಘನೆಯಾಗುತ್ತದೆ.‌ ಆದಾಯ ತೆರಿಗೆ ಕಾಯ್ದೆಯಡಿ ನಿಗದಿತ ದಂಡ ಪಾವತಿಸಬೇಕಾಗುತ್ತದೆ. ಆರೋಪಿಗಳಿಗೆ ದರ್ಶನ್ ನೀಡಿದ್ದ 30 ಲಕ್ಷ ರೂ. ಹಾಗೂ ಮೋಹನ್ ರಾಜ್ ಎಂಬಾತನಿಂದ ದರ್ಶನ್ ಪಡೆದಿದ್ದ 40 ಲಕ್ಷ ರೂ. ಹಣದ ನೈಜ ಮೂಲ ತೋರಿಸದಿದ್ದರೆ ತೆರಿಗೆ ಜೊತೆಗೆ ದಂಡ ಕಟ್ಟಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೆಡ್​​ನಲ್ಲಿ ಕೆಲಸ ಮಾಡುವವರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು: ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರಿಂದ ಸಾಕ್ಷಿದಾರರಾಗಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತೆ ಕೆಲವರು ಸಿಆರ್​ಪಿಸಿ 164ರ ಅಡಿ ನ್ಯಾಯಾಲಯದ ಎದುರು ಹೇಳಿಕೆ ನೀಡಿದ್ದಾರೆ. ಪಟ್ಟಣಗೆರೆ ಶೆಡ್​ನಲ್ಲಿ‌ ಕೆಲಸ ಮಾಡುತ್ತಿದ್ದ ಕೆಲಸಗಾರರಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ.‌ ಕೃತ್ಯ ನಡೆಯುವಾಗ ಇವರೆಲ್ಲ ಎಲ್ಲಿ‌ ಇದ್ದರು? ಕೃತ್ಯ ನಡೆದಿದ್ದು ಇವರ ಗಮನಕ್ಕೆ‌ ಬಂದಿತ್ತಾ? ಎಂಬುದು ಸೇರಿದಂತೆ ಕೆಲ ಮಾಹಿತಿಗಳನ್ನು ಹೇಳಿಕೆ ರೂಪದಲ್ಲಿ ಪೊಲೀಸರು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ತನಿಖೆ ಪೂರ್ಣಗೊಂಡ ಬಳಿಕ ಪೆನ್​​​ಡ್ರೈವ್ ಹಂಚಿದವರು ಯಾರೆಂದು ತಿಳಿಯಲಿದೆ: ಸಚಿವ ಪರಮೇಶ್ವರ್ - G Parameshwar

ಇನ್​​ಸ್ಟಾಗ್ರಾಮ್​​ಗೆ ಪತ್ರ ಬರೆದ ಪೊಲೀಸರು: ಮೃತನ ಮೊಬೈಲ್ ನಾಶವಾಗಿದ್ದು, ಆತ ಬಳಸುತ್ತಿದ್ದ ಸಿಮ್ ಸರ್ವೀಸ್ ಪ್ರೊವೈಡರ್​ಗಳಿಂದ ಇನ್ನಷ್ಟೇ ಪಡೆಯಬೇಕಿದೆ. ಮತ್ತೊಂದೆಡೆ‌, ಆತನ ಇನ್​​ಸ್ಟಾಗ್ರಾಮ್ ಐಡಿಯಿಂದ‌ ಪವಿತ್ರಾಗೌಡಗೆ ಆಶ್ಲೀಲ ಮೆಸೇಜ್ ಮಾಡಿರುವ ಚಾಟ್​​ ಡೇಟಾವನ್ನು ರಿಟ್ರೀವ್ ಮಾಡಬೇಕಿದೆ.‌ ಹಾಗಾಗಿ, ಇನ್​​ಸ್ಟಾಗ್ರಾಮ್​ಗೆ ಪತ್ರ ಬರೆದ ಪೊಲೀಸರು, ರೇಣುಕಾಸ್ವಾಮಿ ಬಳಸುತ್ತಿದ್ದ ಇನ್​​ಸ್ಟಾಗ್ರಾಮ್​ನ ಸಂದೇಶದ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಿರ್ಮಾಪಕ ಉಮಾಪತಿ ಗೌಡ ಕುರಿತು ಅವಹೇಳನ ಆರೋಪ: ದರ್ಶನ್ ಅಭಿಮಾನಿಯ ಬಂಧನ - Darshan fan Arrest

ETV Bharat Logo

Copyright © 2025 Ushodaya Enterprises Pvt. Ltd., All Rights Reserved.