ETV Bharat / state

₹40 ಲಕ್ಷ ಕದ್ದು ಹೊರಡುವಷ್ಟರಲ್ಲಿ ಬಂದ ಮನೆ ಮಾಲೀಕ, ಮುಂದೇನಾಯ್ತು? - Bengaluru Robbery - BENGALURU ROBBERY

40 ಲಕ್ಷ ರೂ. ಕದ್ದು ಹೊರಡುವಷ್ಟರಲ್ಲಿ ಬಂದ ಮನೆ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬೆದರಿಸಿರುವ ಘಟನೆ ಸಹಕಾರನಗರದಲ್ಲಿ ನಡೆದಿದೆ.

Bengaluru Robbery
ಬೆಂಗಳೂರು ದರೋಡೆ
author img

By ETV Bharat Karnataka Team

Published : Apr 25, 2024, 8:20 AM IST

Updated : Apr 25, 2024, 10:06 AM IST

ಬೆಂಗಳೂರು: ಎಲ್ಲರ ಗಮನ ಲೋಕಸಭೆ ಚುನಾವಣೆಯತ್ತ ನೆಟ್ಟಿರುವಾಗಲೇ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆ ಮಾಲೀಕರಿಗೆ ಪಿಸ್ತೂಲ್ ತೋರಿಸಿ ಸುಮಾರು 40 ಲಕ್ಷ ರೂ. ಡರೋಡೆ ಮಾಡಿದ್ದಾರೆ. ಕೋಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

ಸಹಕಾರನಗರದಲ್ಲಿರುವ ಡಾ. ಉಮಾಶಂಕರ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಉಮಾಶಂಕರ್ ನಿನ್ನೆ‌ ಮನೆ‌ ಬಳಿ ತರಕಾರಿ ಖರೀದಿಸುವ ಸಲುವಾಗಿ ಗೇಟ್ ಲಾಕ್‌ ಮಾಡದೇ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ಮೂವರು ಮುಸುಕುಧಾರಿಗಳು‌ ರಾತ್ರಿ ಮನೆಗೆ ನುಗ್ಗಿದ್ದಾರೆ. ಬೀರು ಹೊಡೆದು ಸುಮಾರು 40 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ್ದಾರೆ. ಇನ್ನೇನು ಮನೆಯಿಂದ ಹೊರಡಬೇಕು ಎಂದು ಅಂದುಕೊಳ್ಳುವಷ್ಟರಲ್ಲೇ ಮನೆ ಮಾಲೀಕರು ಆಗಮಿಸಿದ್ದಾರೆ.

ಖದೀಮರನ್ನು ಕಂಡು ಭಯಭೀತಗೊಂಡಿದ್ದಾರೆ.‌ ಕೂಡಲೇ ಆ ಖದೀಮರು ಪಿಸ್ತೂಲ್ ತೋರಿಸಿ ಹೆದರಿಸಿ‌ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿತರಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಬಂದು ಕಳ್ಳತನ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕಳ್ಳತನ ಎಸಗಿರುವವರು ಉತ್ತರ ಭಾರತ ಮೂಲದವರು ಎಂಬುದು ಪತ್ತೆಯಾಗಿದೆ. ಕೆಂಪು ಬಣ್ಣದ ಕಾರಿನಲ್ಲಿ ಬಂದು ಕೃತ್ಯವೆಸಗಿದ್ದಾರೆ. ಸಂಜೆ ವೇಳೆ ಮನೆ ಮಾಲೀಕರು ಇಲ್ಲದಿರುವುದನ್ನು ಅರಿತುಕೊಂಡಿರುವ ಖದೀಮರು ಕೃತ್ಯವೆಸಗಲು ಸಾಕಷ್ಟು ಸಿದ್ಧತೆ ನಡೆಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಖದೀಮರ ಚಹರೆ ಅರಿಯಲು ಸಿಸಿಟಿವಿ ಕ್ಯಾಮರಾಗಳ ಮೊರೆಹೋಗಿರುವ ಪೊಲೀಸರು, ಈ ಹಿಂದೆಯೂ ಖದೀಮರು ಮನೆಗಳ್ಳತನ ಎಸಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿದ್ದ 40 ಲಕ್ಷ ರೂಪಾಯಿ ಹಣವನ್ನ ಮಗಳ‌ ಶುಲ್ಕ ಕಟ್ಟಲು ಇಟ್ಟುಕೊಂಡಿದ್ದಾಗಿ ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಸುರ್ಜೇವಾಲಾ ಆರೋಪ - Surjewala slams BJP

Last Updated : Apr 25, 2024, 10:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.